ಚೆಲುವಿನ ಚಿಲುಮೆಯoತಿರುವ ಸ್ಫೂರ್ತಿ ಕಾವ್ಯ

ಚೆಲುವಿನ ಚಿಲುಮೆಯoತಿರುವ ಸ್ಫೂರ್ತಿ ಕಾವ್ಯ

ಚೆಲುವಿನ ಚಿಲುಮೆಯoತಿರುವ ಸ್ಫೂರ್ತಿ ಕಾವ್ಯ

ಸಾಹಿತ್ಯ ಎನ್ನುವುದು ಜೀವನಾನುಭವಗಳ ಒಂದು ಮೊತ್ತ. ಕವಿಹೃದಯ ಸದಾಕಾಲ ತನ್ನ ಸುತ್ತಮುತ್ತಲೂ ನಡೆಯುವ ಘಟನಾವಳಿಗಳಿಗೆ ಸ್ಪಂದಿಸುತ್ತಿರುತ್ತದೆ. ಭಾವನೆಗಳಿಗೆ ಅಕ್ಷರ ರೂಪ ಕೊಡುವ, ವೈಯಕ್ತಿಕ ಆನಂದಾನುಭವಗಳನ್ನು ಸಮುಷ್ಟಿಪ್ರಜ್ಞೆಗೆ ತಲುಪಿಸುವ ತುಡಿತ ನಿರಂತರವಾಗಿ ನಡೆದಿರುತ್ತದೆ ಎನ್ನುವುದಕ್ಕೆ ಶ್ರೀಮತಿ ಪಲ್ಲವಿ ಕುಲಕರ್ಣಿ ಅವರ ಕವಿಮನಸ್ಸು ಜಾಗೃತವಾಗಿ ಸಣ್ಣ ಪುಟ್ಟ ಪ್ರಸಂಗಗಳಿಗೂ ಸ್ಪಂದಿಸಿ ಕಾವ್ಯರಚನೆಗೈದಿದ್ದು ಮೆಚ್ಚತಕ್ಕ ಸಂಗತಿಯಾಗಿದೆ. ಶ್ರೀಮತಿ ಪಲ್ಲವಿ ಕುಲಕರ್ಣಿ ಅವರು ಎಸ್.ಆರ. ಏನ್ ಮೆಹತಾ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು. ದಾಂಪತ್ಯ ಬದುಕಿನೊಂದಿಗೆ ಹೆಜ್ಜೆಹಾಕುತ್ತಾ ಬಾಳಸಂಗಾತಿ, ಹಾಗೂ ಮಕ್ಕಳೊಂದಿಗೆ ಕವನಗಳ ಸವಿ ಹಂಚುತ್ತಾ ಸಾಹಿತ್ಯಕ್ಷೇತ್ರಕ್ಕೆ ಕಾಲಿರಿಸಿದ್ದಾರೆ.

