ಮಾಜಿ ಶಾಸಕರಾದ ಕೈಲಾಸನಾಥ ವೀರೇಂದ್ರ ಪಾಟೀಲರಿಗೆ MLC ಮಾಡಿ: ವೀರಶೈವ ಲಿಂಗಾಯತ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಆಗ್ರಹ
ಮಾಜಿ ಶಾಸಕರಾದ ಕೈಲಾಸನಾಥ ವೀರೇಂದ್ರ ಪಾಟೀಲರಿಗೆ MLC ಮಾಡಿ: ವೀರಶೈವ ಲಿಂಗಾಯತ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಆಗ್ರಹ
ಚಿಂಚೋಳಿ : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭದ್ರವಾಗಿ ನೆಲೆವೂರಲು ಶ್ರಮಿಸಿದ ಅಗ್ರಗಣ್ಯ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ವೀರೇಂದ್ರ ಪಾಟೀಲ ಅವರ ಕೊಡುಗೆ ಅಪಾರವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಹೇಳಿದರು.
ಪ್ರಕಟಣೆ ನೀಡಿರುವ ಅವರು, ರಾಜ್ಯಕ್ಕೆ ಮತ್ತು ಪಕ್ಷಕ್ಕೆ ದಿವಂಗತ ವೀರೇಂದ್ರ ಪಾಟೀಲ ಅವರ ಕೊಡುಗೆ ಅಪಾರವಾಗಿದೆ ಎನ್ನುವದು ಯಾರು ಅಲ್ಲಗಳೆಯುವಂತಿಲ್ಲ. ಅವರೊಬ್ಬ ದೂರದೃಷ್ಟಿಯ ನಾಯಕರಾಗಿದರು. ವೀರೇಂದ್ರ ಪಾಟೀಲರು ತಮ್ಮ ಅಧಿಕಾರ ಅವಧಿಯಲ್ಲಿ ಚಂದ್ರಂಪಳ್ಳಿಯಿಂದ ಹಿಡಿದು ಹಾರಂಗಿ ಜಲಾಶಯದವರೆಗೆ ಸಾವಿರಾರು ಎಕರೆಗೆ ಶಾಶ್ವತ ನೀರಾವರಿ ಯೋಜನೆಗಳನ್ನು ನಿರ್ಮಿಸಿ ಕೊಟ್ಟಿದ್ದು ಒಂದು ರೋಚಕ ಇತಿಹಾಸವಿದೆ. ಪಾಟೀಲರು ತಮ್ಮ ಇಡೀ ಜೀವನವನ್ನು ಕಾಂಗ್ರೆಸ್ ಪಕ್ಷದ ಧ್ಯೇಯ ಉದ್ದೇಶಗಳ ಜಾರಿಗಾಗಿ ಶ್ರಮಿಸಿವಹಿಸಿದ ಗಟ್ಟಿ ಎದೆಗಾರಿಕೆ ಹೊಂದಿರುವ ನಾಯಕ ಆಗಿದ್ದರು. 1989ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ 179 ಜನ ಶಾಸಕರನ್ನು ಗೆಲ್ಲಿಸಿಕೊಂಡು ಉತ್ತಮ ಆಡಳಿತ ನಡೆಸಿದರು. ಅವರ ನಾಯಕತ್ವಕ್ಕೆ ಯಾರು ಸರಿಸಾಟಿಯಿಲ್ಲ. ದುರ್ದೈವ ಎಂದರೆ ಅವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣ ಗೊಳಿಸಲಿಲ್ಲ. ತಂದೆಯ ಮಾರ್ಗದ ದಾರಿಯಲ್ಲೇ ನಡೆದು ಸಾರ್ವಜನಿಕ ಕ್ಷೇತ್ರದಲ್ಲಿ ಅತೀ ಸರಳ ಸಜ್ಜನಿಕೆಯ ರಾಜಕಾರಣಿ ಎನ್ನಿಸಿಕೊಂಡವರು ಅವರ ಸುಪುತ್ರ ಕೈಲಾಸನಾಥ ಪಾಟೀಲರು. ಆದರೆ ಕೇವಲ ಒಂದು ಬಾರಿ ಮಾತ್ರ ಚಿಂಚೋಳಿಯಿಂದ ಶಾಸಕರಾದರೂ ಕ್ಷೇತ್ರದ ಜನ ಎಂದೂ ಮರೆಯದಂತಹ ಸೇವೆ ಕೈಲಾಸನಾಥ ಪಾಟೀಲರು ಸಲ್ಲಿಸಿದ್ದಾರೆ. ಚಿಂಚೋಳಿ ಕ್ಷೇತ್ರ ಮೀಸಲು ಆದ ಮೇಲೆ ಅವಕಾಶ ವಂಚಿತರಾದ ಅವರು