ಶ್ರೀ ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಅತಿ ಹಿಂದುಳಿದ ಮಠಾಧೀಶರಿಂದ ಹೆಗ್ಗಡೆಯವರಿಗೆ ಬೆಂಬಲ ಪತ್ರ ಸಲ್ಲಿಕೆ

ಶ್ರೀ ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಅತಿ ಹಿಂದುಳಿದ ಮಠಾಧೀಶರಿಂದ ಹೆಗ್ಗಡೆಯವರಿಗೆ ಬೆಂಬಲ ಪತ್ರ ಸಲ್ಲಿಕೆ

ಶ್ರೀ ಧರ್ಮಸ್ಥಳ ವಿರುದ್ಧ ಷಡ್ಯಂತ್ರ: ಅತಿ ಹಿಂದುಳಿದ ಮಠಾಧೀಶರಿಂದ ಹೆಗ್ಗಡೆಯವರಿಗೆ ಬೆಂಬಲ ಪತ್ರ ಸಲ್ಲಿಕೆ

ಕಲಬುರಗಿ : ಭಾರತದ ಪವಿತ್ರ ಶ್ರದ್ಧಾ ಕೇಂದ್ರ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅದರ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಷಡ್ಯಂತ್ರ ರೂಪಿಸಿ ಜಾಗತಿಕ ಮಟ್ಟದಲ್ಲಿ ಶ್ರೀ ಕ್ಷೇತ್ರಕ್ಕೆ ಅಪಮಾನವೆ ಸಗುತ್ತಿರುವ ದುಷ್ಟ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ರಾಜ್ಯದ ಅತಿ ಹಿಂದುಳಿದ ಮಠಾಧೀಶರು ಸಂಪೂರ್ಣವಾಗಿ ಡಾ. ಡಿ ವೀರೇಂದ್ರ ಹೆಗ್ಗಡೆ ಯವರ ಜೊತೆಗಿರುವುದಾಗಿ ಬೆಂಬಲ ಪತ್ರವನ್ನು ರಾಜ್ಯ ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ವತಿಯಿಂದ ಹಸ್ತಾಂತರಿಸಲಾಯಿತು.

     ರಾಜ್ಯದ ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ರಾಜ್ಯಾಧ್ಯಕ್ಷರಾದ ಡಾ. ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಮಹಾಸಭಾ ಕೋರ್ ಕಮಿಟಿಯ ಏಳು ಮಂದಿ ಅತಿ ಹಿಂದುಳಿದ ಮಠಾಧೀಶರು ಶುಕ್ರವಾರ (ಜುಲೈ 10ಕ್ಕೆ) ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮಾಡಿ ನಂತರ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ಮಾಡಿ ಬೆಂಬಲ ಪತ್ರ ಅರ್ಪಣೆ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಸಂಚು ಹೂಡಿ ಅಪಮಾನವೆಸಗುವ ಹಾಗೂ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಕಳಂಕ ಹಚ್ಚುವ ದುಷ್ಟ ಶಕ್ತಿಗಳ ವಿರುದ್ಧ ಸನಾತನ ಹಿಂದೂ ಧರ್ಮ ಸಂಪ್ರದಾಯದ ಅತಿ ಹಿಂದುಳಿದ ಸ್ವಾಮೀಜಿಗಳು ಒಗ್ಗಟ್ಟಿನ ಬೆಂಬಲ ವ್ಯಕ್ತಪಡಿಸಿ ಪೂಜ್ಯ ಡಾ. ಹೆಗ್ಗಡೆಯವರಿಗೆ ದೇವರು ಪೂರ್ಣ ಆರೋಗ್ಯ ಭಾಗ್ಯ ನೀಡಿ ನಿರಂತರವಾಗಿ ಧಾರ್ಮಿಕ ,ಸಾಮಾಜಿಕ ಕ್ಷೇತ್ರದ ಸೇವೆ ನೀಡಲು ಶಕ್ತಿ ನೀಡಲಿ ಎಂದು ಮಠಾಧೀಶರು ಪ್ರಾರ್ಥಿಸಿದರು. 

