ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ: ಡಾ. ಫ. ಗು. ಹಳಕಟ್ಟಿ ಹೆಸರಿನಲ್ಲಿ ಹೊಸ ವಚನ ವಿಶ್ವವಿದ್ಯಾಲಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ: ಡಾ. ಫ. ಗು. ಹಳಕಟ್ಟಿ ಹೆಸರಿನಲ್ಲಿ ಹೊಸ ವಚನ ವಿಶ್ವವಿದ್ಯಾಲಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕಲಬುರಗಿ ಉತ್ಸವ ಸಮಿತಿಯಿಂದ ನೂತನವಾಗಿ ಆಯ್ಕೆಗೊಂಡು, ಪ್ರಥಮ ಬಾರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ: ಡಾ. ಫ. ಗು. ಹಳಕಟ್ಟಿ ಹೆಸರಿನಲ್ಲಿ ಹೊಸ ವಚನ ವಿಶ್ವವಿದ್ಯಾಲಯ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕಲಬುರಗಿ: ರಾಜ್ಯ ಸರ್ಕಾರವು ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನವನ್ನು "ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ" ಎಂದು ಘೋಷಿಸಿ ಆಚರಿಸುತ್ತಿರುವುದಕ್ಕೆ ಕಲಬುರಗಿ ಉತ್ಸವ ಸಮಿತಿಯು ತುಂಬು ಹೃದಯದ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತೇವೆ. ಇದೇ ಸಂದರ್ಭದಲ್ಲಿ ಹಳಕಟ್ಟಿ ಅವರ ಸ್ಮರಣೆ ಮತ್ತು ವಚನ ಸಾಹಿತ್ಯದ ಬೆಳವಣಿಗೆಗಾಗಿ ಸಮಿತಿಯು ರಾಜ್ಯದ ಪ್ರಸ್ತುತ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರಿಗೆ ವಿವಿಧ ಮಹತ್ವದ ಬೇಡಿಕೆಗಳನ್ನೊಳಗೊಂಡ ಸರಣಿ ಮನವಿಯನ್ನು ಸಲ್ಲಿಸಿದೆ.

ಉತ್ಸವ ಸಮಿತಿಯ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ:

ಅವಿಬಿಜಿತ ಕಲಬುರಗಿ ಜಿಲ್ಲೆಯ ಕೇಂದ್ರ ಸ್ಥಾನದಲ್ಲಿ, ಅವರ ಒಂದು ಗ್ರಂಥಾಲಯ ಸ್ಥಾಪನೆಗೆ 2 ಎಕರೆ ಜಮೀನು ಮಂಜೂರು ಮಾಡಬೇಕು (ಇತ್ತೀಚಿಗೆ ಅಂಕ್ಕೆ ಗೌಡರ ಪುಸ್ತಕ ಸಂಗ್ರಹಣೆ ಮಾಡಲು ನೀಡಿದ ರೀತಿಯಲ್ಲಿ )ಹೊಸ ವಚನ ವಿಶ್ವವಿದ್ಯಾಲಯ ಸ್ಥಾಪನೆ: ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನಲ್ಲಿ ಹೊಸದಾಗಿ 'ವಚನ ವಿಶ್ವವಿದ್ಯಾಲಯ'ವನ್ನು ಸ್ಥಾಪಿಸಬೇಕು ಮತ್ತು ಅದಕ್ಕೆ ಡಾ. ಫ. ಗು. ಹಳಕಟ್ಟಿ ಅವರ ಹೆಸರನ್ನು ನಾಮಕರಣ ಮಾಡಬೇಕು.

ಸ್ಮಾರಕಗಳ ನಿರ್ಮಾಣ: ಡಾ. ಫ. ಗು. ಹಳಕಟ್ಟಿ ಅವರ ಜನ್ಮಸ್ಥಳವಾದ ಧಾರವಾಡ ಹಾಗೂ ಅವರ ಪ್ರಮುಖ ಕಾರ್ಯಕ್ಷೇತ್ರವಾಗಿದ್ದ ವಿಜಯಪುರದಲ್ಲಿರುವ (ವಿಜಾಪುರ) ಮನೆಗಳನ್ನು ಸರ್ಕಾರವು ತನ್ನ ಸ್ವಾಧೀನಕ್ಕೆ ಪಡೆದುಕೊಂಡು, ಅವುಗಳನ್ನು ಭವ್ಯ ಸ್ಮಾರಕ ಸ್ಥಳಗಳನ್ನಾಗಿ ಮಾರ್ಪಡಿಸಬೇಕು.

ಪಠ್ಯಪುಸ್ತಕದಲ್ಲಿ ಸೇರ್ಪಡೆ: ಹಳಕಟ್ಟಿ ಅವರ ಆದರ್ಶ ಜೀವನ ಚರಿತ್ರೆಯನ್ನು ಪ್ರೌಢಶಾಲಾ ಶಿಕ್ಷಣದ ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು.

