ಎಂ ಎಸ್ ಇರಾಣಿ ಕಾಲೇಜಿನಲ್ಲಿ ಉಚಿತ ಸರ್ಕಾರಿ ವಸತಿ ಜಾಗೃತಿ ಕಾರ್ಯಕ್ರಮ

ಎಂ ಎಸ್ ಇರಾಣಿ ಕಾಲೇಜಿನಲ್ಲಿ ಉಚಿತ ಸರ್ಕಾರಿ ವಸತಿ ಜಾಗೃತಿ ಕಾರ್ಯಕ್ರಮ

ಎಂ ಎಸ್ ಇರಾಣಿ ಕಾಲೇಜಿನಲ್ಲಿ ಉಚಿತ ಸರ್ಕಾರಿ ವಸತಿ ಜಾಗೃತಿ ಕಾರ್ಯಕ್ರಮ

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ ಎಸ್ ಇರಾಣಿ ಕಾಲೇಜಿನಲ್ಲಿ ಮಹಿಳಾ ಕೋಶದ ವತಿಯಿಂದ ವಿದ್ಯಾರ್ಥಿನಿಯರಿಗೆ ಉಚಿತ ಸರ್ಕಾರಿ ವಸತಿ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಮಾಜ ಕಲ್ಯಾಣ ಇಲಾಖೆಯ

ಡಾ ಬಿ ಆರ್ ಅಂಬೇಡ್ಕರ್ ಸರ್ಕಾರಿ ಬಾಲಕಿಯರ ವಸತಿ ನಿಲಯ ಕಲಬುರ್ಗಿಯ ವಾರ್ಡನ್ ಶ್ರೀಮತಿ ಗಾಯತ್ರಿ ಮಠ ಅವರು ಮಾತನಾಡಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮಹಿಳೆಯರ ಶಿಕ್ಷಣಕ್ಕಾಗಿ ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಸೌಲಭ್ಯಗಳನ್ನು ನೀಡಿದ್ದಾರೆ.ಆ ಸೌಲಭ್ಯಗಳನ್ನು ನಾವು ಪಡೆದುಕೊಂಡು ಶಿಕ್ಷಣದ ಮೂಲಕ ಮಹಿಳೆ ಸಬಲೆ ಯಾಗಬೇಕು ಎಂದು ಹೇಳಿದರು.

ನಂತರ ವಿದ್ಯಾರ್ಥಿಗಳಿಗೆ ಸರ್ಕಾರಿ ವಸತಿ ನಿಲಯದಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.

ಇನ್ನೋರ್ವ ಅತಿಥಿಗಳಾದ ಎನ್ ವಿ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕರಾದ ಡಾ ಶ್ವೇತಾ ಕಟ್ಟಿ ಮಾತನಾಡಿದರು. 

ಕಾಲೇಜಿನ ಗಣಿತಶಾಸ್ತ್ರ ಮುಖ್ಯಸ್ಥರಾದ ಶ್ರೀಮತಿ ಜಗದೇವಿ ಹಿರೇಮಠ ಕಾರ್ಯಕ್ರಮ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಮಹಿಳಾ ಕೋಶದ ಸಂಯೋಜಕರಾದ ಡಾ ಮೈತ್ರಾದೇವಿ ಹಳೆಮನಿ ಸ್ವಾಗತ ಮತ್ತು ಅತಿಥಿಗಳ ಪರಿಚಯ ಮಾಡಿಕೊಟ್ಟರು.ವಿದ್ಯಾರ್ಥಿನಿಯರಾದ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಾ ವಂದಿಸಿದರು