ಸೋಲಾರ್ ಪಾರ್ಕ್: ಖಾಸಗಿ ಕಂಪನಿಗಳಿAದ ರೈತರಿಗೆ ಅನ್ಯಾಯವಾಗದಿರಲಿ: ಶಾಸಕ ಪ್ರಭು ಚವ್ಹಾಣ --
ಸೋಲಾರ್ ಪಾರ್ಕ್: ಖಾಸಗಿ ಕಂಪನಿಗಳಿ0ದ ರೈತರಿಗೆ ಅನ್ಯಾಯವಾಗದಿರಲಿ: ಶಾಸಕ ಪ್ರಭು ಚವ್ಹಾಣ
ಕಮಲಗರ ತಾಲ್ಲೂಕಿನಲ್ಲಿ ಬೃಹತ್ ಪವರ್ ಗ್ರಿಡ್ ಉಪ ಕೇಂದ್ರದ ಜೊತೆಗೆ ಸುಮಾರು 25 ಸಾವಿರ ಎಕರೆಯಲ್ಲಿ ಬೃಹತ್ ಸೋಲಾರ್ ಪಾರ್ಕ್ ಯೋಜನೆ ನಡೆಯುತ್ತಿದೆ. ಈ ಯೋಜನೆಗೆ ಜಮೀನು ನೀಡುತ್ತಿರುವ ರೈತರಿಗೆ ಅನ್ಯಾಯವಾಗಬಾರದು ಎಂದು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ತಿಳಿಸಿದರು.
ಮಾಳೆಗಾಂವ–ಚಿಮ್ಮೇಗಾAವ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಪವರ್ ಗ್ರಿಡ್ ಸಬ್ ಸ್ಟೇಷನ್ ಕಾಮಗಾರಿ ಸ್ಥಳಕ್ಕೆ ಜೂ. 6ರಂದು ಭೇಟಿ ನೀಡಿ ಕಾಮಗಾರಿ ವೀಕ್ಷಿಸಿ ಅವರು ಮಾತನಾಡಿದರು. ಸೋಲಾರ್ ಪಾರ್ಕ್ ಯೋಜನೆಗಾಗಿ ಅನೇಕ ಖಾಸಗಿ ಕಂಪನಿಗಳು ನೇರವಾಗಿ ರೈತರನ್ನು ಭೇಟಿಯಾಗಿ ಜಮೀನು ಪಡೆಯುತ್ತಿವೆ. ರೈತರ ಮುಗ್ದತೆಯನ್ನು ದುರುಪಯೋಗ ಮಾಡಿಕೊಂಡು ಕಡಿಮೆ ಹಣ ಕೊಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಮಲನಗರ ತಾಲ್ಲೂಕಿನ ಮುರ್ಕಿ, ಠಾಣಾ ಕುಶನೂರ, ಚಿಕ್ಲಿ(ಯು), ಚಿಮ್ಮೇಗಾಂವ ಸೇರಿದಂತೆ ಮತ್ತಿತರೆ ಗ್ರಾಮಗಳಲ್ಲಿ ಯೋಜನೆಗಾಗಿ ಜಮೀನು ಪಡೆಯುವ ಕೆಲಸ ನಡೆಯುತ್ತಿದೆ. ಈ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಈ ಯೋಜನೆ ಯಶಸ್ವಿಯಾಗಬೇಕು. ಆದರೆ ತಮ್ಮ ಬದುಕಿಗೆ ಆಸರೆಯಾದ ಜಮೀನನ್ನು ನೀಡುತ್ತಿರುವ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು ಎಂದು ಖಾಸಗಿ ಕಂಪನಿಗಳಿಗೆ ಎಚ್ಚರಿಸಿದರು.
ಇಂತಹದ್ದೇ ಯೋಜನೆಗೆ ಲೀಸ್ ಆಧಾರದ ಮೇಲೆ ಪಡೆಯಲು ಮಹಾರಾಷ್ಟ್ರದಲ್ಲಿ ಪ್ರತಿ ಎಕರೆಗೆ ವರ್ಷಕ್ಕೆ 50 ಸಾವಿರ ನಿಗದಿಪಡಿಸಲಾಗಿದೆ. ಆದರೆ ನಮ್ಮ ಭಾಗದಲ್ಲಿ 30 ರಿಂದ 35 ಸಾವಿರ ಮಾತ್ರ ನೀಡಲಾಗುತ್ತಿದೆ ಎಂದು ಬಹಳಷ್ಟು ರೈತರು ನನ್ನನ್ನು ಭೇಟಿಯಾಗಿ ತಮ್ಮ ಸಮಸ್ಯೆಗಳನ್ನು ಹಂಚಿಕೊAಡಿದ್ದಾರೆ. ಕಂಪನಿಗಳು ಈ ರೀತಿಯ ತಾರತಮ್ಯ ಮಾಡದೇ, ನಮ್ಮ ರೈತರಿಗೆ ನ್ಯಾಯಯುತ ಹಾಗೂ ಸೂಕ್ತ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು. ಅಲ್ಲದೇ ನಮ್ಮಲ್ಲಿಯೂ ಕನಿಷ್ಠ 50 ಸಾವಿರ ಬಾಡಿಗೆ ದರ ನಿಗದಿಪಡಿಸಬೇಕು ಎಂದರು.
