ಚಿಂಚೋಳಿ – ಕಾಳಗಿ ತಾಲೂಕಿನ ರೈತರ ಕೃಷಿ ಬಿತ್ತನೆ ಕಾರ್ಯಗಳಿಗೆ ಗೊಬ್ಬರ ಒದಗಿಸಿ : ರೈತ ಸೇನೆ ಅಧ್ಯಕ್ಷ ವೀರಣ ಗಂಗಾಣಿ ಆಗ್ರಹ

ಚಿಂಚೋಳಿ – ಕಾಳಗಿ ತಾಲೂಕಿನ ರೈತರ ಕೃಷಿ ಬಿತ್ತನೆ ಕಾರ್ಯಗಳಿಗೆ ಗೊಬ್ಬರ ಒದಗಿಸಿ : ರೈತ ಸೇನೆ ಅಧ್ಯಕ್ಷ ವೀರಣ ಗಂಗಾಣಿ ಆಗ್ರಹ

ಮುಂಗಾರು ಬಿತ್ತನೆ ಕಾರ್ಯಗಳಿಗೆ ಗೊಬ್ಬರದ ಕೊರತೆ ನಿಗಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಚಿಂಚೋಳಿ ಕೃಷಿ ನಿರ್ದೇಶಕ ವೀರಶೇಟ್ಟಿ ರಾಠೋಡ ಅವರಿಗೆ ಮನವಿ ಸಲ್ಲಿಕೆ

ಚಿಂಚೋಳಿ – ಕಾಳಗಿ ತಾಲೂಕಿನ ರೈತರ ಕೃಷಿ ಬಿತ್ತನೆ ಕಾರ್ಯಗಳಿಗೆ ಗೊಬ್ಬರ ಒದಗಿಸಿ : ರೈತ ಸೇನೆ ಅಧ್ಯಕ್ಷ ವೀರಣ ಗಂಗಾಣಿ ಆಗ್ರಹ

ಚಿಂಚೋಳಿ :ಈಗಾಗಲೇ ಚಿಂಚೋಳಿ – ಕಾಳಗಿ ತಾಲೂಕಿನ ರೈತರು ಕೃಷಿ ಬಿತ್ತನೆಯ ಚಟುವಟಿಕೆಗಳು ಪ್ರಾರಂಭಗೊಂಡಿವೆ. ಆದರೆ ಬಿತ್ತನೆಗೆ ರಸಗೊಬ್ಬರ ಇಲ್ಲದೇ ರೈತರು ಪರದಾಡುವಂತ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರೈತ ಸೇನೆ ಅಧ್ಯಕ್ಷ ವೀರಣ್ಣ ಗಂಗಾಣಿ ಅವರು ಆರೋಪಿಸಿದ್ದಾರೆ.

