ಮಹೇಶ ಜೋಶಿ ಆಜೀವ ಸದಸ್ಯತ್ವ ರದ್ದು, ಕಸಾಪಕ್ಕೆ ಕಪ್ಪು ಚುಕ್ಕೆ : ಪ್ರೊ ಶಿವರಾಜ ಪಾಟೀಲ
ಮಹೇಶ ಜೋಶಿ ಆಜೀವ ಸದಸ್ಯತ್ವ ರದ್ದು, ಕಸಾಪಕ್ಕೆ ಕಪ್ಪು ಚುಕ್ಕೆ : ಪ್ರೊ ಶಿವರಾಜ ಪಾಟೀಲ
ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಮಹೇಶ ಜೋಶಿಯವರ ಆಜೀವ ಸದಸ್ಯತ್ವ ರದ್ದು ಆಗ ಸುದ್ದಿ ನೋಡಿ ಬೇಸರವಾಯಿತು ಈ ಘಟನೆ ಕಸಾಪ ಇತಿಹಾಸಕ್ಕೆ ಒಂದು ಕಪ್ಪು ಚುಕ್ಕೆ ಮಹೇಶ್ ಜೋಶಿ ಅವರು ಆಕಾಶವಾಣಿ ದೂರದರ್ಶನದ ನಿರ್ದೇಶಕರಾಗಿ ಚಂದನ ವಾಹಿನಿ ಅತ್ಯುತ್ತಮ ನಿರ್ದೇಶಕರಾಗಿ ಉನ್ನತ ಮಟ್ಟಕ್ಕೇರಿಸಿದ ಹಿನ್ನೆಲೆಯಲ್ಲಿ ಮತ್ತು ಬಿಜೆಪಿ ಅವರನ್ನು ಹೆಚ್ಚು ಕಡಿಮೆ ಪರೋಕ್ಷವಾಗಿ ಬೆಂಬಲಿಸಿ, ಕರ್ನಾಟಕದ ಆಳುವ ಸರ್ಕಾರದ ಬಿಜೆಪಿಯ ಎಲ್ಲ ಶಾಸಕರು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಅವರನ್ನು ಭಾರಿ ಬಹುಮತದಿಂದ ವಿಜಯಶಾಲಿಯನ್ನಾಗಿ ಮಾಡಿದರು ಈ ಭಾರಿ ಬಹುಮತದಿಂದ ವಿಜೇತರಾದ ಜೋಶಿಯವರು ಎಲ್ಲಿಲ್ಲದ ಅಹಂಕಾರ ದರ್ಪ ಮತ್ತು ದಬ್ಬಾಳಿಕೆ ನಡೆಸುವ ಕಾರ್ಯವನ್ನು ನಿರಂತರವಾಗಿ ನಡೆಸಿದರು ಯಾವ ಜಿಲ್ಲಾ ಅಧ್ಯಕ್ಷರನ್ನು ಸರಿಯಾಗಿ ಕಾಣದೆ ಕೆಲವರನ್ನು ನೇರವಾಗಿ ವಿರೋಧಿಸಿಕೊಂಡು ಉಳಿದವರಿಗೆ ಅವಕಾಶ ವಂಚಿತರನ್ನಾಗಿ ಮಾಡಿದ್ದು ಸುದ್ದಿ ಮಾಧ್ಯಮಗಳಲ್ಲಿ ಹರಿದಾಡಿತ್ತು ಮುಂದೆ ಬಿಜೆಪಿ ಸರಕಾರವು ಕೂಡ ಅವರಿಗೆ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ನೀಡಿ ಎಲ್ಲ ಭದ್ರತೆಯನ್ನು ಕಲ್ಪಿಸಿತು ಇದು ಸಾಕಷ್ಟು ತೀವ್ರ ವಿರೋಧಕ್ಕೆ ಕಾರಣವಾಗಿತ್ತು ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಣ ದುರ್ಬಳಿಕೆ ಯಾದದ್ದು ಪತ್ರಿಕೆಗಳಲ್ಲಿ ಸುದ್ದಿ ಆಯಿತು ಅದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕೂಡಲೇ ತನಿಖೆಯನ್ನು ಆರಂಭಿಸಿ ತು. ತನಿಕ ಸಮಯದಲ್ಲಿಯೇ ಸಂಶಯಾಸ್ಪದವಾದ ಸಂಗತಿಗಳು ಹೊರಬರಲು ಪ್ರಾರಂಭಿಸಿದವು ಕೂಡಲೇ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸಿ ತನಿಖೆ ನಡೆಸಿ ನಿಷ್ಪಕ್ಷಪಾತವಾದ ತನಿಕೆಯಲ್ಲಿ ಆಡಳಿತ ಅಧಿಕಾರಿಗಳು ಹೇಳಿರುವಂತೆ ಅಪರಾಧಗಳು ಸಾಬೀತಾಗಿರುವುದರಿಂದ ಕೂಡಲೇ ಅವರ ಆ ಜೀವ ಸದಸ್ಯತ್ವ ರದ್ದು ಮಾಡಿದ್ದು ನ್ಯಾಯಕ್ಕೆ ಸಿಕ್ಕ ಗೌರವವಾಗಿದೆ ಸತ್ಯ ಯಾವಾಗಲೂ ಗೆದಿಯುತ್ತದೆ ಎಂಬ ಮಾತು