ಹೈ ವೋಲ್ಟೇಜ್ ಲೈಟ್‌ಗಳಿಂದ ಸಂಚಾರಕ್ಕೆ ತೊಂದರೆ: ರದ್ದುಪಡಿಸಲು ಶಿವರಾಜ ಅಂಡಗಿ ಒತ್ತಾಯ

ಹೈ ವೋಲ್ಟೇಜ್ ಲೈಟ್‌ಗಳಿಂದ ಸಂಚಾರಕ್ಕೆ ತೊಂದರೆ: ರದ್ದುಪಡಿಸಲು ಶಿವರಾಜ ಅಂಡಗಿ ಒತ್ತಾಯ

ಹೈ ವೋಲ್ಟೇಜ್ ಲೈಟ್‌ಗಳಿಂದ ಸಂಚಾರಕ್ಕೆ ತೊಂದರೆ: ರದ್ದುಪಡಿಸಲು ಶಿವರಾಜ ಅಂಡಗಿ ಒತ್ತಾಯ

ಕಲಬುರಗಿ: ವಾಹನಗಳಿಗೆ ಅಳವಡಿಸಿರುವ ಹ್ಯಾವಿ ಹೆಲೋಜಿನ್ ಹಾಗೂ ಹೈ ವೋಲ್ಟೇಜ್ ಲೈಟ್‌ಗಳನ್ನು ರದ್ದುಪಡಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಶಿವರಾಜ ಅಂಡಗಿ ಒತ್ತಾಯಿಸಿದ್ದಾರೆ.

ಜಿಲ್ಲಾ ಪೊಲೀಸ್ ವ್ಯವಸ್ಥೆ ಕುರಿತು ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಪ್ರಶ್ನಿಸಿದ ಅವರು, ರಾತ್ರಿ ವೇಳೆ ವಾಹನಗಳ ಹೈ ವೋಲ್ಟೇಜ್ ಲೈಟ್‌ಗಳ ತೀವ್ರ ಬೆಳಕಿನಿಂದ ಎದುರುಗಡೆಯಿಂದ ಬರುವ ವಾಹನಗಳು ಹಾಗೂ ರಸ್ತೆ ಸ್ಪಷ್ಟವಾಗಿ ಕಾಣದೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಇದು ವೈಯಕ್ತಿಕ ಸಮಸ್ಯೆಯಲ್ಲ, ಸಾರ್ವಜನಿಕರ ಸಮಸ್ಯೆಯಾಗಿದೆ ಎಂದು ಗಮನ ಸೆಳೆದರು.

ಅಲ್ಲದೆ ದ್ವಿಚಕ್ರ ವಾಹನಗಳು ರಿಂಗ್ ರಸ್ತೆಯ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸಮಸ್ಯೆ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಹಿಂದೆ ಅಕ್ಟೋಬರ್ 9ರಂದು ಸಾರಿಗೆ ಇಲಾಖೆಯ “ಸಾರಿಗೆ ಅದಾಲತ್” ಕಾರ್ಯಕ್ರಮದಲ್ಲಿ ಹಾಗೂ ಫೆಬ್ರವರಿ 24, 2026ರಂದು ನಡೆದ ರಸ್ತೆ ಗಣತಿ ಸಂದರ್ಭದಲ್ಲಿ ಕೂಡ ಈ ಕುರಿತು ಮನವಿ ಸಲ್ಲಿಸಿದ್ದರೂ ಇದುವರೆಗೆ ಸ್ಪಷ್ಟ ಕ್ರಮ ಕಾಣುತ್ತಿಲ್ಲ ಎಂದು ಶಿವರಾಜ ಅಂಡಗಿ ತಿಳಿಸಿದ್ದಾರೆ.

ಟ್ರಾಫಿಕ್ ಪೊಲೀಸರು ಹಗಲು ವೇಳೆಯಲ್ಲಿ ಹೆಲ್ಮೆಟ್ ಕಡ್ಡಾಯಗೊಳಿಸಲು ಕೈಗೊಳ್ಳುವ ಕ್ರಮದಂತೆ, ರಾತ್ರಿ ವೇಳೆಯಲ್ಲಿಯೂ ವಾಹನಗಳ ಹೈ ವೋಲ್ಟೇಜ್ ಹೆಲೋಜಿನ್ ಲೈಟ್‌ಗಳ ವಿರುದ್ಧ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.