ಬೇಂದ್ರೆ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ - ಪಂಚಾಕ್ಷರಯ್ಯ ಹಿರೇಮಠ

ಬೇಂದ್ರೆ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ - ಪಂಚಾಕ್ಷರಯ್ಯ ಹಿರೇಮಠ

ಬೇಂದ್ರೆ ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ - ಪಂಚಾಕ್ಷರಯ್ಯ ಹಿರೇಮಠ

ಶಹಪುರ : ಈ ನಾಡಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ,ಶಬ್ದ ಗಾರುಡಿಗ ಬೇಂದ್ರೆ ಅವರು ಕನ್ನಡ ಸಾಹಿತ್ಯ ಲೋಕದ ಧ್ರುವತಾರೆ ಎಂದು ಸಾಹಿತಿ,ಬರಹಗಾರ ಪಂಚಾಕ್ಷರಯ್ಯ ಹಿರೇಮಠ ಹೇಳಿದರು.

ನಗರದ ಸಿಪಿಎಸ್ ಶಾಲೆಯಲ್ಲಿ ಕರ್ನಾಟಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಬೇಂದ್ರೆ ಬೆಳಕು ಎಂಬ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು.

ಬೇಂದ್ರೆಯವರ ಮಾತೃಭಾಷೆ ಮರಾಠಿಯಾದರೂ ಕನ್ನಡ ಭಾಷೆಯ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು,ಇವರ ಸಾಹಿತ್ಯದಲ್ಲಿ ಎತೇಚ್ಛವಾಗಿ ಪ್ರಕೃತಿ,ಪ್ರೇಮ,ವಿನೋದ ವಿಡಂಬನೆಯ ಜೊತೆಗೆ ಆಧ್ಯಾತ್ಮಿಕತೆ ಮತ್ತು ಜಾನಪದ ಮಹತ್ವದ ಸಾರಾಂಶವನ್ನು ಸಾರಿ ಹೇಳುತ್ತವೆ ಎಂದು ನುಡಿದರು.

ಮುಖ್ಯ ಅತಿಥಿಗಳಾದ ರಮೇಶ ಉಕ್ಕಲಿ ಮಾತನಾಡಿ ಇವರ ಕೃತಿಗಳಾದ ಕೃಷ್ಣಕುಮಾರಿ, ಸಖಿಗೀತ,ಉಯ್ಯಾಲೆ,ನಾದಲೀಲೆ, ಮೇಘದೂತ,ಗಂಗಾವತರಣ, ಮುಂತಾದ ಮೌಲ್ಯಯುತ ಕೃತಿಗಳು ನಾಡಿಗೆ ಪರಿಚಯಿಸಿದ್ದಾರೆ ಅವುಗಳನ್ನು ಓದಿ ಅರ್ಥೈಸಿಕೊಳ್ಳಬೇಕಾಗಿದೆ ಎಂದು ಸಲಹೆ ನೀಡಿದರು.

ಮುಖ್ಯ ಗುರುಗಳು ಹಾಗೂ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ಲಕ್ಷ್ಮೀಬಾಯಿ ಅಗಸಿಮನಿ ಮಾತನಾಡಿ ಕೇವಲ ಕಾವ್ಯವಸ್ಟೆ ಅಲ್ಲದೇ ಬೇಂದ್ರೆಯವರು ನಾಟಕ,ವಿಮರ್ಶೆ, ಮತ್ತು ವೈಚಾರಿಕತೆಯ ಲೇಖನಗಳನ್ನು ರಚಿಸಿ ಬೇಂದ್ರೆ ಮಾಸ್ತರ ಎಂದೆ ಪ್ರಸಿದ್ಧಿ ಪಡೆದು ಸಾರ್ಥಕ ಜೀವನ ನಡೆಸಿದವರು ಎಂದು ನುಡಿದರು.

ಈ ಸಮಾರಂಭದ ವೇದಿಕೆಯ ಮೇಲೆ ಇಂದಿರಾ ಕೆ,ವಿ.ಸಾಬರೆಡ್ಡಿ, ಸೇರಿದಂತೆ ಇನ್ನಿತರರು ಜೊತೆಗಿದ್ದರು,ಈ ಕಾರ್ಯಕ್ರಮವನ್ನು ಚೆನ್ನಬಸವ ನಿರೂಪಿಸಿ ಸ್ವಾಗತಿಸಿ ವಂದಿಸಿದರು.