ಪವರ್ ಗ್ರಿಡ್ ಉಪ ಕೇಂದ್ರ ಪರಿಶೀಲನೆ: ಪವರ್ ಗ್ರಿಡ್ ಉಪ ಕೇಂದ್ರದಲ್ಲಿ ಸಂಚರಿಸಿ ಎಲ್ಲ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದರು. ಕಾಮಗಾರಿ ಗುಣಮಟ್ಟದಿಂದ ಮತ್ತು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು. ಕ್ಯೂರಿಂಗ್ ಸರಿಯಾಗಿ ಮಾಡಬೇಕು. ಗುಣಮಟ್ಟದ ಕುರಿತಂತೆ ಯಾವುದೇ ರೀತಿಯ ದೂರುಗಳು ಬಾರದಂತೆ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಔರಾದ(ಬಿ) ಕ್ಷೇತ್ರಕ್ಕೆ ದೊಡ್ಡ ಯೋಜನೆ ತರಬೇಕೆಂಬುದು ನನ್ನ ಬಹಳಷ್ಟು ದಿನಗಳ ಕನಸಾಗಿತ್ತು. ಇದಕ್ಕಾಗಿ ಸುಮಾರು 15 ವರ್ಷಗಳ ಕಾಲ ಸತತ ಪ್ರಯತ್ನಪಟ್ಟಿದ್ದೇನೆ. ಅದರಂತೆ ಸಾಕಷ್ಟು ಪ್ರಯತ್ನ ವಹಿಸಿ ಪವರ್ ಗ್ರಿಡ್ ಉಪ ಕೇಂದ್ರವನ್ನು ತಂದಿದ್ದೇನೆ. ಕೇಂದ್ರ ಸರ್ಕಾರದ ಯೋಜನೆ ಇದಾಗಿದ್ದು, 2360 ಕೋಟಿ ಮೊತ್ತದ ಬೃಹತ್ ಯೋಜನೆ 164 ಎಕರೆಯಲ್ಲಿ ಭವ್ಯವಾಗಿ ನಿರ್ಮಾಣಗೊಳ್ಳುತ್ತಿದೆ. ಇಲ್ಲಿಂದ ಹೈದ್ರಾಬಾದ, ಕರನೂಲ, ಮಹಾರಾಷ್ಟç ರಾಜ್ಯದ ಪರಳಿಗೆ ವಿದ್ಯುತ್ ಲೈನ್ ಹೋಗುತ್ತದೆ. ಈ ಯೋಜನೆಯ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದೆ. ಪ್ರಧಾನಿಯವರಿಂದಾಗಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿದ್ದರಿAದ ಪ್ರಧಾನಿ ನರೇಂದ್ರ ಮೋದಿಯವರು ಉದ್ಘಾಟನೆಗೆ ಬರಬೇಕೆಂಬುದು ನನ್ನ ಬಯಕೆಯಾಗಿದೆ. ಅವರನ್ನು ಬರುವಂತೆ ಪ್ರಾರ್ಥಿಸುತ್ತೇನೆ ಎಂದು ಶಾಸಕರು ತಿಳಿಸಿದರು.
ನನ್ನ ಆಶಯದಂತೆ ಕಾಮಗಾರಿ ಸ್ಥಳದಲ್ಲಿ ತಾಂತ್ರಿಕ ಹುದ್ದೆಗಳನ್ನು ಹೊರತುಪಡಿಸಿ ಉಳಿದೆಲ್ಲರೂ ಸ್ಥಳೀಯರೇ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಬಳಕೆಯಾಗುವ ಟ್ರಾö್ಯಕ್ಟರ್, ಟಿಪ್ಪರ್, ಜೆಸಿಬಿ ಯಂತ್ರಗಳು ಒಳಗೊಂಡAತೆ ಯಂತ್ರೋಪಕರಣಗಳು ಸ್ಥಳೀಯರದ್ದೇ ಪಡೆಯಲಾಗಿದೆ. ಸಣ್ಣ ಪುಟ್ಟ ಕೆಲಸಗಾರರು ಕೂಡ ಸ್ಥಳೀಯರನ್ನೇ ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಸ್ಥಳೀಯರಿಗೆ ಆದ್ಯತೆ ನೀಡುವಂತೆ ತಿಳಿಸಿದ್ದೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪವರ್ ಗ್ರಿಡ್ ಕಾರ್ಪೋರೇಷನ್ ಡೆಪ್ಯೂಟಿ ಜನರಲ್ ಮ್ಯಾನೇಜರ್ ಗಣೇಶ ಮಾತನಾಡಿದರು. ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಅನೀಲ ಬಿರಾದಾರ, ಮಾಧವ ಮಾಳಕಾರಿ, ಪ್ರಹ್ಲಾದ ಚಿಮ್ಮೇಗಾಂವ, ಧನಾಜಿ ರಾಠೋಡ ಸೇರಿದಂತೆ ಪವರ್ ಗ್ರಿಡ್ ಉಪ ಕೇಂದ್ರದ ಅಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
