ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಕುಟುಂಬಕ್ಕೆ ಸರ್ಕಾರದಿಂದ 3 ಎಕ್ಕರೆ ಜಮೀನು ಕೊಡಿಸಲು ಸಚಿವ ಪಾಟೀಲಗೆ ಮನವಿ -ಗುಂಡಪ್ಪ ಸಳಂಕೆ
ರಾಜು ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಕುಟುಂಬಕ್ಕೆ ಸರ್ಕಾರದಿಂದ 3 ಎಕ್ಕರೆ ಜಮೀನು ಕೊಡಿಸಲು ಸಚಿವ ಪಾಟೀಲಗೆ ಮನವಿ -ಗುಂಡಪ್ಪ ಸಳಂಕೆ
ಕಲಬುರಗಿ: ಸೇಡಂ ತಾಲೂಕಿನ ಕುರುಗುಂಟ ಗ್ರಾಮದ ರಾಜು ನಾಮವಾರ್ ಸಂಗಾವಿ ಹೊಳೆಯಲ್ಲಿ ಮುಳಗಿ ಸಾವನ್ನಪ್ಪಿದ ಕಾರಣ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಸ್ ರವಿಕುಮಾರ್ ರವರ ಆದೇಶದ ಮೇರೆಗೆ ಜಿಲ್ಲಾ ಅಧ್ಯಕ್ಷರಾದ ಗುಂಡಪ್ಪ ಸಳಂಕೆ ಅವರನ್ನು ಸಂಪರ್ಕಿಸಿ ಮೃತರ ಮನೆಗೆ ಬೆಟ್ಟಿ ನೀಡಲಾಯಿತು ಮತ್ತು ಮೃತರ ಕುಟುಂಬದ ಸದಸ್ಯರನ್ನು ಮಾತನಾಡಿಸಿ ಅವರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮನೆಯ ಸಂಪೂರ್ಣ ವಿವರ ಪಡೆದುಕೊಂಡು ನಿಗಮದಿಂದ ಸಿಗಬೇಕಾದ ಸೌಲಭ್ಯಗಳನ್ನು ಕೊಡಿಸುವುದಾಗಿ ಭರವಸೆ ನೀಡಿದರು. ಜಿಲ್ಲಾ ಬೋವಿ ಅಭಿವೃದ್ಧಿ ನಿಗಮದ ಡಿ ಎಂ ಮರಲಿಂಗ ಒನಗುಂಟಿ ಅವರು ಕುರುಗುಂಟ ಗ್ರಾಮಕ್ಕೆ ಭೇಟ್ಟಿ ನೀಡಿದ್ದರು.
ಇದೇ ಸಂದರ್ಭದಲ್ಲಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಗುಂಡಪ್ಪ ಸಾಳಂಕೆ ಯವರು ಮೃತರ ಕುಟುಂಬಕ್ಕೆ 3 ಎಕ್ಕರೆ ಜಮೀನು ಸರ್ಕಾರದಿಂದ ಕೊಡಿಸುವ ವ್ಯವಸ್ಥೆ ಆಗಲಿ ಎಂದು ಜಿಲ್ಲಾ ವ್ಯವಸ್ಥಾಪಕರಲ್ಲಿ ಮನವಿ ಮಾಡಿಕೊಂಡಿದ್ದಾರೆ ನಂತರ ಶಹಾಬಾದ್ ನಗರಕ್ಕೆ ಭೇಟಿ ನೀಡಿ ನಾಯಿಗಳ ಅಲ್ಲೇಗೆ ಒಳಗಾದ ಬಾಲಕಿ ಕುಮಾರಿ ದೀಪಾಲಿ ಮತ್ತು ಬಾಲಕ ಮಲ್ಲಿಕಾರ್ಜುನ್ ಮನೆಗೆ ಭೇಟಿ ನೀಡಿ ಪರಿಶೀಲಿಸಿ ನಿಗಮದಿಂದ ಸಹಕಾರ ಕೊಡಿಸುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ರಾಮಯ್ಯ ಪೂಜಾರಿ ,ವಿಠಲ ನೆಲೋಗಿ ಶಾಬಾದ್ ನಗರಧ್ಯಕ್ಷರಾದ ರಾಜು ಮೇಸ್ತ್ರಿ, ರಮೇಶ್ ಪವಾರ, ಶ್ರೀನಿವಾಸ್ ನೆದಲಗಿ, ಸಂಜು ವಿಟಕರ, ಶಿವಕಾಂತ್ ಮಾನೆ, ಸಿದ್ದರಾಮ ಕುಶಾಳೆ, ನಾಗರಾಜ್ ಕುಸಳೆ, ಬಸವರಾಜ್ ಕಣದಾಳ ಸೇರಿದಂತೆ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.