ಬಕ್ರೀದ್ ಹಬ್ಬದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ: ಪಿಎಸ್ಐ,ಐಶ್ವರ್ಯ ನಾಗರಾಳ

ಬಕ್ರೀದ್ ಹಬ್ಬದ ಪ್ರಯುಕ್ತ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ: ಪಿಎಸ್ಐ,ಐಶ್ವರ್ಯ ನಾಗರಾಳ

*ನರೇಗಲ್ಲ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ಯ ಶಾಂತಿ ಸಭೆ*

*ಹಬ್ಬದ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಚನೆ; ಪಿಎಸ್‌ಐಐಶ್ವರ್ಯನಾಗರಾಳ

ಕಲ್ಯಾಣ ಕಹಳೆ ನರೇಗಲ್ಲ: ಎಲ್ಲರಲ್ಲಿಯೂ ಜಾಗೃತಿ ಮೂಡಿಸುವುದಕ್ಕಾಗಿ ಶಾಂತಿ ಸಭೆಯನ್ನು ನಡೆಸಲಾಗುತ್ತಿದೆ. ಇಲ್ಲಿನ ಜನತೆ ಶಾಂತಿ-ಸೌಹಾರ್ದತೆಗೆ ಹೆಸರಾಗಿದ್ದಾರೆ. ಈ ಅನುಬಂಧ ಎಂದಿಗೂ ಹೀಗೆಯೆ ಇರಲಿ, ಜಾಲತಾಣಗಳಲ್ಲಿ ಒಮ್ಮೊಮ್ಮೆ ಸುಳ್ಳುಸುದ್ದಿಗಳು ಹರಿದಾಡುತ್ತವೆ.ಅವುಗಳನ್ನು ಯಾರೂ ನಂಬದೆ, ಅವುಗಳ ಸತ್ಯಾಸತ್ಯತೆಯ ಬಗ್ಗೆ ಪರಾಮರ್ಶಿಸಬೇಕೆಂದು ಪಿಎಸ್‌ಐಐಶ್ವರ್ಯನಾಗರಾಳ ಮಾತನಾಡಿದರು

ಈ ಸಭೆಯು ನರೇಗಲ್ಲ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಕ್ರೀದ್ ಹಬ್ಬದ ನಿಮಿತ್ಯ ಶಾಂತಿ ಸಭೆ ಜರುಗಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಎ. ಎ.ನವಲಗುಂದ ಪಟ್ಟಣದಲ್ಲಿ ಆಚರಿಸಲಾಗುವ ಹಿಂದೂ-ಮುಸ್ಲಿ ಹಬ್ಬಗಳಲ್ಲಿ ಎಲ್ಲರೂ ಹೇಗೆ ಐಕ್ಯತೆಯಿಂದ ಪಾಲ್ಗೊಂಡು ಹಬ್ಬಗಳನ್ನು ಆಚರಿಸುತ್ತೇವೆ ಎಂಬುದನ್ನು ಸಭೆಗೆ ತಿಳಿಸಿದರು.

ನಿವೃತ್ತ ಶಿಕ್ಷಕ ಎಂ. ಎಸ್. ಧಡೇಸೂರಮಠ ಮಾತನಾಡಿ ಮನುಷ್ಯನ ನೆಮ್ಮದಿಯ ಬದು-ಕಿಗೆ ಹಬ್ಬ ಹರಿದಿನಗಳ ಅವಶ್ಯಕತೆ ಇದೆ ಈ ಹಬ್ಬಗಳನ್ನು ನೆಮ್ಮದಿಯಿಂದ, ಖುಷಿಯಿಂದ ಆಚರಣೆ ಮಾಡಬೇಕಾದುದೂ ಅಷ್ಟೇ ಮಹತ್ವದ ವಿಷಯವಾಗಿದೆ. ಈ ದಿಶೆಯಲ್ಲಿ ನರೇಗಲ್ಲ ಪಟ್ಟಣವು ಇತರರಿಗೆ ಮಾದರಿಯಾಗುವಂತೆ ಎಂದಿಗೂ ಸ್ನೇಹ,

ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುತ್ತ ಬಂದಿದೆ. ಹಿಂದೂ-ಮುಸ್ಲಿ ಭಾವೈಕ್ಯತೆಗೆ ನರೇಗಲ್ಲ ಪಟ್ಟಣ ಹೆಸರಾಗಿದ್ದು, ಎಲ್ಲ ಧರ್ಮಗಳ ತಿರುಳು ಶಾಂತಿ ಮಂತ್ರವಾಗಿದೆ. ಅದಕ್ಕೆ ತಕ್ಕಂತೆ ನಾವೆಲ್ಲ ಒಂದೇ ಎಂಬ ಭಾವನೆಯಿಂದ ಬದುಕುತ್ತಿದ್ದೇವೆ ಎಂದರು. 

