ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಆರಂಭ; ಆಗಸ್ಟ್ 11ರವರೆಗೆ ಅರ್ಜಿ ಆಹ್ವಾನ

ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಆರಂಭ; ಆಗಸ್ಟ್ 11ರವರೆಗೆ ಅರ್ಜಿ ಆಹ್ವಾನ

ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಕಲಬುರಗಿಯಲ್ಲಿ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಆರಂಭ; ಆಗಸ್ಟ್ 11ರವರೆಗೆ ಅರ್ಜಿ ಆಹ್ವಾನ

ಕಲಬುರಗಿ : ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಲಬುರಗಿಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿವಿಧ ಸ್ನಾತಕೋತ್ತರ (ಪಿಜಿ) ಕೋರ್ಸುಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 

ಎಂದು ಕಾಲೇಜಿನ ಪ್ರಾಚಾರ್ಯರಾದ ಡಾ. ಸವಿತಾ ತಿವಾರಿ ಹಾಗೂ ಪಿ.ಜಿ ವಿಭಾಗದ ಡೀನರಾದ ಡಾ. ಮಲ್ಲೇಶಪ್ಪ ಕುಂಬಾರ ಅವರು ತಿಳಿಸಿದ್ದಾರೆ. 

ನಗರದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಲೇಜಿನಲ್ಲಿ ಎಂ.ಎ. ಕನ್ನಡ, ಇಂಗ್ಲಿಷ್, ಹಿಂದಿ, ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಹಾಗೂ ಸಮಾಜಶಾಸ್ತ್ರ, ಎಂ.ಎಸ್‌ಸಿ. ಭೌತಶಾಸ್ತ್ರ, ಗಣಿತ, ಗಣಕ ವಿಜ್ಞಾನ, ಪ್ರಾಣಿಶಾಸ್ತ್ರ, ಸೂಕ್ಷ್ಮಜೀವಶಾಸ್ತ್ರ ಸೇರಿದಂತೆ ವಿವಿಧ ಸ್ನಾತಕೋತ್ತರ ಕೋರ್ಸುಗಳು ಲಭ್ಯವಿವೆ.

ಪ್ರವೇಶಕ್ಕಾಗಿ UUCMS ಪೋರ್ಟಲ್‌ನಲ್ಲಿ ಆನ್‌ಲೈನ್ ಅರ್ಜಿ ಸಲ್ಲಿಕೆ ಜುಲೈ 12ರಿಂದ ಆರಂಭವಾಗಲಿದ್ದು, ಆಗಸ್ಟ್ 11 ಕೊನೆಯ ದಿನವಾಗಿದೆ. ಅರ್ಜಿಯ ಮುದ್ರಿತ ಪ್ರತಿಯನ್ನು ಅಗತ್ಯ ದಾಖಲೆಗಳ ದೃಢೀಕೃತ ಪ್ರತಿಗಳೊಂದಿಗೆ ಆಗಸ್ಟ್ 14ರೊಳಗೆ ಕಾಲೇಜಿನ ಕಚೇರಿಗೆ ಸಲ್ಲಿಸಬೇಕು.

1932ರಲ್ಲಿ ಸ್ಥಾಪನೆಯಾದ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ), ಕಲಬುರಗಿ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಯುಜಿಸಿ ಸ್ವಾಯತ್ತ ಸ್ಥಾನಮಾನ ಹಾಗೂ ನ್ಯಾಕ್‌ನಿಂದ ಬಿ+ ಮರುಮಾನ್ಯತೆ ಪಡೆದಿರುವ ಈ ಕಾಲೇಜು ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಉನ್ನತ ಶಿಕ್ಷಣವನ್ನು ಒದಗಿಸುತ್ತಿದೆ.

ಕಾಲೇಜಿನ ಪ್ರಮುಖ ವಿಶೇಷತೆಗಳಲ್ಲಿ ಅನುಭವಿ ಪೂರ್ಣಕಾಲಿಕ ಅಧ್ಯಾಪಕರು, ಸುಸಜ್ಜಿತ ತರಗತಿ ಕೊಠಡಿಗಳು ಮತ್ತು ಪ್ರಯೋಗಾಲಯಗಳು, ಆಧುನಿಕ ಗ್ರಂಥಾಲಯ ಹಾಗೂ ಇ-ಸಂಪನ್ಮೂಲಗಳು, ಕೈಗೆಟಕುವ ಶುಲ್ಕ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಇಡಬ್ಲ್ಯುಎಸ್ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ, ವಿವಿಧ ಸರ್ಕಾರಿ ಶಿಷ್ಯವೇತನಗಳ ಸೌಲಭ್ಯ, ಉದ್ಯೋಗ ಮಾರ್ಗದರ್ಶನ, ಉದ್ಯೋಗ ಮೇಳಗಳು, ವಿಶೇಷ ಉಪನ್ಯಾಸಗಳು, ಕ್ರೀಡೆ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮತ್ತು NCC ಚಟುವಟಿಕೆಗಳು ಸೇರಿವೆ.

ಹೆಚ್ಚಿನ ಮಾಹಿತಿಗಾಗಿ www.gcak.ac.in ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ ಅಥವಾ ಸಮಿತಿಯ ಅಧ್ಯಕ್ಷರಾಗಿ ಸೂಕ್ಷ್ಮ ಜೀವಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರಾಮಕೃಷ್ಣ ಬಿ ಅವರ ಮೊಬೈಲ್ ಸಂಖ್ಯೆ: 9480272477, 

ಸಮಿತಿಯ ಸದಸ್ಯರಾಗಿ ಕನ್ನಡ ವಿಭಾಗದ ಡಾ. ನಾಗಪ್ಪ ಗೋಗಿ (9686153485), ಸಮಾಜಶಾಸ್ತ್ರ ವಿಭಾಗದ ಡಾ. ರವೀಂದ್ರ ಕುಮಾರ್ ಭಂಡಾರಿ (8123708365), ಪ್ರಾಣಿಶಾಸ್ತ್ರ ವಿಭಾಗದ ಡಾ. ಅಜ್ರಾ ಪರವೀನ್ (9972724313) ಹಾಗೂ ವಾಣಿಜ್ಯಶಾಸ್ತ್ರ ವಿಭಾಗದ ಡಾ. ಸವಿತಾ ಪಾಟೀಲ (9481540621)

 ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.