ಇಲ್ಲಿ ಅನ್ವಯಿಸುತ್ತದೆ ಜೋಶಿಯವರು ಇನ್ನೂ ಒಂದು ವರ್ಷದ ಅಧಿಕಾರವಧಿ ಇರುವಾಗಲೇ ಪರಿಷತ್ತನ್ನು ಬಿಟ್ಟು ಹೋಗುವಂತಹ ಸಂದರ್ಭ ನಿರ್ಮಾಣವಾದದ್ದುತಮ್ಮ ತಲೆಯ ಮೇಲೆ ತಾವೇ ಕೈ ಇಟ್ಟುಕೊಂಡು ಬಸ್ಮಾಸುರನಂತೆ ನಾಶವಾಗುವ ಪ್ರಯತ್ನ ಮಾಡಿದ್ದಾರೆ ಇದು ಅವರ ಸ್ವಯಂಕೃತ ಅಪರಾಧವಾಗಿದೆ ಈಗ ತೀರ್ಪು ಹೊರಬಂದ ಮೇಲೆ ಯಾವ ಸ್ಥಿತಿಯನ್ನು ಅನುಭವಿಸುತ್ತಾರೆ ಮತ್ತು ದುರ್ಬಳಕೆ ಮಾಡಿಕೊಂಡ ಹಣವನ್ನು ಹೇಗೆ ಮರಳಿಸುತ್ತಾರೆ ಇಲ್ಲವೇ ಜೈಲು ಪಾಲಾಗುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಆದರೆ ಇದು ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿಯೇ ಒಂದು ಕಪ್ಪು ಚುಕ್ಕೆಯಾಗಿದೆ ಅವರು ದೂರದರ್ಶನದಿಂದ ನಿವೃತ್ತಿ ಹೊಂದಿ ಮನೆಯಲ್ಲಿದ್ದರೆ ದೊಡ್ಡ ಹೆಸರು ದೊಡ್ಡ ಮರ್ಯಾದೆ ಉಳಿಯುತ್ತಿತ್ತು ಆದರೆ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಎಲ್ಲ ಮರ್ಯಾದೆ ಕಳೆದುಕೊಂಡು ಗುರು ಗೋವಿಂದ ಭಟ್ಟರ ಕರುಣ ಕುಡಿಯಂದು ಹೇಳಿಕೊಂಡು ಅಂತಹ ಮಹಾತ್ಮರ ಹೆಸರಿಗೆ ಕಳಂಕವನ್ನು ತಂದಿದ್ದಾರೆ ಮುಂದಿನ ಚುನಾವಣೆಯಲ್ಲಿ ಇಂಥವರನ್ನು ಆಯ್ಕೆ ಮಾಡಬಾರದು ಕೋಮುವಾದಿ ಬಿಜೆಪಿ ಇಂಥವರನ್ನು ಬೆಂಬಲಿಸಬಾರದೆಂದು ವಿನಂಬರವಾಗಿ ಪ್ರಾರ್ಥಿಸಿಕೊಳ್ಳುತ್ತೇನೆ ಮುಂದಿನ ಚುನಾವಣೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕೇಸರಿಕರಣ ಮಾಡದೆ ಸಾಹಿತ್ಯ ಸಂಸ್ಕೃತಿ ಕಲೆ ಕೇಂದ್ರವನ್ನಾಗಿ ಮಾಡಬೇಕು ಎಂದು ಮಾನ್ಯ ಮತದಾರರಲ್ಲಿ ವಿನಂತಿಸಿಕೊಳ್ಳುತ್ತೇನೆ ಕಳೆದ ಚುನಾವಣೆಯಲ್ಲಿ ನಾನು ಜೋಶಿಯವರ ವಿರುದ್ಧ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದೇನೆ ಅದಕ್ಕಾಗಿ ದ್ವೇಷ ಪೂರಿತದಿಂದ ಈ ಮಾತು ಹೇಳುತ್ತಿಲ್ಲ ಒಬ್ಬ ಕನ್ನಡಿಗನಾಗಿ ಪರಿಷತ್ತಿನ ಹಿತೈಷಿಯಾಗಿ ಈ ಮಾತನ್ನು ಹೇಳಿದ್ದೇನೆ ಮತ್ತು ಪರಿಷತ್ತನ್ನು ಮುಂದಿನ ದಿನಮಾನಗಳಲ್ಲಿ ಪರಿಶುದ್ಧ ಸಾಹಿತ್ಯ ಕೇಂದ್ರವನ್ನಾಗಿಸಬೇಕು ಅಸಾಹಿತಿಗಳನ್ನು ನಿವೃತ್ತ ಭ್ರಷ್ಟ ಅಧಿಕಾರಿಗಳನ್ನು ಮತ್ತು ಸಂಘಟಕರನ್ನು ಎಂದಿಗೂ ಆಯ್ಕೆ ಮಾಡದೆ ಅಧ್ಯಕ್ಷ ಸ್ಥಾನಗಳು ಮಾತ್ರ ಸಾಹಿತಿಗಳ ಕೈಯಲ್ಲಿದ್ದು ಉಳಿದ ಪದಾಧಿಕಾರಿಗಳು ಸಂಘಟನಾ ಚತುರರಿಗೆ ಮೀಸಲಾಗಿರಲಿ ಎಂದು ಆಶಿಸುತ್ತೇನೆ
ಪ್ರೊ ಶಿವರಾಜ್ ಪಾಟೀಲ್ ಸಾಹಿತಿಗಳು ಕಲ್ಬುರ್ಗಿ
