ಎಂ ಆರ್ ಎಂ ಸಿ ನಿವೃತ್ತ ಸಹಾಯಕ ಪ್ರೊಫೆಸರ್ ಕಾಶಪ್ಪ ಆರ್ ಬಿರಾದಾರ ನಿಧನ
ಎಂ ಆರ್ ಎಂ ಸಿ ನಿವೃತ್ತ ಸಹಾಯಕ ಪ್ರೊಫೆಸರ್ ಕಾಶಪ್ಪ ಆರ್ ಬಿರಾದಾರ ನಿಧನ
ಕಲಬುರಗಿ : ಮಹಾದೇವಪ್ಪ ರಾಂಪುರ ಮೆಡಿಕಲ್ ಕಾಲೇಜಿನ ನಿವೃತ್ತ ಸಹಾಯಕ ಪ್ರೊಫೆಸರ್ ( ಪಿ.ಪಿ ಸೆಂಟರ್) ಮತ್ತು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯರಾದ ಕಾಶಪ್ಪ ಆರ್ ಬಿರಾದಾರ್ ಅವರು ವಯೋಸಹಜ ಕಾಯಿಲೆಯಿಂದ ಭಾನುವಾರ ಬೆಳಿಗ್ಗೆ 8.30 ಕ್ಕೆನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಮಕ್ಕಳಾದ ಲಂಡನ್ನಲ್ಲಿರುವ ಡಾ. ವಿದ್ಯಾಸಾಗರ್ ದಯಾಸಾಗರ್ (ಇಂಜಿನಿಯರ್) ಡಾ. ಆನಂದ ಸಾಗರ್ , ವಿಜಯಲಕ್ಷ್ಮಿ ಮತ್ತು ಜಯಲಕ್ಷ್ಮಿ ಇಬ್ಬರು ಹೆಣ್ಣು ಮಕ್ಕಳನ್ನು ಹಾಗೂ ಅಪಾರ ಬಂದು ವರ್ಗವನ್ನು ಆಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ನಾಳೆ ಸೋಮವಾರ ಮಧ್ಯಾಹ್ನ 12 ಗಂಟೆವರೆಗೆ ಕಲಬುರಗಿಯ ಜಯನಗರದ ಡಾಕ್ಟರ್ಸ್ ಕಾಲನಿಯಲ್ಲಿರುವ ಸ್ವಗೃಹದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕಿಡಲಾಗಿದೆ. ಸೋಮವಾರ ಸಾಯಂಕಾಲ 4.ಗಂಟೆಗೆ ಗ ಹಳ್ಳಿಖೇಡ್ ಗ್ರಾಮದ ಧನ್ನೂರ (ಆರ್) ಸ್ವಂತ ತೋಟದಲ್ಲಿ ಅಂತ್ಯಸಂಸ್ಕಾರ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.
