ಸುಕ್ಷೇತ್ರ ಹಾರಕೂಡ- ಸಬರದರ ಎರಡು ಕೃತಿ ಬಿಡುಗಡೆ

ಸುಕ್ಷೇತ್ರ ಹಾರಕೂಡ- ಸಬರದರ ಎರಡು ಕೃತಿ ಬಿಡುಗಡೆ

ಸುಕ್ಷೇತ್ರ ಹಾರಕೂಡ- ಸಬರದರ ಎರಡು ಕೃತಿ ಬಿಡುಗಡೆ

ಪುಸ್ತಕದ ಕಾಶಿ ಹಾರಕೂಡ ಮಠ - ಪ್ರೊ. ಡಿ. ವಿ. ಪರಶಿವಮೂರ್ತಿ

ಬಸವಕಲ್ಯಾಣ:ಹಾರಕೂಡ ಮಠ 108 ವೈವಿಧ್ಯಮಯ ಮೌಲಿಕ ಕೃತಿಗಳನ್ನು ಪ್ರಕಟಿಸಿ ಪುಸ್ತಕದ ಕಾಶಿಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಡಿ. ವಿ. ಪರಶಿವಮೂರ್ತಿ ತಿಳಿಸಿದರು.

     ತಾಲೂಕಿನ ಹಾರಕೂಡ ಶ್ರೀಮಠದಲ್ಲಿ ಡಾ. ಬಸವರಾಜ ಸಬರದ ಅವರು ರಚಿಸಿದ ಬೀದರ ಜಿಲ್ಲೆಯ ತತ್ವಪದಕಾರ ರು ಮತ್ತು ತತ್ವಪದ ಸಾಹಿತ್ಯ ಮೀಮಾಂಸೆ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು ಪಂಡಿತರನ್ನು, ರಾಜ ಮಹಾರಾಜರನ್ನು ಮೆಚ್ಚಿಸಲಿಕ್ಕೆ ಕಾವ್ಯಗಳನ್ನು ಪುಸ್ತಕಗಳನ್ನು ಬರೆದರು ಬಹಳ ಜನ ಕವಿಗಳಾಗಿದ್ದಾರೆ, ವಿದ್ವಾಂಸರಾಗಿದ್ದಾರೆ, ಆದರೆ ಜನಸಾಮಾನ್ಯರನ್ನು ಕುರಿತು ಬರೆದವರು 12ನೇ ಶತಮಾನ ದ ಶರಣರು.ಮನುಷ್ಯ ದೇಹ ಒಂದು ತುಚ್ಛ ಶರೀರ ಎಂದು ಅಲ್ಲಗಳೆದ ಸಂದರ್ಭದಲ್ಲಿ ಶರಣರು ಮಾನವ ಶರೀರವನ್ನು ವೈಭವಿಕರಿಸಿದರು, ದೇಹವನ್ನು ದೇವಾಲಯಕ್ಕೆ ಹೋಲಿಸಿ ದೇಹವೇ ದೇವಾಲಯ ಎಂದು ಹೇಳಿದರು. ಬಸವಾದಿ ಶರಣರಿದ್ದಾರೆಂದು ಹೇಳಿದರು.ತತ್ವಪದ ಸಾಹಿತ್ಯ ಮೀಮಾಂಸೆ ಒಂದು ಅಪರೂಪದ ಕೃತಿ‌ ಎಂದರು.

                    ಹಂಪಿ ವಿಶ್ವವಿದ್ಯಾಲಯದ ಶಾಸನ ವಿಭಾಗದ ಮುಖ್ಯಸ್ಥರಾದ ಡಾ. ಅಮರೇಶ ಯತಗಲ್ಲ ಮಾತನಾಡಿ, ನಮ್ಮನ್ನು ನಾವು ಪ್ರೀತಿಸುವ ಮನಸುಳ್ಳವರು ಮಾತ್ರ ಇತರರನ್ನು ಪ್ರೀತಿಸಲು ಸಾಧ್ಯ, ಹಾಗಾಗಿ ತತ್ವಪದಕಾರರು ತಮ್ಮನ್ನು ತಾವು ಪ್ರೀತಿಸಿ ಸಮಾಜವನ್ನು ಪ್ರೀತಿಸಿದರು.

 ಸಮಾಜದ ಓರೆ ಕೋರೆಗಳನ್ನು ತಮ್ಮ ಹಾಡುಗಳ ಮುಖಾಂತರ ತಿದ್ದಲು ಪ್ರಯತ್ನಿಸಿದರು.

 ತತ್ವಪದಕಾರರಿಗೆ ಪ್ರಭುತ್ವ ಮುಖ್ಯವಾಗಿರಲಿಲ್ಲ, ಜನಸಾಮಾನ್ಯರ ಬದುಕು ಮುಖ್ಯವಾಗಿತ್ತು.ಇಂತಹ ಕೃತಿ ರಚಿಸಿದ ಸಬರದರು ಮತ್ತು ಪ್ರಕಟಿಸಿದ ಮಠದ ಕಾರ್ಯ ಶ್ಲಾಘನೀಯ ಎಂದರು.

