ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ಯುವ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ
ಬ್ರೇನ್ ಟಿಬಿಯಿಂದ ಬಳಲುತ್ತಿದ್ದ ಯುವ ತಾಯಿಗೆ ಯಶಸ್ವಿ ಚಿಕಿತ್ಸೆ ನೀಡಿದ ಜೀವ ಕಾಪಾಡಿದ ಬಸವೇಶ್ವರ ಆಸ್ಪತ್ರೆ
ಕಲಬುರ್ಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೇಯ ವೈದ್ಯರು ಅಪರೂಪದ ಮಿದುಳಿನ ಕ್ಷಯರೋಗ ( ಬ್ರೇನ್ ಟಿಬಿ) ಹೊಂದಿದ ಬಾಣಂತಿ ಮಹಿಳೆಗೆ ಯಶಸ್ವಿ ಚಿಕಿತ್ಸೆ ನೀಡಿ ಅವಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರದ 24 ವರ್ಷದ ಭಾಗ್ಯ ಎಂಬ ಯುವ ಮಹಿಳೆಯು ತನ್ನ ಹೆರಿಗೆಯ ನಂತರ ತೀವ್ರ ತಲೆನೋವು, ಕುತ್ತಿಗೆ ಬಿಗಿತ ದಿಂದಾಗಿ ನಗರದ ಹೈ ಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಆಸ್ಪತ್ರೆಗೆ ದಾಖಲಾಗುತ್ತಾಳೆ. ಆಸ್ಪತ್ರೆಗೆ ದಾಖಲಾದ ಮಹಿಳೆಯ ಪರೀಕ್ಷೆ ಆರಂಭಿಸಿದಾಗ ಅವಳಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪವಾದ ಹಾಗೂ ಜೀವಕ್ಕೆ ಅಪಾಯಕಾರಿಯಾದ ಸುಪ್ರಾಸೆಲ್ಲರ್ ಪಿಟ್ಯುಟರಿ ಟ್ಯೂಬರ್ಕುಲರ್ ಭಾವು ಇರುವುದು ಪತ್ತೆಯಾಯಿತು. ಇದು ಮೆದುಳಿನ ನರಮಂಡಲಕ್ಕೆ ಹಬ್ಬುವ ಮಾರಣಾಂತಿಕ ನರ ರೋಗವಾಗಿದೆ.ಇದಕ್ಕೆ ತಕ್ಷಣ ಹಾಗೂ ಸರಿಯಾದ ಚಿಕಿತ್ಸೆ ನೀಡದಿದ್ದರೆ ನರಮಂಡಲ ಕ್ಷೀಣಿಸಿ ಜೀವಕ್ಕೆ ಅಪಾಯವನ್ನು ನೀಡುತ್ತದೆ.
ಇದನ್ನು ಪತ್ತೆ ಹಚ್ಚಿದ ನುರಿತ ವೈದ್ಯಕೀಯ ತಂಡ ನಿಖರವಾದ ಪೂರ್ವ ಶಸ್ತ್ರ ಚಿಕಿತ್ಸೆಗಾಗಿ ಆರ್ಗನೈಜ್ಡ್ ಮಲ್ಟೀಡಿಸಿಪನರಿ ಪ್ರೋಜೆಕ್ಟ್ ನಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲಾಯಿತು ಇದರಿಂದಾಗಿ ಕ್ಷೀಣಿಸಿದ್ದ ನರಗಳ ಚೇತರಿಕೆಗೆ ಕಾರಣವಾಯಿತು.ಇದರಿಂದಾಗಿ ಬಾಣಂತಿ ಮಹಿಳೆ ತನ್ಧ ನವಜಾತು ಶಿಶು ಮತ್ತು ಕುಟುಂಬಕ್ಕೆ ಸುರಕ್ಷಿತವಾಗಿ ಮರಳಿ ತನ್ನ ಕುಟುಂಬ ಸೇರುವಂತಾಯಿತು.ಶಸ್ತ್ರ ಚಿಕಿತ್ಸೆ ನಂತರ ಆ ಬಾಣಂತಿ ಮಹಿಳೆಯನ್ನು ಎರಡು ದಿನಗಳ ಕಾಲ
ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ನೀಡಲಾಯಿತು ಆರೋಗ್ಯದಲ್ಲಿ ಚೇತರಿಕೆ ಕಂಡ ಮೇಲೆ ವೆಂಟಿಲೇಟರ್ ನಿಂದ ಮುಕ್ತಗೊಳಿಸಿ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿಸಿ ಅಪಾಯಕಾರಿ ಹಂತದಲ್ಲಿದ್ದ ಬಾಣಂತಿಯನ್ನು ರಕ್ಷಿಸಲಾಯಿತು.
