ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉತ್ಸವ ಸಮಿತಿ ಅಧ್ಯಕ್ಷರಿಗೆ ಗೃಹ ಸನ್ಮಾನ

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉತ್ಸವ ಸಮಿತಿ ಅಧ್ಯಕ್ಷರಿಗೆ ಗೃಹ ಸನ್ಮಾನ

ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಉತ್ಸವ ಸಮಿತಿ ಅಧ್ಯಕ್ಷರಿಗೆ ಗೃಹ ಸನ್ಮಾನ

ಕಲಬುರಗಿ, ಜೂನ್ 26: ಜುಲೈ 2 ರಂದು ನಡೆಯಲಿರುವ 146ನೇ ವಚನ ಸಾಹಿತ್ಯ ಸಂಶೋಧನಾ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜಯಂತಿ ಅಂಗವಾಗಿ ರಾಜ್ಯ ಸರ್ಕಾರದ ವತಿಯಿಂದ ಆಚರಿಸಲಾಗುವ 5ನೇ ವರ್ಷದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಚನ್ನಮಲ್ಲಪ್ಪಾ ಗು. ಯಳಸಂಗಿ ಅವರಿಗೆ ಗೃಹ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಕಾರ್ಯಾಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಗಳು ಹಾಗೂ ನ್ಯಾಯವಾದಿಗಳಾದ ಶಿವರಾಜ ಅಂಡಗಿ, ಜಿಲ್ಲಾ ಹಟಗಾರ ಸಮಾಜದ ಅಧ್ಯಕ್ಷ ಶ್ರವಣಕುಮಾರ ಮುನ್ನೊಳ್ಳಿ, ಹಿರಿಯ ಲೇಖಕ ಸೂರ್ಯಕಾಂತ ಸೊನ್ನದ, ನಿವೃತ್ತ ಹಿರಿಯ ಶಿಕ್ಷಕ ರಾವ್ ಬಹದ್ದೂರ್ ರೂಗಿ, ನಿವೃತ್ತ ಅಭಿಯಂತರ ಸೋಮಶೇಖರ ದುತ್ತರಗಿ, ಸಮಾಜಸೇವಕ ರಾಜಶೇಖರ ಘಸನೆ ಹಾಗೂ ಸಂಘದ ಕಾರ್ಯದರ್ಶಿ ಚಂದ್ರಕಾಂತ ಎಂ. ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನ್ಯಾಯವಾದಿ ಸತೀಶ ಜಮಖಂಡಿ ಸ್ವಾಗತಿಸಿ ಮಾತನಾಡಿದರು. ನ್ಯಾಯವಾದಿ ಜೇನವೆರಿ ವಿನೋದಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ನಿವೃತ್ತ ಅಬಕಾರಿ ಅಧಿಕ್ಷಕರಾದ ಶ್ರೀ ಚನ್ನಮಲ್ಲಪ್ಪಾ. ಗು. ಯಳಸಂಗಿ ಅವರ ಪರಿಚಯ ನೀಡಿ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಿರುವ ಗುಲಬರ್ಗಾ ಹಟಗಾರ ಅಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರಾದ ಶ್ರೀ ಚನ್ನಮಲ್ಲಪ್ಪಾ ಯಳಸಂಗಿ ಅವರನ್ನು ಗಣ್ಯರು ರೇಷ್ಮೆ ಜರಿಉಳ್ಳ ಶಾಲು ಹೊದಿಸಿ, ನೂಲಿನ ಹಾರ ಹಾಕಿ ಸನ್ಮಾನಿಸಿ, ಗೌರವಿಸಿ ಶುಭ ಹಾರೈಸಿದರು.

ಛಾಯಾಗ್ರಾಹಕ ರಾಜು ಕೋಷ್ಠಿ ವಂದನಾರ್ಪಣೆ ಸಲ್ಲಿಸಿದರು.