ಡಾ.ದೇವೇಂದ್ರಪ್ಪ ಹಡಪದ ಅವರ ಸೇವೆ ಅನನ್ಯವಾದದ್ದು - ಸಿದ್ದಲಿಂಗಣ್ಣ ಆನೆಗುಂದಿ

ಡಾ.ದೇವೇಂದ್ರಪ್ಪ ಹಡಪದ ಅವರ ಸೇವೆ ಅನನ್ಯವಾದದ್ದು - ಸಿದ್ದಲಿಂಗಣ್ಣ ಆನೆಗುಂದಿ

ಡಾ.ದೇವೇಂದ್ರಪ್ಪ ಹಡಪದ ಅವರ ಸೇವೆ ಅನನ್ಯವಾದದ್ದು - ಸಿದ್ದಲಿಂಗಣ್ಣ ಆನೆಗುಂದಿ.

ಶಹಪುರ : ಸದಾ ಸಮಾಜಮುಖಿ ಚಿಂತನೆಗಳ ಜೊತೆಗೆ ಕನ್ನಡ,ನಾಡು, ನುಡಿಗಾಗಿ ಸೇವೆ ಸಲ್ಲಿಸುತ್ತಿರುವ ಡಾ.ದೇವೇಂದ್ರಪ್ಪ ಹಡಪದ ಅವರ ಕಾರ್ಯ ತುಂಬಾ ಶ್ಲಾಘನೀಯವಾದದ್ದು ಎಂದು ಹಿರಿಯ ಮುಖಂಡರಾದ ಸಿದ್ದಲಿಂಗಣ್ಣ ಆನೆಗುಂದಿ ಹೇಳಿದರು.

ನಗರದ ಮಾತೋಶ್ರೀ ಹೋಟೆಲ್ ನಲ್ಲಿ ಸಗರದ ಕಾವೇರಿ ವಿದ್ಯಾ ಮಂದಿರ ಹಾಗೂ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಡಾ. ದೇವೇಂದ್ರಪ್ಪ ಹಡಪದ ಅವರ 68ನೇ ವರ್ಷದ ಹುಟ್ಟುಹಬ್ಬದ ನಿಮಿತ್ಯ ಆಯೋಜಿಸಿದ ಜಿಲ್ಲಾ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಶುಭ ಕೋರಿ ಅವರ ಸಾಹಿತ್ಯ ಮತ್ತು ಜೀವನ ಮೌಲ್ಯಗಳು ಕುರಿತು ಮಾತನಾಡಿದರು

ಹಿರಿಯ ವಕೀಲರಾದ ಆರ್. ಚನ್ನಬಸು ವನದುರ್ಗ ಮಾತನಾಡಿ ಇದು ನೇಪತ್ಯಕ್ಕೆ ಮಾತ್ರ ಹುಟ್ಟುಹಬ್ಬ,ಆದರೆ ಅನುಭವದ ಬುತ್ತಿಗೆ ಮತ್ತೊಂದು ಕೈ ತುತ್ತು ಸೇರುವ ಶುಭದಿನ,ಸಾಹಿತ್ಯ ಅಭಿಮಾನಿಗಳು,ಸಮಾನ ಮನಸ್ಕರು,ಸೇರಿಕೊಂಡು ಈ ಸುಂದರ ಸಂಜೆ ನಾವೆಲ್ಲರೂ ಸಾಹಿತ್ಯದ ರಸದೌತಣವನ್ನು ಸವಿಯೋದೆ ಒಂದು ಸುಂದರ ಸಂಭ್ರಮದ ಗಳಿಗೆ ಎಂದು ಹರ್ಷ ವ್ಯಕ್ತಪಡಿಸಿದರು.

ಖ್ಯಾತ ವೈದ್ಯರು ಹಾಗೂ ಸಾಹಿತಿಗಳಾದ ಡಾ.ದೇವೇಂದ್ರಪ್ಪ ಹಡಪದ ಕಾರ್ಯಕ್ರಮದ ನೇತೃತ್ವವನ್ನು ವಹಿಸಿಕೊಂಡಿದ್ದರು, ಈ ಸಮಾರಂಭದ ವೇದಿಕೆಯ ಮೇಲೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ. ಸಿದ್ದರಾಮ ಹೊನಕಲ,ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ರಾಜಶೇಖರ ನಗನೂರ,ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಅಡಿವಪ್ಪ ಜಾಕಾ, ಹಿರಿಯ ಸಾಹಿತಿ ಶಿವಣ್ಣ ಇಜೆರಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ರವೀಂದ್ರನಾಥ್ ಹೊಸಮನಿ, ಮಹಾಂತಪ್ಪ ನಂದೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸುಮಾರು 25ಕ್ಕೂ ಹೆಚ್ಚು ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಸ್ವರಚಿತ ಕವನ ವಾಚಿಸಿದರು,ಈ ಕಾರ್ಯಕ್ರಮವನ್ನು ಬಿ.ಎಸ್. ಪೂಜಾರಿ ನಿರೂಪಿಸಿದರು, ಕಲಾನಿಕೇತನ ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ನುಡಿಗಳಾಡಿದರು,ಶರಣಬಸವ ಪೊಲೀಸ್ ಬಿರಾದರ್ ಸ್ವಾಗತಿಸಿದರು,ಶಂಕರ್ ಹುಲಕಲ್ ವಂದಿಸಿದರು.