ಕಾಳಗಿ ಮತ್ತು ಚಿಂಚೋಳಿ ತಾಲೂಕಿನಲ್ಲಿ 40ಕ್ಕೂ ಹೆಚ್ಚು ಸಂಘ ಸಂಸ್ಥೆಗಳಿದ್ದು, ಒಂದು ಲಕ್ಷ ಹತ್ತು ಸಾವಿರ ಹೇಕ್ಟರ್ ರಷ್ಟು ಬಿತ್ತನೆ ಪ್ರಮಾಣ ಕ್ಷೇತ್ರ ಹೊಂದಿದೆ. ಕೃಷಿ ಇಲಾಖೆ ಕೇವಲ ಒಂದೇರಡು ವಿ.ಎಸ್.ಎಸ್.ಎನ್ ಸೂಸೈಟಿಗಳ ಮುಖಾಂತರ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುತ್ತಿರುವ ಕಾರಣ ರೈತರಿಗೆ ಗೊಬ್ಬರ ದೊರದೇ ಅಲೆದಾಡುವ ಪರಿಸ್ಥಿ ಇದೆ. ಚಿಂಚೋಳಿ-ಕಾಳಗಿ ತಾಲೂಕಿಗೆ ಒಳಪಡುವ ಎಲ್ಲಾ ವಿ.ಎಸ್.ಎಸ್.ಎನ್ ಸೂಸೈಟಿಗಳಿಗೆ ಕೃಷಿ ಇಲಾಖೆಗೆ ಬರುವ ಬೀಜ ಮತ್ತು ಗೊಬ್ಬರ ಹಾಗೂ ಎಲ್ಲಾ ಕೃಷಿ ಉಪಕರಣಗಳನ್ನು ಸೂಸೈಟಿಗಳ ಮುಖಾಂತರವೇ ರೈತರಿಗೆ ತಲುಪಿಸಬೇಕು. ಇನ್ನೂ ರೈತರಿಗೆ ಕೃಷಿ ಬಿತ್ತನೆ ಕಾರ್ಯಗಳಿಗೆ ಸುಗಮವಾಗಿ ನಡೆಯಲು ಸಂಘ ಸಂಸ್ಥೆಗಳಿಗೆ ಜಿಎಸ್ಟಿ ರಹಿತ ರಸಗೊಬ್ಬರ್ ಒದಗಿಸಲು ಇಲಾಖೆ ಕ್ರಮಕೈಗೊಳಬೇಕೆಂದು ಚಿಂಚೋಳಿ ಕೃಷಿ ಸಹಾಯಕ ನಿರ್ದೇಶಕ ವೀರಶೆಟ್ಟಿ ರಾಠೋಡ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿ, ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಚಿಂಚೋಳಿ- ಕಾಳಗಿ ವಿ.ಎಸ್.ಎಸ್.ಎನ್ ಕಾರ್ಯದರ್ಶಿಗಳಾದ ಝರಣಪ್ಪ, ಚಂದ್ರಶೇಖರ, ಸಂಜೀವಕುಮಾರ ಮುಲಗಿ, ನವಾಜೋದ್ದಿನ್, ಕೆ.ಎಂ.ಬಾರಿ, ರಾಜಶೇಖರ ಪಾಟೀಲ, ಗೋಪಾಲ ಕೆರೋಳ್ಳಿ, ಮಂಜುನಾಥ ರುದ್ದನೂರ, ಗೋಪಾಲ ಗರಗಪಳ್ಳಿ, ಮಲ್ಲಿಕಾರ್ಜುನ ರುದ್ನೂರ, ಚಿತ್ರಶೇಖರ ಸೇರಿದಂತೆ ರೈತರು ಉಪಸ್ಥಿತರಿದ್ದರು.

· ತಾಲೂಕಿನ ರೈತರ ಅಲೆದಾಡುವುದನ್ನು ತಪ್ಪಿಸಿ ಸುಗಮ ರೀತಿಯಲ್ಲಿ ಬೀಜ ಮತ್ತು ಗೊಬ್ಬರ ವಿತರಿಸಲು ಇಲಾಖೆ ಕ್ರಮ ಕೈಗೊಳ್ಳುತ್ತಿದೆ. ಸೂಸೈಟಿಗಳು ಪರವಾನಿಗೆ ಪಡೆಯುವುದು ಕಡ್ಡಾಯವಾಗಿದ್ದು, ಆ ನಿಟ್ಟಿನಲ್ಲಿ ತಾಲೂಕಿ ಎಲ್ಲಾ ಸೂಸೈಟಿಗಳಿಗೆ ತರಬೇತಿ ಕೊಟ್ಟು, ಪರವಾನಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸೂಸೈಟಿಗಳ ಮುಖಾಂತರವೇ ಬೀಜ ಮತ್ತು ಗೊಬ್ಬರ ವಿತರಿಸಲು ಕ್ರಮಕೈಗೊಳಲಿದೆ . - ಚಿಂಚೋಳಿ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