ಯಾವುದೇ ಬೆದರಿಕೆಗೆ ನಿಲ್ಲಲ, ಸಿದ್ದ ಶ್ರೀ ಕಾರ್ಖಾನೆ ಪುನಃ ಪ್ರಾರಂಭದ ಹೋರಾಟ ವೀರಣ್ಣ ಗಂಗಾಣಿ
ಯಾವುದೇ ಬೆದರಿಕೆಗೆ ನಿಲ್ಲಲ, ಸಿದ್ದ ಶ್ರೀ ಕಾರ್ಖಾನೆ ಪುನಃ ಪ್ರಾರಂಭದ ಹೋರಾಟ ವೀರಣ್ಣ ಗಂಗಾಣಿ
ಚಿಂಚೋಳಿ : ಸಿದ್ದಶ್ರೀ ಕಾರ್ಖಾನೆ ಪ್ರಾರಂಭ ಮಾಡಲು ರೈತರು ಹಗಲು ರಾತ್ರಿ ಎನ್ನದೆ ಬಸವೇಶ್ವರ ವೃತ್ತದ ಬಳಿ ಹೋರಾಟ ಮಾಡುತ್ತಿದ್ದು, ಅಖಿಲ ಭಾರತ ಮಹಾಸಭಾ ಅಧ್ಯಕ್ಷ ಶರಣು ಮೊತಕಪಳ್ಳಿ ಅವರು ಹೋರಾಟದ ಬಗ್ಗೆ ಮತ್ತು ಹೋರಾಟಗಾರರ ಬಗ್ಗೆ ಹಗುರವಾಗಿ ಮಾತನಾಡುವುದು ರೈತ ಸೇನೆ ಸಹಿಸುವುದಿಲ್ಲ ಎಂದು ರೈತ ಹೋರಾಟಗಾರ ವೀರಣ್ಣ ಗಂಗಾಣಿ ಪ್ರಕಟಣೆ ಮೂಲಕ ಎಚ್ಚರಿಕೆ ನೀಡಿದ್ದಾರೆ.
ಸರ್ವಧರ್ಮ ಸಮಾನವಾಗಿ ಕಂಡಂತ ಬಸವೇಶ್ವರ ವೃತ್ತದ ಎದುರುಗಡೆ ನಾವು ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಹೊರತು, ನಿಮ್ಮ ಮನೆಯ ಅಂಗಳದಲ್ಲಿ ಹೋರಾಟ ಮಾಡುತ್ತಿಲ್ಲ. ಸಾರ್ವಜನಿಕ ಸ್ಥಳ ನಮ್ಮೆಲ್ಲರ ಸ್ವತ್ತು ಆದ ಬಸವೇಶ್ವರ ವೃತ್ತದ ಬಳಿ ಹೋರಾಟ ಮಾಡುತ್ತಿದ್ದೇವೆ. ಸಮಾಜದ ಅಧ್ಯಕ್ಷರಾದ ಮೇಲೆ ತಾವು ಸಮಾಜಕ್ಕೆ ಕೊಡುಗೆಯನ್ನು ನೀಡಿ ಸಮಾಜವನ್ನು ಬೆಳೆಸಿ. ಅದನ್ನು ಬಿಟ್ಟು ಕಾಂಗ್ರೆಸ್ ಸಚಿವರ ನಾಯಕರ ಆಪ್ತರಾಗುವ ಸಲುವಾಗಿ ತಮ್ಮ ನಾಲಿಗೆ ಹರಿ ಬಿಡಬೇಡಿ. ತಾವು ಪತ್ರಿಕೆಯಲ್ಲಿ ಈಶ್ವರ್ ಖಂಡ್ರೆ ಅವರ ಬಗ್ಗೆ ಹಾಗೂ ಸರ್ಕಾರದ ಹಗುರವಾಗಿ ಮಾತನಾಡಿದರೆ ಮುಂದೆ ಆಗುವ ಅನಾಹುತಗಳಿಗೆ ತಾಲೂಕು ಆಡಳಿತವೇ ಹೊಣೆ ಎಂದು ಹೇಳಿದ್ದೀರಿ. ಸಂವಿಧಾನವನ್ನು ತಾವು ಅಧ್ಯಯನ ಮಾಡಿ, ರಾಜಕೀಯ ನಾಯಕರುಗಳಿಗೆ ಟೀಕೆ ಮಾಡುವುದು ಸಹಜ ಎಂದು ತಾವು ಅರಿತುಕೊಳ್ಳಿ. ಕೆಲಸ ಮಾಡದೆ ಇದ್ದಾಗ ಟೀಕೆ ಮಾಡುವುದು ಸಹಜ.ಅಲ್ಲದೆ ಚಿಂಚೋಳಿ ತಾಲೂಕಿನ ಜನ ಈಶ್ವರ್ ಖಂಡ್ರೆ ಅವರ ಮಗನಿಗೆ ಲೋಕಸಭಾ ಸದಸ್ಯನಾಗಿ ಮಾಡಿದೇ ಎಂಬುವುದು ಮರೆಯದಿರಿ. ತಾವು ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು ರೈತ ಹೋರಾಟಕ್ಕೆ ಬೆಂಬಲ ನೀಡಿ ಎಂದು ರೈತ ಹೋರಾಟಗಾರ ವೀರಣ್ಣ ಗಂಗಾಣಿ ತಿಳಿಸಿದ್ದಾರೆ.