    ಅತಿ ಹಿಂದುಳಿದ ಸ್ವಾಮೀಜಿಗಳ ಸನ್ಮಾನ ಹಾಗೂ ಬೆಂಬಲ ಪತ್ರವನ್ನು ಸ್ವೀಕರಿಸಿದ ನಂತರ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಅತಿ ಹಿಂದುಳಿದ ಪೂಜ್ಯ ಸಂತರುಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ಬೆಂಬಲ ಪತ್ರ ನೀಡಿರುವುದಕ್ಕೆ ಸಂತಸ ಉಂಟಾಗಿದೆ ಧಾರ್ಮಿಕ ಮುಂದಾಳುಗಳು ಹಾಗೂ ಮಠಾಧೀಶರು ಸನಾತನ ಸಂಪ್ರದಾಯ ಉಳಿಸಿ ಬೆಳೆಸಲು ಸದಾ ಒಗ್ಗಟ್ಟಿನಿಂದ ಜೊತೆಗಿರಬೇಕು ಎಂದು ಹೇಳಿದರು. ನಂತರ ಎಲ್ಲ ಸ್ವಾಮೀಜಿಗಳಿಗೆ ಪ್ರಸಾದ ವಿತರಿಸಿ ಸತ್ಕರಿಸಿದರು.

   ಹಿಂದುಳಿದ ಮಠಾಧೀಶರ ಮಹಾಸಭಾ ರಾಜ್ಯ ಮಟ್ಟದ ಚಿಂತನಾ ಶಿಬಿರ ಕಲಬುರಗಿಯಲ್ಲಿ ಜೂನ್ 27 ಮತ್ತು 28 ರಂದು ನಡೆದು ಅದರ ನಿರ್ಣಯದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಭೇಟಿ ಹಾಗೂ ಬೆಂಬಲ ಪತ್ರ ಹಸ್ತಾಂತರಕ್ಕೆ ನಿರ್ಧರಿಸಲಾಗಿತ್ತು. ಅತಿ ಹಿಂದುಳಿದ ಮಠಾಧೀಶರ ಮಹಾಸಭಾದ ಉಪಾಧ್ಯಕ್ಷರಾದ ಕುಂಬಾರ ಗುರುಪೀಠ ಚಿತ್ರದುರ್ಗದ ಶ್ರೀ ಬಸವ ಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಶಿವಸಿಂಪಿ ಸಮಾಜದ ಬಾಗಲಕೋಟೆ ಮಹಾಂತ ಮಂದಾರ ಮಠದ ಶ್ರೀ ಮಹಾಂತ ದೇವರು, ಮೊಳಕಾಲ್ಮೂರು ಮಾದಾರ ಚೆನ್ನಯ್ಯ ಗುರು ಪೀಠದ ಶ್ರೀ ಶಿವಮೂರ್ತಿ ಮಹಾಸ್ವಾಮೀಜಿ, 

ತೆರೆದಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಕಾಶ್ ಮಹಾರಾಜ್, ತರೀಕೆರೆ ಬಂಜಾರ ಗುರು ಪೀಠದ ಶ್ರೀ ಮಂಜು ಮಹಾರಾಜ್, ಬೆಂಚಿನ ಕಟ್ಟೆ ರವಿಗಿರಿಯ ಬೋವಿ ಗುರುಪೀಠದ ಶ್ರೀ ಆತ್ಮಾನಂದ ಸ್ವಾಮೀಜಿ ಹಾಗೂ ಈಡಿಗ ಮಹಾ ಮಂಡಳಿಯ ರಾಜ್ಯ ಉಪಾಧ್ಯಕ್ಷರಾದ ನವೀನ್ ಕುಮಾರ್ ಮಂಗಳೂರು ಜೊತೆಗಿದ್ದರು.

*ಉಜಿರೆಯಿಂದ ಧರ್ಮಸ್ಥಳಕ್ಕೆ ಬೃಹತ್ ಪಾದಯಾತ್ರೆ ಎಚ್ಚರಿಕೆ*

ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ, ಸಾಮಾಜಿಕ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಅನುಪಮ ಸಾಧನೆ ಮಾಡಿ ಸಮಾಜದ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಅವರ ವಿರುದ್ಧ ವಿನಾಕಾರಣ ಷಡ್ಯಂತ್ರ ರೂಪಿಸುವ ದುಷ್ಟ ಶಕ್ತಿಗಳ ವಿರುದ್ಧ ಧ್ವನಿ ಎತ್ತಲು ಉಜಿರೆಯಿಂದ ಧರ್ಮಸ್ಥಳದವರೆಗೆ ಸುಮಾರು 200 ರಷ್ಟು ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಅಥವಾ 1 ಲಕ್ಷದಷ್ಟು ಅಧಿಕ ಸಂಖ್ಯೆಯ ಹಿಂದುಳಿದ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಭಕ್ತ ಜನರ ಬೃಹತ್ ಪಾದಯಾತ್ರೆಯನ್ನು ಕೈಗೊಳ್ಳುವುದಾಗಿ ಮಹಾಸಭಾದ ಅಧ್ಯಕ್ಷರಾದ ಡಾ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.