ಇಂದಿನ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಹೊಂದಬೇಕು ಶರಣಪ್ಪ ಎಸ್ ಡಿ
ಇಂದಿನ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಹೊಂದಬೇಕು ಶರಣಪ್ಪ ಎಸ್ ಡಿ
ಇಂದಿನ ಸ್ಪರ್ಧಾತ್ಮಕ ಮತ್ತು ಆಧುನಿಕ ತಂತ್ರಜ್ಞಾನ ಯುಗದಲ್ಲಿ ವಿದ್ಯಾರ್ಥಿಗಳು ಜೀವನ ನಿರ್ವಹಣಾ ಕೌಶಲ್ಯ ಜ್ಞಾನ ಹೊಂದಬೇಕು ಎಂದು ಕಲಬುರ್ಗಿಯ ಪೋಲಿಸ್ ಆಯುಕ್ತರಾದ ಶರಣಪ್ಪ ಎಸ್ ಡಿ ಹೇಳಿದರು.
ಅವರು ನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿದ್ಯಾರ್ಥಿ ಜೀವನದಲ್ಲಿರುವ ಯುವಜನತೆ ಮುಂದಿನ ಭವಿಷ್ಯದಲ್ಲಿ ಸಮರ್ಥ ಜೀವನ ರೂಪಿಸಿಕೊಳ್ಳಲು ಕೌಶಲ್ಯಜ್ಞಾನ ದಾರಿದೀಪವಾಗಲಿದೆ. ತಂತ್ರಜ್ಞಾನದ ಪ್ರಭಾವದಿಂದ ಮಾನವ ಎಲ್ಲವನ್ನೂ ಪಡೆದುಕೊಳ್ಳುವ ಹಠದಲ್ಲಿ ಜೀವನದ ಮೌಲ್ಯವನ್ನು ಮರೆಯುತ್ತಿ ರುವುದು ಅತ್ಯಂತ ವಿಷಾದನೀಯ ಎಂದು ಹೇಳಿದರು.
ವಿದ್ಯಾರ್ಥಿಗಳ ಹೆಚ್ಚು ಅಂಕ ಪಡೆಯುವುದೊಂದೆ ಮಾನದಂಡವಲ್ಲ ಅದರ ಜೋತೆ ಸ್ಪರ್ಧಾತ್ಮಕ ಮನೋಭಾವ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೋಳ್ಳಬೇಕು ಈ ಶಾಲೆಯ ಇಂತಹ ಒಳ್ಳೆಯ ಪರಿಸರದಲ್ಲಿ ವಿಧ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಕ್ರೈಂ ಗಳು ಹೆಚ್ಚು ಆಗುತ್ತಿದ್ದು ಜನರು ಜಾಗೃತರಾಗಿರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಮಾತನಾಡಿ ಪೋಲಿಸ್ ಆಯುಕ್ತರಾದ ಶರಣಪ್ಪ ಅವರು ನಮ್ಮ ಜಿಲ್ಲೆಯ ಹೆಮ್ಮೆಯ ಕುವರನಾಗಿದ್ದು ನಮ್ಮ ವಿದ್ಯಾರ್ಥಿಗಳು ಇಂತವರನ್ನು ಆದರ್ಶವಾಗಿ ಇಟ್ಟುಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ತೇರ್ಗಡೆ ಯಾಗಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಬೇಕು ಎಂದು ಹೇಳಿದರು.
ನಂತರ ವಿಧ್ಯಾರ್ಥಿಗಳಿಂದ ಭಾರತದ ವಿಶಿಷ್ಟ ಸಂಪ್ರದಾಯ ಸಂಸ್ಕೃತಿ ಬಿಂಬಿಸುವ ವಿವಿಧತೆಯಲ್ಲಿ ಏಕತೆ ಸಾರುವ ದೇಶದ ಎಲ್ಲ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯ ನೃತ್ಯ ಸಂಗೀತ ಪ್ರದರ್ಶನ ಎಲ್ಲರ ಮನ ತಣಿಸಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ವೀರಶೆಟ್ಟಿ ಖೇಣಿ, ಕಾರ್ಯದರ್ಶಿಗಳಾದ ಸುರೇಶ್ ಬುಲಬುಲೆ,ಖಜಾಂಚಿಗಳಾದ ಡಾ ಸಂಪತ್ ಕುಮಾರ್ ಲೋಯಾ, ಜಂಟಿ ಕಾರ್ಯದರ್ಶಿಗಳಾದ ಚಂದ್ರಶೇಖರ ರೆಡ್ಡಿ ಹಾಗೂ ಎಲ್ಲ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರಾದ ದೇವಸ್ಸಿ , ಉಪಪ್ರಾಚಾರ್ಯರು ಎಲ್ಲ ಸಿಬ್ಬಂದಿಗಳು ಉಪಸ್ಥಿತರಿದ್ದರು.