 ಸಾಹಿತ್ಯ ಮರುಮುದ್ರಣ ಹಾಗೂ ತಾಡೋಲೆ ಪ್ರದರ್ಶನ: ಅವರು ರಚಿಸಿದ ಅಮೂಲ್ಯ ಸಾಹಿತ್ಯವನ್ನು ಮರುಮುದ್ರಣಗೊಳಿಸಿ ಸಾರ್ವಜನಿಕರಿಗೆ ಓದಲು ಲಭ್ಯವಾಗಿಸಬೇಕು. ಜೊತೆಗೆ, ಅವರು ಸಂಗ್ರಹಿಸಿದ ಅಪರೂಪದ ತಾಡೋಲೆಗಳನ್ನು ಅವರ ಜಯಂತಿ ಮತ್ತು ಸ್ಮರಣೋತ್ಸವದ ಸಂದರ್ಭಗಳಲ್ಲಿ ಸಾರ್ವಜನಿಕರ ವೀಕ್ಷಣೆಗಾಗಿ ಪ್ರದರ್ಶಿಸಬೇಕು.

 ಪುತ್ಥಳಿ ಸ್ಥಾಪನೆ ಹಾಗೂ ಅಧ್ಯಯನ ಪೀಠ: ಬಸವಕಲ್ಯಾಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಅನುಭವ ಮಂಟಪದಲ್ಲಿ ಹಳಕಟ್ಟಿ ಅವರ ಭವ್ಯ ಪುತ್ಥಳಿಯನ್ನು ಸ್ಥಾಪಿಸಬೇಕು. ಹಾಗೆಯೇ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಅವರ ಹೆಸರಿನಲ್ಲಿ ಪ್ರತ್ಯೇಕ 'ಅಧ್ಯಯನ ಪೀಠ'ವನ್ನು ಆರಂಭಿಸಬೇಕು.

 ಹಟಗಾರ ಸಮಾಜದ ಅಭಿವೃದ್ಧಿ ನಿಗಮ: ಡಾ. ಫ. ಗು. ಹಳಕಟ್ಟಿ ಅವರ ಹೆಸರಿನಲ್ಲಿ 'ಹಟಗಾರ ಸಮಾಜದ ಅಭಿವೃದ್ಧಿ ನಿಗಮ'ವನ್ನು ಸ್ಥಾಪಿಸಿ, ಅದಕ್ಕೆ ಸರ್ಕಾರದಿಂದ ₹5,000 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡಬೇಕು.

 ಟ್ರಸ್ಟ್ ಹಾಗೂ ಸಹಕಾರ ಬ್ಯಾಂಕ್ ಸ್ಥಾಪನೆ: ಅವರ ಹೆಸರಿನಲ್ಲಿ ಒಂದು ಸರ್ಕಾರಿ ನ್ಯಾಸ (ಟ್ರಸ್ಟ್) ರಚಿಸಬೇಕು ಹಾಗೂ ಸಹಕಾರ ಬ್ಯಾಂಕ್ ಸ್ಥಾಪನೆ ಮಾಡಿ ಅದಕ್ಕೆ ₹100 ಕೋಟಿ ರೂಪಾಯಿಗಳ ಇಡುಗಂಟನ್ನು ಒದಗಿಸಬೇಕು.

 ರಾಜ್ಯ ಹಾಗೂ ವಿಭಾಗೀಯ ಮಟ್ಟದ ಪ್ರಶಸ್ತಿಗಳು: ಹಳಕಟ್ಟಿ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ₹11.00 ಲಕ್ಷ ಗೌರವ ಧನ ಒದಗಿಸಬೇಕು. ಇದರೊಂದಿಗೆ ರಾಜ್ಯದ 4 ವಿಭಾಗೀಯ ಮಟ್ಟದಲ್ಲೂ ತಲಾ ₹5.00 ಲಕ್ಷ ರೂಪಾಯಿಗಳ ನಗದು ಒಳಗೊಂಡ ನಾಲ್ಕು ಪ್ರಶಸ್ತಿಗಳನ್ನು ಸ್ಥಾಪಿಸಬೇಕು.

ವಚನ ಸಾಹಿತ್ಯದ ಸಂರಕ್ಷಣೆಗಾಗಿ ಜೀವಮಾನವಿಡೀ ಸವೆಸಿದ ಮಹನೀಯರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರವು ಅತ್ಯಂತ ಶೀಘ್ರವಾಗಿ ಈಡೇರಿಸಬೇಕೆಂದು 2026 ರ ಸಾಲಿನ, ಕಲಬುರಗಿ ಉತ್ಸವ ಸಮಿತಿಯ ಅಧ್ಯಕ್ಷರಾದ ಚನ್ನಮಲ್ಲಪ್ಪಾ ಯಳಸಂಗಿ, ಪದಾಧಿಕಾರಿಗಳಾದ, ಶ್ರವಣ್ ಕುಮಾರ ಮುನ್ನೊಳ್ಳಿ, ಶಿವಲಿಂಗಪ್ಪ ಅಷ್ಟಗಿ, ಶಿವಪುತ್ರಪ್ಪ ಭಾವಿ, ಸೂರ್ಯಕಾಂತ ಸೊನ್ನದ, ವಿನೋದಕುಮಾರ ಎಸ್. ಜೇನವೆರಿ, ಸತೀಷ ಜಮಖಂಡಿ ಹಾಗೂ ಡಾ. ಬಸವರಾಜ ಚನ್ನಾ ಮತ್ತು ಶಿಕ್ಷಕ ಬಿ. ಎಮ್. ಪಾಟೀಲ್ ಕಲ್ಲೂರ, ಶಿವರಾಜ ಅಂಡಗಿ, ಸಂಜೀವ ಕುಮಾರ ಡೊಂಗರ್ಗೌವ ಅವರು ಜಂಟಿ ಪ್ರಕಟಣೆಯಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.