ಮುಖಂಡ ಮೈಲಾರಪ್ಪ ಚಳ್ಳಮರದ ಮಾತನಾಡಿ ನರೇಗಲ್ಲದ ಎಲ್ಲ ಧರ್ಮಿಯರ 'ಆಚರಣೆಗಳಲ್ಲಿ ಎಲ್ಲರೂ ಪಾಲ್ಗೊಂಡು ಸೌಹಾರ್ದತೆಯನ್ನು ಮೆರೆಯುತ್ತಿದ್ದಾರೆ. ಈ ವಿಷಯದಲ್ಲಿ ನರೇಗಲ್ಲ ಪಟ್ಟಣ ಎಂದಿಗೂ ಮುಂಚೂಣಿಯಲ್ಲಿದೆ. ಇಲ್ಲಿನ ಎಲ್ಲ ಧರ್ಮದ ಮುಖಂಡರುಗಳು ಶಾಂತಿ-ಸೌಹಾರ್ದತೆಯನ್ನು ಕಾಪಾಡುವಲ್ಲಿ ಅಹರ್ನಿಶಿ ಶ್ರಮಿಸುತ್ತಿದ್ದಾರೆ ಎಂದರು.

ಇದೇ ಸಮಯದಲ್ಲಿ ಸಾರ್ವಜನಿಕರ ಸಹಕಾರವಿದ್ದರೆ ಕಾನೂನು ಪಾಲನೆ ಸರಳವಾಗುತ್ತದೆ ನಾನು ನೋಡಿದಾಗಿನಿಂದ ನರೇಗಲ್ಲ ಪಟ್ಟಣವು ಶಾಂತಿ-ಸೌಹಾರ್ದತೆಗೆ ಹೆಸರಾದ ಪಟ್ಟಣವಾಗಿದೆ ಇಂದಿನ ಸಭೆಯಲ್ಲಿ ಮಾತನಾಡಿದ ಹಿರಿಯರೆಲ್ಲರೂ ಈ ಪಟ್ಟಣವು ಹೇಗೆ ಶಾಂತಿಯುತವಾಗಿ ಬದುಕುತ್ತಿದೆ ಎಂಬುದನ್ನು ತಿಳಿಸಿದ್ದಕ್ಕೆ ಧನ್ಯವಾದಗಳು ಎಂದು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಿಪಿಐ ವಿಜಯಕುಮಾರ ಮಾತನಾಡಿದರು

ಸಭೆಯಲ್ಲಿ ಎಂ. ಐ. ಹೊಸಮನಿ, ಎಫ್. ಬಿ. ರೇವಡಿಗಾರ, ಎನ್. ಎಚ್. ಕುದರಿ, ಎ. ಎಫ್.. ಕೊಪ್ಪದ, ಅಲ್ಲಾಬಕ್ಷಿ ನದಾಫ್, ಎಂ. ಆರ್. ನದಾಫ್, ಎಚ್. ಡಿ. ರಾಹುತ, ಡಿ ಎಂ. ಹವಾಲ್ದಾರ, ಖಾದರಬಾಷಾ ಹೂಲಗೇರಿ, ಹನುಮಂತಪ್ಪ ದ್ವಾಸಲ್, ಶೇಖರಪ್ಪ ಕೆಂಗಾರ, ಯಮನೂರಪ್ಪ ದ್ವಾಸಲ್,ಎಸ್.ಜೆ.ಮೆಣಸಿಗಿ, ವೈಎಸ್.ನವಲಗುಂದ, ಎಸ್.ಇ.ಮಡಿವಾಳರ ಇನ್ನೂ ಅನೇಕರು ಉಪಸ್ಥಿತರಿದ್ದರು

*ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ*