ಬಸವೇಶ್ವರ ಆಸ್ಪತ್ರೆಯಿಂದ ಬೆನ್ನುಹುರಿ ಅಪಘಾತಕ್ಕೆ ಉಚಿತ ಚಿಕಿತ್ಸೆ

ಬಸವೇಶ್ವರ ಆಸ್ಪತ್ರೆಯಿಂದ ಬೆನ್ನುಹುರಿ ಅಪಘಾತಕ್ಕೆ ಉಚಿತ ಚಿಕಿತ್ಸೆ

ಬಸವೇಶ್ವರ ಆಸ್ಪತ್ರೆಯಿಂದ ಬೆನ್ನುಹುರಿ ಅಪಘಾತಕ್ಕೆ ಉಚಿತ ಚಿಕಿತ್ಸೆ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆ ಕಲ್ಬುರ್ಗಿ ಮತ್ತು ದಿ ಅಸೋಷಿಯೇನ್ ಆಫ್ ಪೀಪಲ್ ವಿತ್ ಡಿಸೆಬಿಲಿಟಿ ಸ್ವಯಂ ಸೇವಾ ಸಂಸ್ಥೆಯ ಸಹಯೋಗದಲ್ಲಿ ನವೆಂಬರ್ 25 ರಿಂದ 27 ನವೆಂಬರ್ 2024 ರವರೆಗೆ ಮೂರು ದಿನಗಳ ಕಾಲ ಬೆನ್ನುಹುರಿ ಅಪಘಾತಕ್ಕೊಳಗಾದ ವ್ಯಕ್ತಿ ಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.

ಶಿಬಿರದಲ್ಲಿ ಒಳರೋಗಿ ಯಾಗಿ ನೋಂದಣಿ ಆಗಿದ್ದ ಎಲ್ಲಾ ರೋಗಿಗಳಿಗೆ ಉಚಿತ ಆರೋಗ್ಯ ತಪಾಸಣೆ, ರಕ್ತ ಪರೀಕ್ಷೆ, xray, ಉಚಿತ ಔಷದೋಪಚಾರದ ವ್ಯವಸ್ಥೆ ಯನ್ನು ಬಸವೇಶ್ವರ ಆಸ್ಪತ್ರೆ ವತಿಯಿಂದ ಮಾಡಲಾಗಿತ್ತು.

ಆರೋಗ್ಯ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು ಹಾಗೂ ಬಸವೇಶ್ವರ ಆಸ್ಪತ್ರೆಯ ಸಂಚಾಲಕರಾದ ಡಾ ಕಿರಣ್ ದೇಶಮುಖ್,ಡಾ ಅನೀಲಕುಮಾರ ಪಟ್ಟಣ,ಡಾ ಶಿವಾನಂದ ಮೇಳಕುಂದಿ,ಡಾ ಆನಂದ ಗಾರಂಪಳ್ಳಿ, ಸಂಗಮೇಶ ಹತ್ತಿ, ಪ್ರಿಯದರ್ಶಿನಿ ಟೆಂಗಳಿ ಉಪಸ್ಥಿತರಿದ್ದರು.