ಸಾಥಿ ವೆಲ್ಫೇರ್ ಸೊಸೈಟಿ ವತಿಯಿಂದ ಎಸ್.ಐ.ಆರ್ ಜಾಗೃತಿ ಅಭಿಯಾನ

ಸಾಥಿ ವೆಲ್ಫೇರ್ ಸೊಸೈಟಿ ವತಿಯಿಂದ ಎಸ್.ಐ.ಆರ್ ಜಾಗೃತಿ ಅಭಿಯಾನ

ಸಾಥಿ ವೆಲ್ಫೇರ್ ಸೊಸೈಟಿ ವತಿಯಿಂದ ಎಸ್.ಐ.ಆರ್ ಜಾಗೃತಿ ಅಭಿಯಾನ 

ನಾಗರಾಜ್ ದಂಡಾವತಿ ವರದಿ ಶಹಾಬಾದ : - ಸಾಥಿ ವೆಲ್ಫೇರ್ ಸೊಸೈಟಿ ಅಡಿಯಲ್ಲಿ ಎ.ಜೆ.ಶೇಖ ಮತ್ತು ಅಬ್ದುಲ್ ಗನಿ ಸಾಬೀರ್ ರವರ ನೇತೃತ್ವದಲ್ಲಿ ಸಹಾರಾ ಫಂಕ್ಷನ್ ಹಾಲ್ ನಲ್ಲಿ ಎಸ.ಐ.ಆರ್ ಕುರಿತಾದ ಸಾರ್ವಜನಿಕ ಜಾಗೃತಿ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.

ಅಭಿಯಾನದ ನೇತೃತ್ವ ವಹಿಸಿದ್ದ ಮುಖಂಡ ಅಬ್ದುಲ ಘನಿ ಸಾಬೀರ ರವರು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿ, ಎಸ.ಐ.ಆರ್ ಪ್ರಕ್ರಿಯೆಯ ಬಗ್ಗೆ ಯಾರು ಕೂಡ ಅನಗತ್ಯವಾಗಿ ಹೆದರಬೇಕಾದ ಅಥವಾ ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳಾಗಲಿ ಅಥವಾ ಸರ್ಕಾರವಾಗಲಿ ಯಾರಿಗೂ ಯಾವುದೇ ರೀತಿಯ ಅನ್ಯಾಯ ಮಾಡುವುದಿಲ್ಲ. ಸಾರ್ವಜನಿಕರು ಯಾವುದೇ ಗೊಂದಲಗಳಿಗೆ ಕಿವಿಗೊಡದೆ, ಶಾಂತರೀತಿಯಿಂದ ಬಿ.ಎಲ್.ಓ ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಸಾಥಿ ವೆಲ್ಫೇರ್ ಸೊಸೈಟಿಯ ಎ.ಜೆ ಶೇಖ ಮಾತನಾಡಿ, ನಾವು ಕರ್ನಾಟಕದಲ್ಲಿ ಇರುವುದರಿಂದ ಸಾರ್ವಜನಿಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಫಾರ್ಮ್‌ಗಳನ್ನು ಕನ್ನಡ ಅಥವಾ ಇಂಗ್ಲಿಷ್ ಭಾಷೆಯಲ್ಲಿ ಭರ್ತಿ ಮಾಡಲು ಮುಕ್ತ ಅವಕಾಶವಿದೆ ಎಂದರು. 

ಫಾರ್ಮ್‌ನಲ್ಲಿ ಕೇಳಲಾಗಿರುವ ಸರಳ ಮತ್ತು ಮೂಲಭೂತ ಮಾಹಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡು ಭರ್ತಿ ಮಾಡಬೇಕು. ಒಂದು ವೇಳೆ ಯಾವುದೇ ವಿಷಯ ಅರ್ಥವಾಗದಿದ್ದರೆ ಅಥವಾ ಗೊಂದಲವಿದ್ದರೆ, ತಕ್ಷಣವೇ ತಮ್ಮ ಭಾಗದ ಬಿ.ಎಲ್.ಓ ಗಳನ್ನು ಸಂಪರ್ಕಿಸಿ ಅವರಿಂದ ಮಾಹಿತಿ ಪಡೆದು ಭರ್ತಿ ಮಾಡಬಹುದು. ಫಾರ್ಮ್ ಭರ್ತಿ ಮಾಡುವಾಗ ಒಂದು ವೇಳೆ ಏನಾದರೂ ತಪ್ಪುಗಳಾಗಿದ್ದಲ್ಲಿ, ಮುಂದಿನ ಹಂತದಲ್ಲಿ ಅವುಗಳನ್ನು ಸುಲಭವಾಗಿ ಸರಿಪಡಿಸಿಕೊಳ್ಳಲು ಅವಕಾಶವಿರುತ್ತದೆ. ಆದ್ದರಿಂದ ಸಾರ್ವಜನಿಕರು ಗಾಬರಿ ಅಥವಾ ಆತಂಕ ಪಡಬೇಕಾಗಿಲ್ಲ ಎಂದು ತಿಳಿ ಹೇಳಿದರು.

2002 ರಿಂದ 2025 ರವರೆಗಿನ ಮತದಾರರ ಪಟ್ಟಿ ಪರಿಷ್ಕರಣೆಯ ಮಹತ್ವ ಹಾಗೂ ಪ್ರಕ್ರಿಯೆಯ ಬಗ್ಗೆ ಸಾರ್ವಜನಿಕರಿಗೆ ಈ ಸಂದರ್ಭದಲ್ಲಿ ಎಸ.ಐ.ಆರ ಬಗ್ಗೆ ಇರುವ ಅವರ ಅನುಮಾನ ಮತ್ತು ಸಮಸ್ಯೆಗಳಿಗೆ ಸ್ಪಂದಿಸಿ, ವಿವರವಾಗಿ ತಿಳಿ ಹೇಳಲಾಯಿತು.

ವೇದಿಕೆ ಮೇಲೆ ಜಹೀರ ಅಹ್ಮದ ಪಟವೇಗಾರ, ಮಲ್ಲಿಕಾರ್ಜನ ಹಳ್ಳಿ, ಶೇಖ ಯೂನುಸ ಹುಸೇನಿ, ಸೈಯದ್ ರೈಸ್,ಬಾವಾಸಾಬ ತರನಳ್ಳಿ, ಶೇಖ ಮುಸ್ತಫಾ, ಜೈದ್ ಹುಸೇನ, ರಶೀದ ಮಾಸ್ಟರ,ಹನೀಫ 

ಮ.ಇದಾಯತ ಅಲಿ ರೀಜ್ವಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. 

ಸಾರ್ವಜನಿಕರ ಹಿತದೃಷ್ಟಿಯಿಂದ ಹಮ್ಮಿಕೊಳ್ಳಲಾದ ಈ ಜಾಗೃತಿ ಅಭಿಯಾನದಲ್ಲಿ ಸಾಥಿ ವೆಲ್ಫೇರ್ ಸೊಸೈಟಿಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರಾದ ಕರವೇ ಅಧ್ಯಕ್ಷ ಯಲ್ಲಾಲಿಂಗ ಹೈಯಾಳಕರ, ಜೆಡಿಎಸ ಕಾರ್ಯದರ್ಶಿ ಶ್ರೀಧರ ಕೊಲ್ಲೂರ, ಶೇಖ ಮಹೇಬೂಬ ಗೋಗಿ, ಶೇಖ ಇಮ್ರಾನ, 

ಹನುಮಾನ ಕಾಂಬಳೆ ಸೇರಿದಂತೆ ನೂರಾರು ಜನ ಭಾಗವಿಸಿದ್ದರು.