ನ್ಯೂ ಸ್ನೇಹದರ್ಶಿನಿ ಹೋಟೆಲ್ ಶುಭಾರಂಭ

ನ್ಯೂ ಸ್ನೇಹದರ್ಶಿನಿ ಹೋಟೆಲ್ ಶುಭಾರಂಭ

ನ್ಯೂ ಸ್ನೇಹದರ್ಶಿನಿ ಹೋಟೆಲ್ ಶುಭಾರಂಭ

ಕಲಬುರಗಿ : ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಸ್ನೇಹದರ್ಶಿನಿಯವರ ಹೊಸ ಹೋಟೆಲ್ "ನ್ಯೂ ಸ್ನೇಹದರ್ಶಿನಿ"ಯನ್ನು ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಗೇಟ್ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರುಗಡೆ ಭಾನುವಾರ(ಜುಲೈ 12ರಂದು) ಜಿಲ್ಲಾಧಿಕಾರಿಗಳಾದ ಶ್ರೀ ಇಕ್ರಮ್ ಶರೀಫ್ ಶುಭಾರಂಭಗೊಳಿಸಿದರು. 

    ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರ ಪೂರೈಕೆ ಮಾಡಿ ಗ್ರಾಹಕ ಸ್ನೇಹಿ ಉದ್ಯಮವನ್ನು ನಡೆಸಿ ಎಂದು ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಇಕ್ರಮ್ ಶರೀಫ್ ಅವರು ಶುಭ ಹಾರೈಸಿದರು. ಹೋಟೆಲ್ ಮಾಲಕರಾದ ನರಸಿಂಹ ಮೆಂಡನ್ ಅವರು ಜಿಲ್ಲಾಧಿಕಾರಿಗಳಿಗೆ ಶಾಲು, ಪುಷ್ಪಗುಚ್ಛ ನೀಡಿ ಗೌರವಿಸಿ ಸ್ವಾಗತಿಸಿದರು. 

    ಉದ್ಘಾಟನಾ ಸಮಾರಂಭದಲ್ಲಿ ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ಮುಖ್ಯಸ್ಥರಾದ ಅಮಿತ್ ಶೆಟ್ಟಿ, ರಾಜ್ಯ ಹೋಟೆಲ್ ಅಸೋಸಿಯೇಷನ್ ಉಪಾಧ್ಯಕ್ಷರಾದ ಸತ್ಯನಾಥ ಶೆಟ್ಟಿ, ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ, ಜಿಲ್ಲಾ ವೈನ್ ಮರ್ಚಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಆರ್‌.ಪಿ ರೆಡ್ಡಿ , ನಾಲ್ಕು ಚಕ್ರ ಸಂಸ್ಥೆಯ ಮಾಲಾ ಕಣ್ಣಿ, ಹೋಟೆಲ್ ಅಸೋಸಿಯೇಷನ್ ಸದಸ್ಯರಾದ ಕೀರ್ತಿ ಶೆಟ್ಟಿ, ಸುನಿಲ್ ಶೆಟ್ಟಿ, ಉದ್ಯಮಿಗಳಾದ ವೆಂಕಟೇಶ ಎಂ. ಕಡೇಚೂರ್ ನ್ಯಾಯವಾದಿ ಸತೀಶ್. ಅಳ್ಳೊಳ್ಳಿ ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷರಾದ ನಂದಿನಿ ಎಸ್, ಸನಬಾಳ್, ಶಿಕ್ಷಕಿ ರೇಣುಕಾ ಶಿರ್ಲಾಲು, ಸುರೇಶ್ ಬಡಿಗೇರ್ ವಿದ್ಯಾಧರ ಭಟ್, ಸಂತೋಷ್ ಚೌಧರಿ, ಉದಯ ಪುತ್ರನ್, ಸಂತೋಷ್ ಹಾಗೂ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.