ಸಾರ್ವಜನಿಕರ ಸಹಾಯ, ಸಹಕಾರದಿಂದ ಮುಕ್ತವಾಗಿ ಕಾರ್ಯನಿರ್ವಹಿಸಿದ್ದೇವೆ :..

ಸಾರ್ವಜನಿಕರ ಸಹಾಯ, ಸಹಕಾರದಿಂದ ಮುಕ್ತವಾಗಿ ಕಾರ್ಯನಿರ್ವಹಿಸಿದ್ದೇವೆ :..

| ಸ್ವಾಗತ, ಬೀಳ್ಕೊಡುಗೆ ಮತ್ತು ವಯೋ ನಿವೃತ್ತಿ ಸಮಾರಂಭ |

ಸಾರ್ವಜನಿಕರ ಸಹಾಯ, ಸಹಕಾರದಿಂದ ಮುಕ್ತವಾಗಿ ಕಾರ್ಯನಿರ್ವಹಿಸಿದ್ದೇವೆ :..

ಶಹಾಬಾದ : - ನಗರ ಸಭೆಯ ಸಭಾಂಗಣದಲ್ಲಿ ಸಿಬ್ಬಂದಿ ವರ್ಗದ ಸ್ವಾಗತ, ಬೀಳ್ಕೊಡುಗೆ ಹಾಗೂ ವಯೋ ನಿವೃತ್ತಿ ಸಮಾರಂಭ ನಡೆಯಿತು.

ಸುಮಾರು 30 ವರ್ಷಗಳ ಕಾಲ ರಾಜ್ಯದ ವಿವಿಧ ಪುರಸಭೆ, ಶಹಾಬಾದ ನಗರಸಭೆ ಯಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಹೊಂದಿದ ಸಿದ್ದಪ್ಪ ಸೋಂಪುರ ಮತ್ತು ನಗರ ಸಭೆಯಲ್ಲಿ ಕಂದಾಯ ನಿರೀಕ್ಷಕರಾಗಿ ಸುರೇಶ ಮೈಂದರಗಿ ಅವರು 4 ವರ್ಷಗಳ ಕಾಲ ಸೇವೆ ಸಲ್ಲಿಸಿ, ಕಂದಾಯ ಅಧಿಕಾರಿಗಳಾಗಿ ಪದೊನ್ನತಿ ಹೊಂದಿ ವರ್ಗಾವಣೆ ಹಾಗೆ ನೂತನವಾಗಿ ಕಂದಾಯ ನಿರೀಕ್ಷಕರಾಗಿ ಆಗಮಿಸಿದ ಆನಂದ್ ಅವರಿಗೆ ಸ್ವಾಗತ ಸಮಾರಂಭ ಏರ್ಪಡಿಸಲಾಗಿತ್ತು 

ಈ ಸಮಾರಂಭದಲ್ಲಿ ವಯೋಮಿತಿ ಹೊಂದಿದ ಸಹಾಯಕ ಅಭಿಯಂತರ ಸಿದ್ದಪ್ಪ ಸೋಂಪುರ ಹಾಗೂ ಕಂದಾಯ ನಿರೀಕ್ಷಕ ಸುರೇಶ ಮೈಂದರಗಿ ಯವರು ಶಹಾಬಾದ ನಗರ ಸಭೆಯಲ್ಲಿ ತಾವು ಸಲ್ಲಿಸಿದ ಸೇವೆಗಳ ಬಗ್ಗೆ ಬಾವುಕವಾಗಿ ಮಾತನಾಡಿದರು.

ಮೊದಲ ಬಾರಿಗೆ ಶಹಾಬಾದ ನಗರ ಸಭೆಗೆ ಬರುವಾಗ ಶಹಾಬಾದ ಜನರು ಒರಟಾಗಿದ್ದಾರೆ, ಅಲ್ಲಿ ಹೇಗೆ ಕೆಲಸ ಮಾಡುತ್ತೀರಿ ಎಂದು ಭಯ ಹುಟ್ಟಿಸಿದರು ಆದರೆ ಇಲ್ಲಿ ಬಂದು ಕೆಲಸ ಮಾಡುವಾಗ ಎಲ್ಲರ ಸಹಕಾರ ಸಿಕ್ಕಿದೆ ಇಲ್ಲಿನ ಜನರು ಬಹಳ ಸಹಕಾರ ಮನೋಭಾವದವರಾಗಿದ್ದಾರೆ ಎಂದು ಬಣ್ಣಿಸಿದರು.

ಸಾರ್ವಜನಿಕರ ಸಹಾಯ, ಸಹಕಾರದಿಂದ ಮುಕ್ತವಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿ ಕೊಟ್ಟ ತಮಗೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

ವೇದಿಕೆ ಮೇಲೆ ಸಹಾಯಕ ಅಭಿಯಂತರ ಸಿದ್ದಪ್ಪ ಸೊಂಪುರ, ಶ್ರೀಮತಿ ಗೀತಾ ಸೋಂಪುರ, ಕಂದಾಯ ನಿರೀಕ್ಷಕ ಸುರೇಶ ಮೈಂದರಗಿ, ವ್ಯವಸ್ಥಾಪಕ ಶರಣಗೌಡ, ಕಂದಾಯ ನಿರೀಕ್ಷಕ ಆನಂದ ಇದ್ದರು.

ನಗರ ಸಭೆ ವ್ಯವಸ್ಥಾಪಕ ಶರಣಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ನಗರಸಭೆಯ ಮಾಜಿ ಸದಸ್ಯರಾದ ಕಾಶಿನಾಥ ಜೋಗಿ, ಫಜಲ ಪಟೇಲ, ಸಾಬೇರಾ ಬೇಗಂ, ಸಾಹೇಬಗೌಡ ಬೋಗುಂಡಿ, ಮಹ್ಮದ ಜಾವೇದ, ಸಾಜೀದ ಗುತ್ತೇದಾರ, ಮಹೇಬೂಬ ಗೋಗಿ, ಸಿಬ್ಬಂದಿಗಳಾದ ಮೈನುದ್ದೀನ, ಶಿವಾನಂದ, ಸುನಿಲ ಕಣ್ಣಿ, ಮಹಾನಂದ, ಪ್ರಭಾಕರ, ರಬ್ಬಾನಿ ಉಪಸ್ಥಿತರಿದರು.

ರಘುನಾಥ ನರ್ಸಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಬಣ್ಣ ಸುಂಗುಲಕರ ಸ್ವಾಗತಿಸಿ, ನಿರೂಪಿಸಿದರು, ನಾರಾಯಣ ರೆಡ್ಡಿ ವಂದಿಸಿದರು.