ಬ್ರೇನ್ ಆ್ಯಂಡ್ ಮೈಂಡ್ಸ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವ – ಹೊಸ ಆವರಣ ಉದ್ಘಾಟನೆ

ಬ್ರೇನ್ ಆ್ಯಂಡ್ ಮೈಂಡ್ಸ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವ – ಹೊಸ ಆವರಣ ಉದ್ಘಾಟನೆ
ಬ್ರೇನ್ ಆ್ಯಂಡ್ ಮೈಂಡ್ಸ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವ – ಹೊಸ ಆವರಣ ಉದ್ಘಾಟನೆ

ಬ್ರೇನ್ ಆ್ಯಂಡ್ ಮೈಂಡ್ಸ್ ಆಸ್ಪತ್ರೆಯ 10 ನೇ ವಾರ್ಷಿಕೋತ್ಸವ – ಹೊಸ ಆವರಣ ಉದ್ಘಾಟನೆ

ಕಲಬುರಗಿ: ನಗರದ ಬಸ್ ನಿಲ್ದಾಣದ ಹತ್ತಿರ ಕಳೆದ ಹತ್ತು ವರ್ಷಗಳಿಂದ ಮೆದುಳು ಮತ್ತು ಮನಸ್ಸಿನ ಆರೈಕೆಯಲ್ಲಿ ಜನಸೇವೆಗೆ ತೊಡಗಿಸಿಕೊಂಡಿರುವ *ಬ್ರೇನ್ ಆ್ಯಂಡ್ ಮೈಂಡ್ಸ್ ಆಸ್ಪತ್ರೆ ತನ್ನ ಹೊಸ ಗುರುತಿನೊಂದಿಗೆ ಹೊಸ ಆವರಣವನ್ನು ಭವ್ಯವಾಗಿ ಉದ್ಘಾಟಿಸಿತು. ಹತ್ತನೇ ವರ್ಷದ ವಾರ್ಷಿಕೋತ್ಸವದ ಸಂಭ್ರಮದ ಅಂಗವಾಗಿ ಆಯೋಜಿಸಿದ್ದ ಉದ್ಘಾಟನಾ ಸಮಾರಂಭದಲ್ಲಿ ಸಚಿವರು, ಸಂಸದರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದರು.

ಉದ್ಘಾಟನಾ ಕಾರ್ಯಕ್ರಮಕ್ಕೆ ಸಂಸದ  ರಾಧಾಕೃಷ್ಣ ದೊಡ್ಡಮನಿ, ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ ಸಚಿವ **ಡಾ. ಶರಣಪ್ರಕಾಶ ಪಾಟೀಲ, ಸಚಿವ ಶರಣಬಸಪ್ಪ ದರ್ಶನಾಪುರ, ತೆಲಂಗಾಣದ ಸಂಸದರು, ಸ್ಥಳೀಯ ಶಾಸಕರು, ಮಹಾಪೌರರು ಮತ್ತು ನಗರದ ಹಲವಾರು ಗಣ್ಯರು ಹಾಜರಿದ್ದರು.

ತೆಲಂಗಾಣದ ಜಯರಾಬಾದ್ ಸಂಸದ ಸುರೇಶ್ ಕುಮಾರ್ ಶೆಟ್ಟಿಗಾರ್, ಶಾಸಕ ಅಲ್ಲಮಪ್ರಭು ಪಾಟೀಲ್, ಎಂಎಲ್ಸಿ ಶಶಿಲ್ ನಮೋಶಿ, ಶರಣು ಮೋದಿ ಹಾಗೂ ನಗರದ ಹಿರಿಯ ಮುಖಂಡರು ಕಾರ್ಯಕ್ರಮಕ್ಕೆ ವಿಶೇಷವಾಗಿ ಹಾಜರಾಗಿದ್ದರು.

ಕೊಲ್ಲಾಪುರದ ಧನ್ವಂತ್ರಿ ಆಸ್ಪತ್ರೆಯ ಡಾ. ಗುರುದಾಸ್ ಹರ್ಷ, ಆಸ್ಥಾ ಆಸ್ಪತ್ರೆಯ ಡಾ. ಯೋಗೇಶ್ ಕುಲಕರ್ಣಿ ವೈದ್ಯಕೀಯ ಸಹಭಾಗಿತ್ವಕ್ಕಾಗಿ ಕೈಜೋಡಿಸುತ್ತಿರುವುದಾಗಿ ತಿಳಿಸಿದರು.

ಹೊಸ ಆವರಣದಲ್ಲಿ ಮಿತ್ರ ನ್ಯೂರೋ ಸೈಕೆಟ್ರಿ ವೆಲ್‌ನೆಸ್ ಯೂನಿಟ್, RTMS, ಸೈಕೆಟ್ರಿ ರಾಪಿಡ್ ಎಮರ್ಜೆನ್ಸಿ ಸ್ಟೆಬಿಲೈಸೇಶನ್ ಸರ್ವಿಸೆಸ್, ಸ್ಕಿಲ್ಸ್ ಅಸೆಸ್ಮೆಂಟ್ & ಕೌನ್ಸೆಲಿಂಗ್, ಚೈಲ್ಡ್ & ಅಡೋಲಸಂಟ್ ಹೆಲ್ತ್ ಯೂನಿಟ್, ಓಲ್ಡ್ ಎಜ್ ಗೈಡನ್ಸ್, ಡಿ–ಅಡಿಕ್ಷನ್ ಯೂನಿಟ್, ಚೈಲ್ಡ್ ವೆಲ್‌ನೆಸ್ ವಿಭಾಗ, ನ್ಯೂರೋ-ಸೈಕೆಟ್ರಿಕ್ ಕಂಡಿಷನ್ಸ್ ಯೂನಿಟ್ ಸೇರಿದಂತೆ ಅತಿ ಆಧುನಿಕ ಸೇವೆಗಳು ಲಭ್ಯವಾಗಲಿವೆ.

10 ವರ್ಷಗಳ ಸಂಭ್ರಮವನ್ನು ಆಚರಿಸುತ್ತಿರುವ ಆಸ್ಪತ್ರೆಯ ವಿಸ್ತರಣೆ ಬಗ್ಗೆ ಆಯೋಜಕರು ಸಂತೋಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ವಿಜಯಲಕ್ಷ್ಮಿ,ರಮೇಶ್ ಮಂದಕನಳ್ಳಿ,ಡಾ. ಸ್ವಾತಿ,ಮಾಣಿಕ ಮಂದಕನಳ್ಳಿ,ಡಾ. ರಶ್ಮಿ,ಡಾ. ಕುನಾಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.