ಮಂಜುನಾಥ ಎಸ್. ಮಠಪತಿಗೆ ಗೌರವ ಡಾಕ್ಟರೇಟ್
ಮಂಜುನಾಥ ಎಸ್. ಮಠಪತಿಗೆ ಗೌರವ ಡಾಕ್ಟರೇಟ್
ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಮಂಜುನಾಥ ಎಸ್. ಮಠಪತಿ ಅವರಿಗೆ ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ASIA International Culture Resource Academy ವತಿಯಿಂದ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು
ಮಂಜುನಾಥ ಎಸ್. ಮಠಪತಿ ಅವರು ಹಲವು ವರ್ಷಗಳಿಂದ ನಾಡು, ನುಡಿ, ಕನ್ನಡ ಮತ್ತು ಕನ್ನಡಾಂಬೆಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡು ಅನೇಕ ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಸಮಾಜ ಸೇವೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡದ ಬಗ್ಗೆ ಅವರಿಗಿರುವ ಅಪಾರ ಪ್ರೀತಿ, ಕಾಳಜಿ ಗೌರವ ಹಾಗೂ ಬದ್ಧತೆಯನ್ನು ಗುರುತಿಸಿ ಈ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿರುವುದು ಅವರ ಸೇವೆಗೆ ಸಂದ ಸಮರ್ಪಕ ಗೌರವ.
ಕನ್ನಡ, ಕರ್ನಾಟಕ ಹಾಗೂ ಕನ್ನಡಾಂಬೆಯ ಪರವಾಗಿ ಅವರ ಹೋರಾಟ ಮತ್ತು ಸೇವೆ ನಿರಂತರವಾಗಿ ಮುಂದುವರಿಯಲಿ. ಈ ಗೌರವವು ಅವರ ಮುಂದಿನ ಸಾಮಾಜಿಕ ಹಾಗೂ ಕನ್ನಡಪರ ಸೇವೆಗೆ ಮತ್ತಷ್ಟು ಪ್ರೇರಣೆಯಾಗಲಿ ಎಂದು ಹಾರೈಸಿದ್ದಾರೆ.
ಗೌರವ ಡಾಕ್ಟರೇಟ್ ಪದವಿ ಪಡೆದ ಶ್ರೀ ಮಂಜುನಾಥ ಎಸ್. ಮಠಪತಿ ಅವರಿಗೆ ಶಿವರಾಜ ಬರಗಲಿ ಅಭಿನಂದನೆಗಳನ್ನು ಸಲ್ಲಿಸಿದರು. ಕುಸನೂರ ಗ್ರಾಮದ ಯುವಕರು ಹಿತೈಷಿಗಳು ಶುಭ ಕೋರಿದ್ದಾರೆ.
"ಸ್ನೇಹಕ್ಕೂ ಬದ್ಧ ಹೋರಾಟಕ್ಕೂ ಸಿದ್ಧ" ಎಂಬ ಅವರ ಧ್ಯೇಯವಾಕ್ಯ ಇನ್ನಷ್ಟು ಅರ್ಥಪೂರ್ಣವಾಗಿ ಸಮಾಜದಲ್ಲಿ ಪ್ರತಿಧ್ವನಿಸಲಿ.
ಶಿವರಾಜ ಬರಗಲಿ
