ಪ್ರೊಫೆಸರ್ ಆಫ್ ಕಾರ್ಡಿಯಾಲಜಿ ಹುದ್ದೆಗೆ ಡಾ. ವೀರೇಶ್ ಪಾಟೀಲ ಹೆಬ್ಬಾಳ ನೇಮಕ

ಪ್ರೊಫೆಸರ್ ಆಫ್ ಕಾರ್ಡಿಯಾಲಜಿ ಹುದ್ದೆಗೆ ಡಾ. ವೀರೇಶ್ ಪಾಟೀಲ ಹೆಬ್ಬಾಳ ನೇಮಕ

ಪ್ರೊಫೆಸರ್ ಆಫ್ ಕಾರ್ಡಿಯಾಲಜಿ ಹುದ್ದೆಗೆ ಡಾ. ವೀರೇಶ್ ಪಾಟೀಲ ಹೆಬ್ಬಾಳ ನೇಮಕ

ಕಲಬುರಗಿ, ಜು. 27: ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಕಲಬುರಗಿ ಶಾಖೆಯ ಹಿರಿಯ ಹೃದ್ರೋಗ ತಜ್ಞರಾದ ಡಾ. ವೀರೇಶ್ ಪಾಟೀಲ ಹೆಬ್ಬಾಳ ಅವರು ಪ್ರೊಫೆಸರ್ ಆಫ್ ಕಾರ್ಡಿಯಾಲಜಿ ಹುದ್ದೆಗೆ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಆತ್ಮೀಯರು ಹಾಗೂ ಹಿತೈಷಿಗಳು ಅವರನ್ನು ಗೌರವಿಸಿ ಆತ್ಮೀಯವಾಗಿ ಸನ್ಮಾನಿಸಿದರು.

ಶರಣಗೌಡ ಪಾಟೀಲ ಪಾಳಾ ಮಾತನಾಡಿ, ವಿಶ್ವನಾಥ ಪಾಟೀಲ ಹೆಬ್ಬಾಳ ಅವರು ಶಾಸಕರಾಗಿ ನಾಡಿನ ದೀನ ದಲಿತರ ಬಡವರಗಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಅವರ ಪುತ್ರ ಡಾ. ವೀರೇಶ್ ಪಾಟೀಲ ಹೆಬ್ಬಾಳ ಅವರು ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿ ತಮ್ಮ ಪರಿಣತಿ, ಸೇವಾ ಮನೋಭಾವ ಹಾಗೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ನೀಡಿರುವ ಕೊಡುಗೆಯಿಂದ ಜನಮನ್ನಣೆ ಗಳಿಸಿದ್ದಾರೆ. ಅವರ ಪ್ರೊಫೆಸರ್ ಹುದ್ದೆಯ ನೇಮಕವು ವೈಯಕ್ತಿಕ ಸಾಧನೆಯಷ್ಟೇ ಅಲ್ಲದೆ, ಕಲಬುರಗಿ ಹಾಗೂ ಕಲ್ಯಾಣ ಕರ್ನಾಟಕ ಭಾಗದ ವೈದ್ಯಕೀಯ ಸೇವೆ ಮತ್ತು ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೂ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ. ವೀರೇಶ್ ಪಾಟೀಲ ಹೆಬ್ಬಾಳ ಅವರಿಗೆ ಪುಷ್ಪಗುಚ್ಛ ನೀಡಿ, ಶಾಲು ಹೊದಿಸಿ, ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು. ತಮ್ಮನ್ನು ಗೌರವಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಡಾ. ವೀರೇಶ್ ಪಾಟೀಲ ಹೆಬ್ಬಾಳ ಅವರು, ಮುಂದಿನ ದಿನಗಳಲ್ಲಿಯೂ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಹಾಗೂ ವೈದ್ಯಕೀಯ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

ಈ ಸನ್ಮಾನ ಸಮಾರಂಭದಲ್ಲಿ ವಿನೋದ ಪಾಟೀಲ ಸರಡಗಿ,ಶರಣಗೌಡ ಪಾಟೀಲ ಪಾಳಾ ಸೇರಿದಂತೆ ಅನೇಕ ಗಣ್ಯರು, ಸ್ನೇಹಿತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು, ಶುಭಾಶಯಗಳನ್ನು ಕೋರಿದರು.