               ಲೇಖಕರಾದ ಡಾ. ಬಸವರಾಜ ಸಬರದ ಅವರು ಮಾತನಾಡಿ, ನಾನು ರಚಿಸಿದ ಕೃತಿ ಹಾರಕೂಡ ಶ್ರೀಮಠದಿಂದ ಪ್ರಕಟಗೊಂಡಿದೆ.ತಮ್ಮ ಪ್ರಕಾಶನ ಸಂಸ್ಥೆಯಿಂದ ಪ್ರಕಟಿಸಿದ ಹಾರಕೂಡ ಹಿರೇಮಠ ಸಂಸ್ಥಾನದ ಪೀಠಾಧಿಪತಿಗಳು ಡಾ. ಚನ್ನವೀರ ಶಿವಾಚಾರ್ಯರಿಗೆ ನಾನು ಕೃತಜ್ಞನಾಗಿದ್ದೇನೆ.ಪೂಜ್ಯರದು ಮಾತ್ರ ಹೃದಯವಾಗಿದೆ.ತಾಯಿ ತನ್ನ ಮಕ್ಕಳನ್ನು ಬಹಳ ಪ್ರೀತಿ ವಾತ್ಸಲ್ಯದಿಂದ ಕಾಣುವಂತೆ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರು ಕವಿ, ಸಾಹಿತ್ಯ, ಕಲಾವಿದರನ್ನು ತಮ್ಮ ಮಕ್ಕಳಂತೆ ಕಂಡು ಪ್ರೀತಿಸಿ ಪ್ರೋತ್ಸಾಹಿಸಿ, ಬೆಳೆಸುವವರಾಗಿದ್ದಾರೆ ಎಂದರು.ನನ್ನ ಸಾಹಿತ್ಯ ಮೇಲಿನದ್ದಲ್ಲ‌ ಕೆಳಗಿನಿಂದ ಮೇಲಕ್ಕೆ ಬರಬೇಕು. ಜನಸಾಮಾನ್ಯರ ನೋವು ನಲಿವುಗಳು ಅವರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುತ್ತೇನೆಂದರು.

ಹಿರಿಯ ಸಾಹಿತಿ ಡಾ. ಗವಿಸಿದ್ದಪ್ಪ ಪಾಟೀಲ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹಾರಕೂಡ ಮಠ ಕನ್ನಡದ ಮಠವಾಗಿದೆ. ಪುಸ್ತಕ ಸಂಸ್ಕೃತಿ ಬೆಳೆಸುವ ಜತೆ ತತ್ವಪದ ಸಾಹಿತ್ಯದ ಹಲವು ಕೃತಿಗಳನ್ನು ಪ್ರಕಟಿಸಿದೆ. ಡಾ.ಸಬರದ ಎರಡು ಮೌಲಿಕ ಕೃತಿಗಳನ್ನು ಕೊಡುವ ಮೂಲಕ ತತ್ವಪದ ಸಾಹಿತ್ಯ ವಿದ್ವಾಂಸರಾಗಿದ್ದಾರೆ. ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಸಾಹಿತಿ, ಕವಿ, ಕಲಾವಿದರಿಗೆ ಪ್ರೋತ್ಸಾಹ ನೀಡುವ ಮಠಾಧೀಶರು ಕನ್ನಡ ಮಠವಾದಂತೆ ಚಿನ್ನದ ಮಠವಾಗಿದೆ ಎಂದರು.

ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು, ಹಾರಕೂಡ ಪಾವನ ಸಾನಿಧ್ಯ ವಹಿಸಿದ್ದರು.

 ಬಿ. ಕೆ. ಹಿರೇಮಠ ವಿಶ್ರಾಂತ ಉಪ ಕಾರ್ಯದರ್ಶಿಗಳು, ಜಿ. ಪಂ. ಬೀದರ ಅಧ್ಯಕ್ಷತೆ ವಹಿಸಿದ್ದರು.

ಡಾ.ಬಸವರಾಜ ಸಬರದ ಮತ್ತು

ಡಾ. ವಿಜಯಶ್ರೀ ಸಬರದ ಸಾಹಿತಿ ದಂಪತಿಗಳಿಗೆ ಸನ್ಮಾನಿಸಿದರು. ನಿವೃತ್ತ ಮುಖ್ಯಗುರುಗಳಾದ ಪಿ. ಕೆ. ಹಿರೇಮಠ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಡಾ.ಶಾಂತಪ್ಪ ಡಂಬಳ,ಶಿಕ್ಷಕ ಮಲ್ಲಿನಾಥ ಹಿರೇಮಠ ಹಾರಕೂಡ,ಮೇಘರಾಜ ನಾಗರಾಳೆ, ಸಿದ್ರಾಮಪ್ಪ ಗುದಗೆ ಉಪಸ್ಥಿತರಿದ್ದರು.ಪ್ರಾರ್ಥನೆ ಕಾರ್ತೀಕ ಸ್ವಾಮಿ ಯಲದಗುಂಡಿ ಮತ್ತು ಶರಣಪ್ಪ ಸುಂಠಾಣ ನಡೆಸಿಕೊಟ್ಟ ರು.ಬಸವರಾಜ ಐನೋಳಿ ನಿರೂಪಿಸಿದರು ಡಾ.ರಾಜಕು ಮಾರ ಮಾಳಗೆ ವಂದಿಸಿದರು.