ಇವತ್ತಿಗೂ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಕಳೆದ ಹಲವು ವಿಧಾನ ಸಭೆ, ವಿಧಾನ ಪರಿಷತ್ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರತೀ ಭೂತಗಳಲ್ಲಿ ಅಲೆದಾಡಿ ಪ್ರಚಾರ ಮಾಡಿದ್ದಾರೆ. ಬೀದರ್ ಲೋಕಸಭಾ ಚುನಾವಣೆಯಲ್ಲಿ ಸಾಗರ ಖಂಡ್ರೆ ಅವರು ಗೆಲ್ಲುವಲ್ಲಿ ಕೈಲಾಸ ಪಾಟೀಲ ಅವರ ಪಾತ್ರ ಅತೀ ದೊಡ್ಡದಾಗಿದೆ. ಇವತ್ತಿನ ಕಾಲದಲ್ಲಿ ಅವಕಾಶಕ್ಕಾಗಿ ಒಂದರಿಂದ ಒಂದು ಪಕ್ಷ ಬದಲಿಸುವ ಮತ್ತು ಪಕ್ಷದ ನಾಯಕರನ್ನು ಬ್ಲ್ಯಾಕ್ಮೇಲ್ ಮಾಡುವ ಅನೇಕ ಉದಾಹರಣೆಗಳನ್ನು ನಡೆಯುವ ಘಟದಲ್ಲಿ ಅಂತಹ ತಂತ್ರಗಾರಿಕೇಗಳಿಗೆ ಮುಖ ಮಾಡದೇ ಯಾವುದೇ ಪ್ರತಿಫಲಾಪೇಕ್ಷೆ ಇರದೇ ಕಾಂಗ್ರೆಸ್ ಪಕ್ಷದ ಸದೃಢ ಸಂಘಟನೆಗೆ ನಿರಂತರವಾಗಿ ದುಡಿಯುತ್ತಿದ್ದಾರೆ.ಪಾಟೀಲರು ಕಾಂಗ್ರೆಸ್ ಪಕ್ಷದ ದೊಡ್ಡ ಆಸ್ತಿ. ಹಾಗಾಗಿ
ಮಾಜಿ ಮುಖ್ಯಮಂತ್ರಿ ದಿ.ವೀರೇಂದ್ರ ಪಾಟೀಲರು ನಾಡಿಗೆ ಮತ್ತು ಪಕ್ಷಕ್ಕೆ ಕೊಟ್ಟ ಸ್ಮರಣೀಯ ಕೊಡುಗೇಯನ್ನು ಗಮನದಲ್ಲಿ ಇರಿಸಿಕೊಂಡು ಕಾಂಗ್ರೆಸ್ ಪಕ್ಷದ ನಾಯಕರು ಕೈಲಾಸನಾಥ ಪಾಟೀಲ ಅವರನ್ನು ರಾಜ್ಯ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ, ಗೌರವಿಸಬೇಕು. ಹಲವು ದಶಕಗಳಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸದೃಢವಾಗಿ ನೆಲೆ ಊರಲು ವೀರಶೈವ ಲಿಂಗಾಯತ ಸಮಾಜದ ಸಹಕಾರ ಯಾವತ್ತೂ ಇದೆ. ನಮ್ಮ ಸಮಾಜಕ್ಕೆ ಸರ್ಕಾರ ಹಾಗೂ ಕಾಂಗ್ರೆಸ್ ಪಕ್ಷ ಹೆಚ್ಚಿನ ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ಲಿಂಗಾಯತ ಸಮುದಾಯದ ರಾಜ್ಯದ ದೊಡ್ಡ ಮನೆತನದ ದೊಡ್ಡ ವ್ಯಕ್ತಿತ್ವ ಹಾಗೂ ಕಟ್ಟಾ ಕಾಂಗ್ರೆಸ್ಸಿಗ, ಎಲ್ಲರ ಪ್ರೀತಿಗೆ ಪಾತ್ರರಾದ ಕೈಲಾಸನಾಥ ಪಾಟೀಲರನ್ನು ವಿಧಾನ ಪರಿಷತ್ ಗೆ ಪರಿಗಣಿಸಿದ್ದಲ್ಲಿ ಅದು ಕಾಂಗ್ರೆಸ್ ಪಕ್ಷ ಲಿಂಗಾಯತ ಸಮಾಜಕ್ಕೆ ಕೊಟ್ಟ ದೊಡ್ಡ ಉಡುಗೊರೆ ಆಗಲಿದೆ. ಮತ್ತು ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸು ಮತ್ತಷ್ಟು ಹೆಚ್ಚಲಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚಿಂಚೋಳಿ ತಾಲೂಕ ಘಟಕದ ಅಧ್ಯಕ್ಷ ಶರಣು ಪಾಟೀಲ್ ಮೋತಕಪಳ್ಳಿ ಅವರು ಕಾಂಗ್ರೆಸ್ ವರಿಷ್ಠರಲ್ಲಿ ಒತ್ತಾಯ ಮಾಡಿದ್ದಾರೆ.
