ಕನ್ನಡನಾಡು ಸಂಘದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ

ಕನ್ನಡನಾಡು ಸಂಘದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ

 ಕನ್ನಡನಾಡು ಸಂಘದ ಪ್ರಶಸ್ತಿ ಪ್ರದಾನ ಹಾಗೂ ಪುಸ್ತಕ ಲೋಕಾರ್ಪಣೆ ಸಮಾರಂಭ

ಕಲಬುರಗಿ, ಫೆ.17:ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಪ್ರತಿವರ್ಷ ನೀಡಲಾಗುವ ಡಾ. ಎಸ್.ಎಸ್. ಸಿದ್ದರಡ್ಡಿ ಸ್ಮರಣಾರ್ಥ “ಕನ್ನಡನಾಡು ಸಾಹಿತ್ಯ ಶ್ರೀ” ಪ್ರಶಸ್ತಿಯನ್ನು 2024ನೇ ಸಾಲಿಗೆ ಡಾ. ಎಸ್.ಎಂ. ಹಿರೇಮಠ ಅವರಿಗೆ ಪ್ರದಾನ ಮಾಡಲು ತೀರ್ಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಅಪ್ಪಾರಾವ ಅಕ್ಕೋಣೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭವು ಫೆಬ್ರವರಿ 22 ರಂದು ಮುಂಜಾನೆ 10 ಗಂಟೆಗೆ ಕಲಬುರಗಿಯ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಸಮಾರಂಭದಲ್ಲಿ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಪೂಜ್ಯ ಡಾ. ಮಾತೋಶ್ರೀ ದಾಕ್ಷಾಯಿಣಿ ಶರಣಬಸಪ್ಪ ಅಪ್ಪಾ ಅವರು ಪ್ರಶಸ್ತಿ ಪ್ರದಾನ ಮಾಡುವರು.

ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಚನ್ನಪ್ಪ ಕಟ್ಟಿ ಅವರು ಸಂಘವು 2025ನೇ ಸಾಲಿನಲ್ಲಿ ಪ್ರಕಟಿಸಿದ ಆರು ಕೃತಿಗಳನ್ನು ಲೋಕಾರ್ಪಣೆ ಮಾಡುವರು.

ಗುಲಬರ್ಗಾ ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ. ರಮೇಶ್ ಲಂಡನಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಅಪ್ಪಾರಾವ ಅಕ್ಕೋಣೆ ವಹಿಸುವರು.

ಪ್ರಶಸ್ತಿಗಳ ವಿವರ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಲೇಖಕರ ಉತ್ತಮ ಕೃತಿಗಳಿಗೆ ಪ್ರತಿವರ್ಷ “ಕನ್ನಡನಾಡು ಸಾಹಿತ್ಯಕೃತಿ” ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಯು ತಲಾ ₹5000 ನಗದು, ಫಲಕ ಹಾಗೂ ಪ್ರಮಾಣ ಪತ್ರವನ್ನು ಒಳಗೊಂಡಿದೆ.

