ಡಾ.ಅಜಯ್‍ಸಿಂಗ್‍ಗೆ ಸಚಿವ ಸ್ಥಾನ ನೀಡಿ: ಆನಂದ ಆರ್ ಹುಲಿ‌ ಆಗ್ರಹ

ಡಾ.ಅಜಯ್‍ಸಿಂಗ್‍ಗೆ ಸಚಿವ ಸ್ಥಾನ ನೀಡಿ: ಆನಂದ ಆರ್ ಹುಲಿ‌ ಆಗ್ರಹ

ಡಾ.ಅಜಯ್‍ಸಿಂಗ್‍ಗೆ ಸಚಿವ ಸ್ಥಾನ ನೀಡಿ: ಆನಂದ ಆರ್ ಹುಲಿ‌ ಆಗ್ರಹ

ಕಲಬುರಗಿ: ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‍ಸಿಂಗ್‌ ಅವರಿಗೆ ಸಚಿವ ಸ್ಥಾನ ನೀಡಬೇಕು’ ಎಂದು ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಕಾಂಗ್ರೆಸ್ ಯುವ ಮುಖಂಡ ಆನಂದ ಆರ್.ಹುಲಿ (ತಾವರಗೇರಾ) ಅವರು ಆಗ್ರಹಿಸಿದ್ದಾರೆ.

       ‌‌‌ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ಡಾ. ಅಜಯಸಿಂಗ್ ಅವರು ಪಕ್ಷಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಹಲವು ಬಾರಿ ಶಾಸಕರಾಗಿ ಆಯ್ಕೆಯಾಗಿ, ಪಕ್ಷ ನೀಡಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಜೇವರ್ಗಿ ಮತಕ್ಷೇತ್ರ ಮತ್ತು ಕೆಕೆಆರ್‌ಡಿಬಿ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಚಿವ ಸ್ಥಾನ ನೀಡಿದರೆ ಅಭಿವೃದ್ಧಿಗೆ ಪೂರಕವಾಗಲಿದೆ. ಪಕ್ಷದ ವರಿಷ್ಠರು ಇವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

       ಕಲ್ಯಾಣ ಕರ್ನಾಟಕದ ಜನಪ್ರಿಯ ನಾಯಕರಾಗಿರುವ ಡಾ.ಅಜಯ ಧರಂಸಿಂಗ ಅವರು, ಹ್ಯಾಟ್ರಿಕ್ ಶಾಸಕರಾಗಿ

ಈ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರನ್ನು ಹೊಂದಿದ್ದಾರೆ.ಪ್ರಬುದ್ಧ ಯುವ ರಾಜಕಾರಣಿ ಆಗಿರುವ ಅವರಿಗೆ ರಾಜ್ಯದ ನೂತನ ಸಚಿವ ಸಂಪುಟ ರಚನೆಯಲ್ಲಿ ಡಾ.ಅಜಯಸಿಂಗ್ ಅವರಿಗೆ ಸಂಪುಟ ದರ್ಜೆಯ ಸಚಿವ ಸ್ಥಾನ ನೀಡುಬೇಕು ಎಂದು ಅವರು ಆಗ್ರಹಿಸಿದ್ದಾರೆ.