ಜಾನಪದ ನೃತ್ಯ, ಸಂಗೀತ ವೈಭವ ಕಾರ್ಯಕ್ರಮ ಹಾಗೂ ಗಾನ ಗಂಧರ್ವ ಡಾ. ಪಂಡಿತ್ ಪುಟ್ಟರಾಜ ಗವಾಯಿ ಪ್ರಶಸ್ತಿ ಪ್ರಧಾನ
ಜಾನಪದ ನೃತ್ಯ, ಸಂಗೀತ ವೈಭವ ಕಾರ್ಯಕ್ರಮ ಹಾಗೂ ಗಾನ ಗಂಧರ್ವ ಡಾ. ಪಂಡಿತ್ ಪುಟ್ಟರಾಜ ಗವಾಯಿ ಪ್ರಶಸ್ತಿ ಪ್ರಧಾನ
ಕಲಬುರಗಿ: ಶ್ರೀ ದಿಕ್ಷಾಯುವ ಕ್ರೀಡಾ ಮತ್ತು ಸಾಂಸ್ಕೃತಿಕ ಸೇವಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜಾನಪದ ನೃತ್ಯ ಹಾಗೂ ಸಂಗೀತ ವೈಭವ ಕಾರ್ಯಕ್ರಮವು ಸೋಮವಾರ ನಗರದ ಕನ್ನಡ ಭವನದಲ್ಲಿ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶಾಮ ನಾಟೀಕರ ಉದ್ಘಾಟಿಸಿದರು. ಇದೇ ವೇಳೆ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಬಿಜೆಪಿ ಮುಖಂಡ ರಾಜು ವಾಡೇಕರ, ಎ.ಎಸ್‌ಐ ಡಾ. ಅಣಪೆ ಎಸ್.ಜಿ., ಸಂತೋಷ ಸಿಂಧೆ ಗೊಂಧಳಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ಸಂಘದ ಅಧ್ಯಕ್ಷರಾದ ಡಾ. ದತ್ತು ಹೆಚ್. ಭಾಸಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾನಪದ ಕಲೆ ಮತ್ತು ಸಂಗೀತವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಗರ ಎಚ್. ಭೀಮಳ್ಳಿ ಅವರ ಜಾನಪದ ಗೀತೆ, ಶಂಭುಲಿAಗ ಮಂಗಲಗಿ ಅವರ ತತ್ವಪದಗಳು, ಕು. ಸ್ವಾತಿ ಬಿ. ಕೋಬಾಳ ಅವರ ಸುಗಮ ಸಂಗೀತ, ಆಕಾಶವಾಣಿ ಕಲಾವಿದರಾದ ಶ್ರೀ ಬಲಭೀಮ ನೆಲೋಗಿ ಅವರ ದಾಸವಾಣಿ ಪ್ರೇಕ್ಷಕರ ಮನಸೂರೆಗೊಂಡವು. ತಬಲಾವಾದಕ ಮನೋಹರ್ ವಿಶ್ವಕರ್ಮ ಹಾಗೂ ಇತರ ಕಲಾವಿದರು ಸಂಗೀತ ಕಾರ್ಯಕ್ರಮಕ್ಕೆ ಮೆರುಗು ತಂದರು.
ಈ ಸಂದರ್ಭದಲ್ಲಿ ಗಾನ ಗಂಧರ್ವ ಡಾ. ಪಂಡಿತ್ ಪುಟ್ಟರಾಜ ಗವಾಯಿ ಪ್ರಶಸ್ತಿಯನ್ನು ಸಂಗೀತ ಕ್ಷೇತ್ರದಲ್ಲಿ ಬಾಬುರಾವ ಕೋಬಾಳ, ಶಿಕ್ಷಣ ಕ್ಷೇತ್ರದಲ್ಲಿ ಲತಾ ವಿ. ಮಠಪತಿ, ಡಾ. ಭಾಗೀರಥಿ ಎಚ್. ಗುಡ್ಡೆವಾಡಿ, ಡಾ. ರಾಜಕುಮಾರ ಆರ್. ಪಾಟೀಲ ಹಾಗೂ ರಾಕೇಶ್ ರೋಟಿಕರ್ ಅವರಿಗೆ ಪ್ರದಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಸಾಗರ ಕಾಂಬಳೆ ನೆರವೇರಿಸಿದರು. ವಿವಿಧ ಕಲಾತಂಡಗಳ ಜಾನಪದ ನೃತ್ಯ ಹಾಗೂ ಸಂಗೀತ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು. ಕಾರ್ಯಕ್ರಮದಲ್ಲಿ ಕಲಾಭಿಮಾನಿಗಳು, ಗಣ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದರು.
