ಸರ್ವಧರ್ಮೀಯರು ಹರಿನಾಥ ಮಹಾರಾಜರ ದರುಶನ ಪಡೆದರು
ಸರ್ವಧರ್ಮೀಯರು ಹರಿನಾಥ ಮಹಾರಾಜರ ದರುಶನ ಪಡೆದರು
ಹರಿನಾಥ ಮಂದಿರವನ್ನು ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನಿಂದ ಅಲಂಕರಿಸಲಾಗಿತ್ತು.
ಬೆಳಗ್ಗೆಯಿಂದಲೇ ದಿನವಿಡಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಕಾರ್ಯಕ್ರಮಗಳು ನೆರವೇರಿದವು. ನೆರೆಯ ಮಹಾರಾಷ್ಟ್ರ ಆಂಧ್ರ ಪ್ರದೇಶ ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರ ಮಹಾಪರ್ವ ಹರಿದು ಬಂದಿತ್ತು ಆಗಮಿಸಿದ್ದು ಕಂಡು ಬಂತು. ಆಗಮಿಸಿರುವ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು. ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾವೈಕ್ಯತೆಯ ತಾಣವಾಗಿರುವ ಹಿಂದೂ ಮುಸ್ಲಿಂ ಸೀಖ್ ಅನೇಕ ಧರ್ಮೀಯರು ಸೌಹಾರ್ದತೆಯಿಂದ ಬಾಳಿ ಬದುಕಿದ ನೆಲದಲ್ಲಿ ಈಗಲೂ ಭಾತ್ತೃತ್ವ ಸಂದೇಶ ಸಾರುವ ಆಚರಣೆಗಳು ಜೀವಂತ ವಾಗಿವೆ ಎಂಬುವುದಕ್ಕೆ ಈ ಮಂದಿರವೇ ಸಾಕ್ಷಿ.
ಪ್ರತಿ ವರ್ಷದಂತೆ ಈ ವರ್ಷವೂ ಮೂರು ದಿನ ಜಾತ್ರೆ ಜರುಗಿತು.
ಮಹಾ ತಪಸ್ವಿ ಶ್ರೀ ಸದ್ಗುರು ಹರಿನಾಥ ಮಹಾರಾಜ ಮಂದಿರದಲ್ಲಿ ವೈಭವದಿಂದ ಜಾತ್ರಾ ಮಹೋತ್ಸವದ ಪ್ರಯುಕ್ತ ವರ್ಷದಲ್ಲಿ ಎರಡು ಬಾರಿ ಜಾತ್ರೆ (ಆಷಾಢ ಮತ್ತು ಕಾರ್ತಿಕ)ನಡೆಯುತ್ತದೆ.ಇಂದು ಗೌರಿ ಹುಣ್ಣಿಮೆ ಜಾತ್ರೆ ವೈಭವದಿಂದ ನಡೆಯಲಾಗಿದ್ದು ಸಾಮಾಜಿಕವಾಗಿ.ಹರಿನಾಥ ಕ್ಲಿನಿಕ್ ಮತ್ತು ಉದಗೀರ ಪಟ್ಟಣದ ಅಂಬರ್ಖಾನೆ ರಕ್ತ ನಿಧಿಗಳ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಯಿತು. ಸುಮಾರು ೪೩ಕ್ಕೂ ಅಧಿಕ ಯುವಕರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. ರಕ್ತದಾನ ಶಿಬಿರದಲ್ಲಿ ಸಮೀರ್ ಸೈಯದ್ ಮತ್ತು ಜಮೀರಾ ಉಸ್ಮಾನ್ ಖೇಡ ಇವರು ಸಹ ರಕ್ತದಾನ ಮಾಡಿದರು. ರಕ್ತದಾನ ಸಂಜೆಯ ಹೊತ್ತಿಗೆ 4ರಿಂದ 6ಗಂಟೆಯ ವರೆಗೆ ಗೊಂದಳಿ ಕಾರ್ಯಕ್ರಮವನ್ನು ಜರುಗಿತು.ನಂತರ 6ಗಂಟೆಗೆ ಸಾಮೂಹಿಕ ಮಾಹಾ ಮಂಗಳಾರತಿ ನಡೆಯಿತು .ರಾತ್ರಿ ಶ್ರೀ ಹ.ಭ.ಪ.ಎಕನಾಥ ಮಹಾರಾಜ ಹಂಡೆ ಇವರಿಂದ 9-ರಿಂದ12ರವರಗೆ ಹರಿ ಕೀರ್ತನೆ ಕಾರ್ಯಕ್ರಮ ನೆರವೇರಿತು.