ಕಾವ್ಯ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವಂತಿರಬೇಕು - ಹೊನ್ಕಲ್
ಕಾವ್ಯ ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುವಂತಿರಬೇಕು - ಹೊನ್ಕಲ್
ಶಹಪುರ : ಯುವಕವಿಗಳು ರಚಿಸಿದ ಕವಿತೆಗಳು,ಕಾವ್ಯಗಳು,ಪ್ರಸ್ತುತ ಕಾಲಘಟ್ಟದ ಸಮಸ್ಯೆಗಳ ವರ್ತಮಾನದ ತಲ್ಲಣಗಳು ಮತ್ತು ಸಾಮಾಜಿಕ ವಾಸ್ತವಿಕತೆಗೆ ಹಿಡಿದ ಕೈಗನ್ನಡಿಯಾಗಿರಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಡಾ.ಸಿದ್ದರಾಮ ಹೊನ್ಕಲ್ ಹೇಳಿದರು.ನಗರದ ಮಾತೋಶ್ರೀ ಹೋಟೆಲ್ ನಲ್ಲಿ ಸಗರದ ಕಾವೇರಿ ವಿದ್ಯಾ ಮಂದಿರ ಹಾಗೂ ಕಲಾನಿಕೇತನ ಟ್ರಸ್ಟ್ ವತಿಯಿಂದ ಖ್ಯಾತ ವೈದ್ಯರು ಹಾಗೂ ಸಾಹಿತಿಗಳಾದ ಡಾ.ದೇವೇಂದ್ರಪ್ಪ ಹಡಪದ ಅವರ 68ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,ಕವಿತೆಗಳು ನಾಡಿನ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವ ಮತ್ತು ಹೊಸ ಭರವಸೆಗಳನ್ನು ಮೂಡಿಸುವ ಆಶಾ ಕಿರಣವಾಗಿರಬೇಕು ಎಂದು ನುಡಿದರು.ಕವಿತೆಯ ಸಾಲುಗಳು ಓದುಗರ ಮನಸ್ಸು ಅರಳಿಸಿ,ಅವರ ಬದುಕಿನ ಅರ್ಥವಂತಿಕೆ ಹಾಗೂ ಭಾವನೆಗಳ ಒಡನಾಟ ಸುಂದರವಾಗಿ ಕಟ್ಟಿಕೊಡುವಂತಿರಬೇಕು, ರಚನೆಗೊಂಡಿರುವ ಕಾವ್ಯವು ಬದುಕಿನ ನಿರಾಸೆ,ನೋವುಗಳನ್ನು, ಮೀರಿ ಸೌಂದರ್ಯವನ್ನು ಹುಡುಕುವ ಮತ್ತು ಜೀವನ ಪ್ರೀತಿಗೆ ಮುಡುಪಾಗಿರುವ ಸಂಪತ್ತು ಸೃಷ್ಟಿಸುವಂತಿರಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.
ಸುಮಾರು 25 ಕ್ಕೂ ಹೆಚ್ಚು ಯುವ ಕವಿಗಳು ತಮ್ಮ ಸ್ವರಚಿತ ಕವನಚಿಸಿದರು,ಡಾ.ಸಾಬಣ್ಣ ಮುಡಬೂಳ ರವರ ಹೃದಯ ನವಿರಾಗಿ ಅರಳಿದೆ,ಧರ್ಮಣ್ಣ ಬಡಿಗೇರ ಅವರ ಎಲ್ಲಿ ಹುಡಕಲಿ ಅವ್ವ ಎಲ್ಲಿ ಹುಡಕಲಿ,ಪಂಚಾಕ್ಷರಿ ಹಿರೇಮಠರ ಅಂತರಂಗ ಪ್ರತಿಮೆಗಳ ಮನಸ್ಸು,ಶ್ರೀಶೈಲ್ ಬಿರಾದಾರ ಹೃದಯವಂತ ಡಾ. ದೇವೇಂದ್ರಪ್ಪ,ಶಂಕರ ಹುಲಕಲ ಅವರ ನಮ್ಮ ಖುಷಿ ಅಂದ್ರೆ ಇಷ್ಟೇ, ಸಂತೋಷ ಸತ್ಯಂಪೇಟೆ ಅವರ ಕರುಣಾಮಯಿ ಬೆಳಕು,ಮೀನಾಕ್ಷಿ ಹೊಸಮನಿ ಅವರ ನೀವು ಮನುಷ್ಯರ ?,ಬಿ.ಎಸ್. ಪುಜಾರಿಯವರ ಮುದ್ದಾದ ನವಿಲು,ಸಾಯಿಬಾಬಾ ಅಣಬಿಯವರ ಕೋಗಿಲೆ ಹಾಡುತಿದೆ,ಈಶ್ವರ ಶಹಾಪೂರಕರ
ನಡೆದಾಡುವ ದೇವ ಡಾ.ದೇವೇಂದ್ರಪ್ಪ,ದುರ್ಗಪ್ಪ ಪೂಜಾರಿ ಅಂದದ ಗಗನಕ್ಕೆ ಚಂದದ ಗರಿಯಾಕೆ ?, ಗುರುಪ್ರಸಾದ್ ವೈದ್ಯ ಅವರ ದುಡಿಯಲು ಬಂದವರು ಗುಳೆ ಹೋಗುವ ದಾರುಣ ಕಥೆ ಕುರಿತು, ಹಳ್ಳಳ್ಳೆಪ್ಪ ಪೂಜಾರಿಯವರ ತಪ್ಪು ಒಪ್ಪು ನೀನ್ಯಾರು,ಮಡಿವಾಳಪ್ಪ ಪಾಟೀಲರ ದೇವೇಂದ್ರಪ್ಪ ಹಡಪದ ಅವರ ಕುರಿತು ವ್ಯಕ್ತಿಚಿತ್ರಣ, ಸವಿತಾ ಟೊಕಾಪುರ ಕನ್ನಡ ನಾಡಿನ ಸಾರಥಿಯಾಗು,ಚಂದನ್ ಆವಂಟಿಯರ ಡಾ.ಹಡಪದವರ ಅಂತರಾಳ ಕುರಿತು,ಮಂಜುಳಾ ಚೌಹಾಣ ಹೂವಿನಷ್ಟೇ ಕೋಮಲತೆಯ ನಗು,ಮೇಘ ಆಚಾರ್ಯ ಅವರ ಎಲ್ಲದಕ್ಕೂ ಬೇಕು ದುಡ್ಡು,ಸಂತೋಷ ನಗನೂರರ ನಮ್ಮ ಬದುಕಿನ ನಾಡು ನಮ್ಮ ಬದುಕಿನ ಹಾದಿ, ಚಂದ್ರಕಲಾ ಸಜ್ಜನರ ಇನಿಯನ ಮಾತೆ ಹೃದಯಕ್ಕೆ ತಂಪು,
ಗೌಡಪ್ಪಗೌಡ ಪರಿವಾಣರ ಅಮ್ಮನಿಗೆ ನಮಸ್ಕಾರ, ನಿಜಲಿಂಗಪ್ಪ ತನಕೆದಾರರ ಶಿಕ್ಷಣ ಬಾಳಿನ ಲಕ್ಷಣ,ರಂಗನಾಥ ದೊರೆಯವರ ನಿಸರ್ಗದ ದುರ್ಗತಿ ಪರಿಸರ ನಾಶದ ಕುರಿತು ಚಿಂತನೆ, ಕುರಿತು ವಾಚಿಸಿ ಮೆಚ್ಚುಗೆ ಪಡೆದವು.ನಂತರ ಕವಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
