ಕಾಂಗ್ರೆಸ್ ತತ್ವ ಸಿದ್ಧಾಂತ ಪ್ರಚುರಪಡಿ : ಬಸವರಾಜ ಪಾಟೀಲ ಊಡಗಿ
ಸೇಡಂ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ವಿಶೇಷ ಸನ್ಮಾನ
ಕಾಂಗ್ರೆಸ್ ತತ್ವ ಸಿದ್ಧಾಂತ ಪ್ರಚುರಪಡಿ : ಬಸವರಾಜ ಪಾಟೀಲ ಊಡಗಿ
ಸೇಡಂ : ದೇಶದ ಐಕ್ಯತೆ ಹಾಗೂ ಸ್ವಾತಂತ್ರ್ಯದಲ್ಲಿ ಭಾಗವಹಿಸಿರುವ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತತ್ವ ಸಿದ್ದಾಂತವನ್ನು ಪ್ರತಿಯೊಬ್ಬರೂ ಅರತುಕೊಂಡು ಪ್ರಚುರಪಡಿಸಬೇಕೆಂದು ಕೃಷಿ ಸಮಾಜದ ರಾಜ್ಯ ಸದಸ್ಯ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಬಸವರಾಜ ಪಾಟೀಲ ಊಡಗಿ ಹೇಳಿದರು.
ಇಲ್ಲಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥಾಪನಾ ದಿನದಂಗವಾಗಿ ಹಿರಿಯ ಕಾಂಗ್ರೆಸ್ ಮುಖಂಡರನ್ನು ಸನ್ಮಾನಿಸಿ ಮಾತನಾಡಿದ ಅವರು, ದೇಶದಲ್ಲಿ ಸಾಮರಸ್ಯ ಹಾಗೂ ಸೌಹಾರ್ದ ಕಟ್ಟಲು ಕಾಂಗ್ರೆಸ್ ಹೆಚ್ವಿನ ಪಾತ್ರ ವಹಿಸಿದೆ. ಸುಳ್ಳು, ಜೊಳ್ಳು ಸುದ್ದಿಗಳಿಗೆ ಕಿವಿಕೊಡದೆ, ಕಾಂಗ್ರೆಸ್ ಇತಿಹಾಸ ತಿಳಿದು ಭಾರತದ ಸ್ವಾತಂತ್ರ್ಯ ಸೇರಿದಂತೆ ಅನೇಕ ಹೋರಾಟಗಳಲ್ಲಿ ಕಾಂಗ್ರೆಸ್ ತನ್ನ ಮುಖ್ಯ ಪಾತ್ರ ವಹಿಸಿದೆ ಎಂದರು.
ಕಾಂಗ್ರೆಸ್ ನಿಂದ ಆದ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆಯಾಗಬೇಕು. ಸತ್ಯ ಇಂದಲ್ಲ ನಾಳೆ ಮುನ್ನಲ್ಲೆಗೆ ಬರುತ್ತದೆ ಎಂದು ತಿಳಿಸಿದರು.
ಈ ವೇಳೆ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ, ಮುಧೋಳ ಬ್ಲಾಕ್ ಅಧ್ಯಕ್ಷ ರವಿ ನಂದಿಗಾಮ್, ಕೆರಳ್ಳಿ ಪಂಚಾಯತ ಅಧ್ಯಕ್ಷ ಅಶೋಕರೆಡ್ಡಿ ಕೆರಳ್ಳಿ, ಕಾಂಗ್ರೆಸ್ ಮುಖಂಡರಾದ ಗುರುನಾಥ್ ರೆಡ್ಡಿ ಪಾಟೀಲ ಹೂಡಾ, ರಾಮಯ್ಯ ಪೂಜಾರಿ, ಲಿಂಗರಾಜ ಬಬುಲಾದಿ ಕುರುಕುಂಟಾ, ಈರಣ್ಣ ರೆಮ್ಮಣ್ಣಿ, ಸಂತೋಶ ಕುಲಕರ್ಣಿ, ರಾಜಶೇಖರ ಪುರಾಣಿಕ, ಜನಾರ್ಧನರೆಡ್ಡಿ, ಸತೀಶ್ ಭಾಂಜಿ , ಮಹೇಶ್ ಪಾಟೀಲ ತರನಳ್ಳಿ, ಸಂಪತ್ ಭಾಂಜಿ, ಹಾಜಿ ನಾಡೇಪಲ್ಲಿ, ದೇವಯ ದೊರೆ, ಅಜಯ್ ಸೇಡಂಕರ್ ಹಾಗೂ ಮಹಿಳಾ ಘಟಕ ಅಧ್ಯಕ್ಷೆ ಲಲಿತಾ ಯಾಕಾಪುರ ಹಸೇರಿತೆ ಹಲವರಿದ್ದರು.
ಭಾರತೀಯ ಕಾಂಗ್ರೆಸ್ ಸಂಸ್ಥಾಪನಾ ದಿನ ಹಿನ್ನೆಲೆಯಲ್ಲಿ ಸೇಡಂ ಬ್ಲಾಕ್ ಕಾಂಗ್ರೆಸ್ ವತಯಿಂದ ಹಿರಿಯ ಕಾಂಗ್ರೆಸ್ ಮುಖಂಡರುಗಳಾದ ಅಬ್ದುಲ್ ಗಫೂರ್, ದಾಮೋದರರೆಡ್ಡಿ ಶಿಲಾರಕೋಟ್, ನಾರಾಯಣರೆಡ್ಡಿ ಇಟ್ಕಾಲ್, ವೆಂಕಟರಾಮರೆಡ್ಡಿ ಹಯ್ಯಾಳ, ಈರಣ್ಣಾ ಸಜ್ಜನಶೆಟ್ಟಿ, ವೆಂಕರಾಮರೆಡ್ಡಿ ಕಡತಾಲ್, ಶರಣಪ್ಪ ಮಳಖೇಡ, ಜಗದೇವಯ್ಯ ಸ್ವಾಮಿ, ಅಹ್ಮದ್ ಪಟೇಲ್ ರನ್ನು ವಿಶೇಷ ಸನ್ಮಾನ ಮಾಡಿದರು.