ಸ್ಫೂರ್ತಿ ಎಂಬ ಕವನ ಸಂಕಲನ ಬಿಡುಗಡೆಗೆ ಹೋದಾಗ ನನ್ನ ಕೈ ಸೇರಿದ ಪುಸ್ತಕ ತೆರೆದಾಗ ಅಣ್ಣ ఎంబ

ಶೀರ್ಷಿಕೆಯಡಿಯಲ್ಲಿ ಆರಂಭವಾಗುವ ಕವನ ಸಂಕಲನದಲ್ಲಿ ಹೆಣ್ಣಿಗೆ ಅಣ್ಣ ಎಂಬ ಬಂಧ ಅದೆಷ್ಟು ಮುಖ್ಯ ಹಾಗೂ ಅಣ್ಣನ ಸ್ಥಾನ ಎಂತಹದ್ದು ಎಂಬುದನ್ನು ಕವಯಿತ್ರಿ ಹೇಳಿದ್ದಾರೆ. ಈ ಕವನ ಸಂಕಲನದಲ್ಲಿ ಪ್ರೀತಿ ಪ್ರೇಮ, ಸಹೋದರತ್ವದ ಭಾವನೆ, ತವರೂರಿನ ನೆನಪುಗಳು, ಗಂಡನ ಮನೆಯ ಅಭಿಮಾನ. ಅಮ್ಮನ ನೆನಪುಗಳನ್ನು ಕೆದಕುವ ಕವಿತೆ, ದೇಶಪ್ರೇಮ, ನಾಡಿನ ಕುರಿತ ಅಭಿಮಾನ ಜೊತೆಗೆ ತಮ್ಮ ಮಗನ ಕುರಿತು ತಾಯಿಯಾಗಿ ಅವರು ಚಿಂತಿಸುವ ರೀತಿ, ಪ್ರಕೃತಿಯ ಆರಾಧನೆ, ವಿದ್ಯೆ ಕಲಿಸಿದ ಗುರುಗಳ ಕುರಿತ ಗೌರವಾಧರಗಳು. ನೆಲವನ್ನು ತಂಪಾಗಿಸದ ವರುಣನಲ್ಲಿ ಭೂಮಿಯನ್ನು ತಂಪಾಗಿಸು ಎಂಬ ಬೇಡಿಕೆ. ದುಷ್ಟ ಶಿಕ್ಷಕಿ ಶಿಷ್ಟ ರಕ್ಷಕಿ ಜಗತ್ ಜನನಿಯ ಕುರಿತ ಭಕ್ತಿ ಭಾವ, ಬದುಕು ನಡೆಸಲು ಕಷ್ಟಪಟ್ಟು ದುಡಿಯುವ ಹಾಗೂ ಆ ದುಡಿಮೆಯಿಂದ ಬರುವ ಸಂಬಳವನ್ನು ನೆಚ್ಚಿಕೊಂಡು ಬದುಕುತ್ತಿರುವವರ ಬದುಕನ್ನು, ಸಂತೋಷವನ್ನು, ಸಮಯವನ್ನು ಸಂಬಳ ಹೇಗೆ ನುಂಗಿದೆ ಎಂಬುದರ ಕುರಿತು, ಪ್ರತಿ ಗಳಿಗೆಗೊಮ್ಮೆ ಬಣ್ಣ ಬದಲಾಯಿಸುವ ಜನರ ಕುರಿತ ವ್ಯಂಗ್ಯ ಹೀಗೇ ಪ್ರತಿಯೊಂದು ವಿಚಾರಗಳ ಮೇಲೂ ಪಲ್ಲವಿಯವರು ಬೆಳಕು ಚೆಲ್ಲಲು ಯತ್ನಿಸಿದ್ದಾರೆ. ಅಲ್ಲದೆ ಸ್ಪೂರ್ತಿ ಕವನ ಸಂಕಲನದ ಪ್ರತಿಯೊಂದು ಕವಿತೆಗಳು ಅವರೊಳಗಣ ಭಾವನೆಗಳ ರೂಪಕ್ಕೆ ಕೈಗನ್ನಡಿಯಾಗಿದ್ದನ್ನು ಗಮನಿಸಬಹುದು.

ಇಲ್ಲಿರುವ ಎಲ್ಲ ಕವನಗಳಲ್ಲಿ ಮಾನವ ಮೌಲ್ಯಗಳ ಶೋಧ ಪರಿಶೋಧಗಳು, ಹಳೆಯವು ಅನಿಸುವದೇ ಇಲ್ಲ.ಅವು ವೇದೋಚನಗಳಾಗಿ ಪ್ರಕೃತಿಯ ವಿರಾಟ ಸ್ವರೂಪದ ಅಂತರ ಜಲವಾದ ಒಲವಿನಲ್ಲಿ ಹೊಸ ಹೊಸ ಬದುಕಿಗೆ ಚಲುವಿನ ಚಿಲುಮೆಗಳಾಗಿವೆ. ಬದುಕಿನ ಸಾರ ಸರ್ವಸ್ವವನ್ನು ಪಡೆಯಲು ಉತ್ಸಾಹಿ ಸ್ವರೂಪವಾಗಿವೆ. ಅದನ್ನೆಲ್ಲ ನಮ್ಮದಾಗಿಸಿಕೊಳ್ಳಲು ಕವಯತ್ರಿ ಪಲ್ಲವಿ ಕುಲಕರ್ಣಿ ಈ ಕವನ ಸಂಕಲನವನ್ನು ಸಾರಸ್ವತಲೋಕ ಒಮ್ಮೆಯಾದರೂ ಓದಿ ಅಲ್ಲಿರುವ | ಅಯ್ಯೋದ ತೀರ್ಥವನ್ನು ತುಂಬಿಕೊಂಡು ಅಲ್ಲಿರುವ ನಡೆ ನುಡಿಯಬೆಳಕನ್ನು ಗೌರವಿಸಬೇಕಾದುದು ಮುಖ್ಯವೆನಿಸಿದೆ. ಅಲ್ಲಿರುವ ಭಾವ ವಿಭಾವ ಅನುಭಾವಗಳನೇಕಗಳಲ್ಲಿ ಓದುಗ ತನ್ನನ್ನು ತಾನು ಕಂಡು ಕೊಳ್ಳುತಾನೆ. ಲೋಕೋ ಭಿನ್ನ ರುಚಿಯಾಗಿದ್ದರೂ-ಆ ರುಚಿಯ ತುತ್ತ ತುದಿಯ ಸ್ವಾದವಾದ ಆನಂದವನ್ನು ತುಂಬಿಕೊಂಡು ನೆಮ್ಮದಿಯಾಗಿರುತ್ತಾನೆ. ಹಾಗಾಗಿ ಮೊದಲು ಮಾನವರಾಗಿ ನಡೆಯೋಣ ಎಂಬ ಚಿತ್ರಧ್ವನಿಯು ಇಲ್ಲಿ ಮೊಳಗುತ್ತಿರುವುದನ್ನು ಕಂಡು ಮನಸ್ಸು ಆಹ್ಲಾದಗೊಳ್ಳುತ್ತದೆ.

