ಎಂ. ಬಿ. ನಿಂಗಪ್ಪಗೆ ಮಹಾಂತ ಶ್ರೀ ಪ್ರಶಸ್ತಿ ಲಭಿಸಿದೆ
ಎಂ. ಬಿ. ನಿಂಗಪ್ಪಗೆ ಮಹಾಂತ ಶ್ರೀ ಪ್ರಶಸ್ತಿ ಲಭಿಸಿದೆ
ರಾಯಚೂರು : ನಗರದ ಮಾತೋಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ್ ಪ್ರತಿಷ್ಠಾನ ಕೊಡಮಾಡುವ ೨೦೨೪ ನೇ ಸಾಲಿನ ಪ್ರತಿಷ್ಠಿತ ಮಹಾಂತ ಶ್ರೀ ಪ್ರಶಸ್ತಿಗೆ ಕಲಬುರಗಿಯ ಕನ್ನಡ ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ. ಬಿ. ನಿಂಗಪ್ಪ ಅವರು ಭಾಜನರಾಗಿದ್ದಾರೆ.
ಗ್ರಾಮೀಣ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಅವರು ನೀಡಿರುವ ಅಮೋಘ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಮಾತೋಶ್ರೀ ಮಹಾಂತಮ್ಮ ಶಿವಬಸಪ್ಪ ಗೋನಾಳ ಪ್ರತಿಷ್ಠಾನ ರಾಯಚೂರ ತಮ್ಮ ಅಂಗ ಸಂಸ್ಥೆಯಾದ ಪ್ರತಿಭಾ ಸುಗಮ ಸಂಗೀತ ಸಂಸ್ಥೆಯ ೧೫ ನೇ ವಾರ್ಷಿಕೋತ್ಸವದ ಅಂಗವಾಗಿ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರ ರಾಯಚೂರಿನಲ್ಲಿ ೨೪ ನೇ ನವೆಂಬರ್ ೨೦೨೪ ರಂದು ಜರುಗಿದ *ಮಹಾಂತ ಶ್ರೀ* ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ ಬಿ ನಿಂಗಪ್ಪ ಅವರಿಗೆ ಈ ಪ್ರತಿಷ್ಠಿತ "ಮಹಾಂತ ಶ್ರೀ" ಪ್ರಶಸ್ತಿ ಸಂದಿದೆ.
ಪ್ರತಿಷ್ಠಿತ ಮಹಾಂತ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾಜಿ ಸಚಿವೆ ಹಾಗೂ ಶರಣ ಸಾಹಿತಿ ಲೀಲಾದೇವಿ ಆರ್. ಪ್ರಸಾದ, ರಾಯಚೂರು ನಗರ ಶಾಸಕ ಶಿವರಾಜ ಪಾಟೀಲ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ.ಎಸ್, ಬಾಲಾಜಿ, ಸಂಸ್ಥೆಯ ಅಧ್ಯಕ್ಷ ಡಾ.ಶರಣಪ್ಪ ಗೋನಾಳ, ರಾಯಚೂರ ನಗರ ಸಭೆ ಅಧ್ಯಕ್ಷೆ ನರಸಮ್ಮ, ಪ್ರತಿಭಾ ಗೋನಾಳ, ಷ ಬ್ರ. ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯ ಮಹಾಸ್ವಾಮಿಗಳು,
ವಿಧಾನ ಪರಿಷತ್ ಸದಸ್ಯ ಎ ವಸಂತಕುಮಾರ್, ಚಿತ್ತರಗಿ ಮಠ ಇಲಕಲ್ ನ ಚಿತ್ತರಗಿ ಮಠದ ಪೂಜ್ಯ ಶ್ರೀ ಮ.ನಿ.ಪ್ರ.ಸ್ವ ಗುರುಮಹಾಂತ ಶಿವಾಚಾರ್ಯರು ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು, ಜಾನಪದ ಕಲಾವಿದರು ಭಾಗವಹಿಸಿದ್ದರು.
ಎಂ ಬಿ ನಿಂಗಪ್ಪ ಅವರಿಗೆ ಮಹಾಂತ ಶ್ರೀ ಪ್ರಶಸ್ತಿ : ಜಾನಪದ ಸಾಹಿತಿಗಳ ಹರ್ಷ
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಎಂ ಬಿ ನಿಂಗಪ್ಪ ಅವರಿಗೆ ರಾಜ್ಯ ಮಟ್ಟದ ಪ್ರತಿಷ್ಠಿತ ಮಹಾಂತ ಶ್ರೀ ಪ್ರಶಸ್ತಿ ಲಭಿಸಿರುವುದಕ್ಕೆ, ಕಲಬುರಗಿಯ ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳಾದ ಎಚ್ ಬಿ ಪಾಟೀಲ್, ಡಾ ಪಿ ಎಸ್ ಕೋಕಟನೂರ, ಡಾ ವಾಸುದೇವ ಸೇಡಂ , ಡಾ ರಮೇಶ್ ಲಂಡನಕರ್, ಸಾಯಬಣ್ಣ ಹೋಳಕರ, ರಾಜಶೇಖರ ಹರಿಹರ ಖಜೂರಿ ,ಅಪ್ಪಾಸಾಬ ತೀರ್ಥೆ, ಮಂಜುನಾಥ ಖಜೂರಿ, ಡಾ.ಸುನೀಲ್ ಕುಮಾರ್ ವಂಟಿ, ಡಾ ಗಾಂಧಿಜಿ ಮೋಳಕೇರಿ, ಶಾಂತಪ್ಪ ಸಂಗಾವಿ, ಮರಲಿಂಗಪ್ಪ ಚಟ್ನಳ್ಳಿ, ಸಿದ್ದರಾಮಪ್ಪ ರಂಜೋಳ, ಶಿವರಾಯ ದೊಡ್ಡಮನಿ, ವಿಜಯದಶರಥ ಸಂಗನ್, ಶರಣಪ್ಪ ನಿರಗುಡಿ, ಪ ಮಾನುಷ ಸಗರ , ಡಾ ಎಸ್ ಎಸ್ ಗುಬ್ಬಿ, ವೆಂಕಟೇಶ ನೀರಡಗಿ , ಎಚ್ ಶಂಕರ್, ಬಿ ಸಿ ವಾಲಿ ಸೇರಿದಂತೆ ಕನ್ನಡ ಪರ ಸಂಘಟನೆಗಳು, ಕನ್ನಡ ಜಾನಪದ ಸಂಘಟನೆಗಳು , ಹಾಗೂ ಸಾಹಿತಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ಎಂ ಬಿ ನಿಂಗಪ್ಪ
ಜಿಲ್ಲಾಧ್ಯಕ್ಷರು, ಕನ್ನಡ ಜಾನಪದ ಪರಿಷತ್, ಕಲಬುರಗಿ.