2024ನೇ ಸಾಲಿನ ಪ್ರಶಸ್ತಿ ವಿಜೇತರು: ಮಹಿಳಾ ಸಾಹಿತ್ಯ ವಿಭಾಗ: ದಿಲ್ಲಿ ಶ್ರೀಮತಿ ಮಾಪಮ್ಮ ಶಂಭುಲಿಂಗ ಹೊಸಮನಿ ಸ್ಮರಣಾರ್ಥ “ಮಹಿಳೆಯರ ಬದುಕು ಮತ್ತು ಬವಣೆ”* ಕೃತಿಗೆ  ಪ್ರೊ. ಎಸ್ ಜಿ ಮೇಳಕುಂದಿ  ಸ್ಮರಣಾರ್ಥ ಸಾಹಿತ್ಯ ಕೃತಿ ಪ್ರಶಸ್ತಿಯನ್ನು ಶ್ರೀ ಪ್ರಭಾಕರ ಜೋಷಿಯವರ "ಕಾಲಗರ್ಭ" ಕವನ ಸಂಕಲನ ಕೃತಿಗೆ ನೀಡಲಾಗಿದೆ. ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮರಣಾರ್ಥ ಸಾಹಿತ್ಯ ಕೃತಿ ಪ್ರಶಸ್ತಿಯನ್ನು ಸಂಕೀರ್ಣ ವಿಭಾಗದಲ್ಲಿ " ಕಲ್ಯಾಣ ಕರ್ನಾಟಕದ ಪ್ರಾಗಿತಿಹಾಸ ಮತ್ತು ಅದಿಮ ಸಂಸ್ಕೃತಿ" ಕೃತಿಯ ಲೇಖಕರಾದ ಡಾ. ಶರಣಬಸಪ್ಪ ಕೊಲ್ಕಾರ ಅವರಿಗೆ ನೀಡಲಾಗಿದೆ. ಕಥಾ ಸಂಕಲನ ವಿಭಾಗದಲ್ಲಿ ಶ್ರೀಮತಿ ಶರಣಮ್ಮ ವೀರಭದ್ರಪ್ಪ ಅಕ್ಕೋಣಿ ಪ್ರಶಸ್ತಿಯನ್ನು ಡಾ. ಎಚ್.ಟಿ. ಪೋತೆಯವರ ಕೋಳಿಕಾಲಿಗೆ ಗೆಜ್ಜೆ" ಮತ್ತುಶ್ರೀ ಕಪಿಲ ಪಿ. ಹುಮ್ನಾಬಾದ ಅವರ ಬಣಮಿ" ಕಥಾಸಂಕಲನಕ್ಕೆ ಹಂಚಲಾಗಿದೆ ಕಾದಂಬರಿ ವಿಭಾಗದಲ್ಲಿ ಶ್ರೀ ರಾಜಶೇಖರ ಹಳೆಮನೆ ರಚಿಸಿದ "ಓಡಲಗೊಂಡವರು" ಕಾದಂಬರಿಗೆ ನೀಡಲಾಗಿದೆ.

ಪುಸ್ತಕ ಲೋಕಾರ್ಪಣೆ 2025ನೇ ಸಾಲಿನಲ್ಲಿ ಸಂಘ ಪ್ರಕಟಿಸಿದ ಆರು ಕೃತಿಗಳು ಸಮಾರಂಭದಲ್ಲಿ ಲೋಕಾರ್ಪಣೆಯಾಗಲಿವೆ. ಸಂಘವು ಇದುವರೆಗೆ 169 ಕನ್ನಡ ಪುಸ್ತಕಗಳನ್ನು ಪ್ರಕಟಿಸಿದ್ದು, ಹಲವಾರು ಕೃತಿಗಳು ಪ್ರಶಸ್ತಿ ಪಡೆದಿವೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪಠ್ಯಪುಸ್ತಕಗಳಾಗಿ ಅಂಗೀಕರಿಸಲಾಗಿದೆ.

 ಸಂಘದ ಪರಿಚಯ 2008ರಲ್ಲಿ ಸ್ಥಾಪಿತವಾದ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘವು ಕಲಬುರಗಿ ವಿಭಾಗದಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದು ಹಾಗೂ ಸ್ಥಳೀಯ ಲೇಖಕರಿಗೆ ಪ್ರೋತ್ಸಾಹ ನೀಡುವುದು ಸಂಘದ ಧ್ಯೇಯವಾಗಿದೆ.

ಕನ್ನಡ ಪುಸ್ತಕ ಪ್ರಾಧಿಕಾರದಿಂದ 2024ನೇ ಸಾಲಿನ “ಅತ್ಯುತ್ತಮ ಪ್ರಕಾಶನ” ಪ್ರಶಸ್ತಿ (₹1 ಲಕ್ಷ ನಗದು) ಸಂಘಕ್ಕೆ ಲಭಿಸಿದೆ. ಜೊತೆಗೆ ಗುಲಬರ್ಗಾ ವಿಶ್ವವಿದ್ಯಾಲಯವು “ಉತ್ತಮ ಪ್ರಕಾಶನ ಸಂಸ್ಥೆ” ಎಂದು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಸಂಘದ ಕಾರ್ಯವ್ಯಾಪ್ತಿ ಬೀದರ, ಕಲಬುರಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಿಗೆ ಸೀಮಿತವಾಗಿದ್ದು, ಕನ್ನಡ ಪುಸ್ತಕಗಳನ್ನು ಮಾತ್ರ ಪ್ರಕಟಿಸುತ್ತಿದೆ , ಎಂದು .ಅಧ್ಯಕ್ಷ ಅಪ್ಪಾರಾವ ಅಕ್ಕೋಣೆ ,ಉಪಾಧ್ಯಕ್ಷರುಡಾ. ಸ್ವಾಮಿರಾವ ಕುಲಕರ್ಣಿ,ಸಂಯೋಜಕರ ಡಾ. ಶರಣಬಸಪ್ಪ ವಡ್ಡನಕೇರಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.