ಇಂಥ ಕಾವ್ಯರಚನಾ ಶೈಲಿಯನ್ನು ಹೊಂದಿರುವ ಪಲ್ಲವಿಯವರು ಲೋಕ ಶಿಕ್ಷಣದಲ್ಲಿ ಶಿಕ್ಷಕರಾಗಿ ಮನಸ್ಸನ್ನು ಹದಮಾಡಿಕೊಂಡವರು. ತಮ್ಮ ನೋವುಗಳನ್ನೆಲ್ಲ ಮರೆತು ಮಾನವ ಸಂಪನ್ಮೂಲವಾಗಿರುವ ಮಕ್ಕಳ ವಿಕಸನಕ್ಕಾಗಿ ಅವರ ವ್ಯಕ್ತಿತ್ವ ವಿಕಾಸದಲ್ಲಿ ತಮ್ಮ ಅಭಿವ್ಯಕ್ತಿ ಪ್ರತಿಭೆಯಿಂದಾಗಿ ಹಾಡುಕಟ್ಟಿ ಹಾಡಿದವರು. ನಾಡನುಡಿ, ದೇಶ ಕೋಶ,ಸಂಬಂಧ,ವಿಶ್ವಂಭರ ಕುಟುಂಬ ಇತ್ಯಾದಿ ಕಡೆಗೆ ಗಮನ ಹರಿಸಿ,ಅಂತಹ ಗೀತೆಗಳಿಗೆ ಸ್ಫೂರ್ತಿಯಾಗಿ ನಿಂತವರು. ಈ ನಿಟ್ಟಿನ ಅವರ ರಚನೆಗಳಲ್ಲಿ ಕಟ್ಟುವ ಚಿಗುರಿಸುವ ವೈಖರಿಯಲ್ಲಿ ನಲಿವು ಕಟ್ಟಿ ಕೊಟ್ಟಿದೆ. ಇದೆಲ್ಲವೂ ಅಲ್ಲಿ ತುಂಬಿಕೊಂಡು ಇತಿಹಾಸ ಪ್ರಜ್ಞೆಯು ಭವಿಷ್ಯ ನಿರ್ಮಿತಿಗೆ, ಅದನ್ನು ವರ್ತಮಾನವಾಗಿಸುವುದಕ್ಕೆ ಸಹವರ್ತಿಯಾಗಿದೆ. ವ್ಯಕ್ತಿ ಚಿತ್ರಗಳಂತೂ ಸಚ್ಚಾರಿತ್ರ್ಯ ಹಾಗೂ ಸಾಹಸದ ನಡಿಗೆಗೆ ಶೀಲವನ್ನು ತುಂಬಿಕೊಡುತ್ತವೆ.

 ಬೆಂಗಳೂರಿನ ಅಕ್ಷರನಾದ ಪ್ರಕಾಶನದಿಂದ 2026 ರಲ್ಲಿ ಪ್ರಕಟಗೊಂಡ ಈ ಕೃತಿಯು 104 ಪುಟ ಹೊಂದಿರುವ ಈ ಕೃತಿಯ ಬೆಲೆ 150 ರೂಪಾಯಿ ನಿಗದಿಪಡಿಸಲಾಗಿದೆ.

ಡಾ. ಶರಣಬಸಪ್ಪ ವಡ್ಡನಕೇರಿಕಲಬುರಗಿ