ಇಂತಹ ಅಪರೂಪದ ಸವಾಲಿನ ಪ್ರಕರಣಗಳನ್ನು ಆರಂಭಿಕವಾಗಿ ಪತ್ತೆ ಹಚ್ಚಿದಾಗ ಮಾತ್ರ ಗುಣಪಡಿಸಬಹುದು. ಈ ರೋಗವನ್ನು ಖಚಿತವಾಗಿ ಪತ್ತೆಹಚ್ಚಿ ಯಶಸ್ವಿ ಚಿಕಿತ್ಸೆ ನೀಡಿ ಯುವ ಮಹಿಳೆಯನ್ನು ಅಪಾಯಕಾರಿ ಸ್ಥಿತಿಯಿಂದ ಆರೋಗ್ಯ ಸ್ಥಿತಿಗೆ ತಂದ ತಂಡದಲ್ಲಿ ನರರೋಗ ತಜ್ಝ ವೈಧ್ಯರಾದ ಡಾ ಶಶಾಂಕ್ ಸಂಗೊಳ್ಳಿ, ಡಾ ತನುಜಾ ಪೋಲಿಸ್ ಪಾಟೀಲ್, ಅರಿವಳಿಕೆ ತಂಡದ ವೈದ್ಯರಾದ ಡಾ ಎಂ ಡಿ ಯಾಹ್ಯ, ಡಾ ಮುಕ್ತಾಬಾಯಿ, ಐಸಿಯು ವೈದ್ಯರಾದ ಡಾ ಸೊಹೈಲ್ ಶಾಲಿ,ಡಾ ನಿತಿನ್ ಕುನ್ನೂರ್ ಇದ್ದರು ಇಂತಹ ಅಪರೂಪದ ಯಶಸ್ವಿ ಚಿಕಿತ್ಸೆಗೆ ನೀಡಿದ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರು ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ಉಪಾದ್ಯಾಕ್ಷರಾದ ರಾಜಾ ಭೀಮಳ್ಳಿ, ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳ್ಳಿ, ಆಡಳಿಮ ಮಂಡಳಿ ಸದಸ್ಯರು ಸಂಚಾಲಕರಾದ ಡಾ ಕಿರಣ ದೇಶಮುಖ್, ವೈದ್ಯಕೀಯ ಅಧೀಕ್ಷಕರಾದ ಡಾ ಮಲ್ಲಿಕಾರ್ಜುನ್ ಟೇಂಗಳಿ,ಆಡಳಿತಾಧಿಕಾರಿ ಗಳಾದ ಡಾ ಎಂ ಆರ್ ಪೂಜಾರಿ ಅಭಿನಂದಿಸಿದ್ದಾರೆ. ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೇಯ ಈಗ ನಿರಂತರವಾಗಿ ಇಂತಹ ಜೀವಕ್ಕೆ ಅಪಾಯಕಾರಿಯಾಗಿರುವ ರೋಗಗಳನ್ನು ಸರಿಯಾಗಿ ಪತ್ತೆ ಹಚ್ಚಿ ಜೀವ ಕಾಪಾಡುತ್ತಿರುವ ಆರೋಗ್ಯ ಸಂಜೀವಿನಿಯಾಗಿದೆ ಎಂದು ಸಂಸ್ಥೆಯ ಮಾಧ್ಯಮ ಸಂಯೋಜಕ ಐ ಕೆ ಪಾಟೀಲ್ ತಿಳಿಸಿದ್ದಾರೆ
