ನಾಳೆ ಪಟ್ಟದ್ದೇವರ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭ
ನಾಳೆ ಪಟ್ಟದ್ದೇವರ ಅಮೃತ ಮಹೋತ್ಸವದ ಅಭಿನಂದನಾ ಸಮಾರಂಭ
ಕಮಲನಗರ :ತಾಲೂಕಿನ ಸಂಗಮ ಗ್ರಾಮದಲ್ಲಿ ನಾಡೋಜ ಡಾ.ಬಸವಲಿಂಗಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭದ ನಿಮಿತ್ತ ಖೇಡ ಸಂಗಮ ನೀಲಾಂಬಿಕೆ ಆಶ್ರಮದ ಮಹಾದೇವಮ್ಮ ತಾಯಿ ಅವರು ಅಧ್ಯಕ್ಷತೆಯಲ್ಲಿ ಪೂರ್ವ ಭಾವಿ ಸಭೆ ನಡೆಯಿತ್ತು.
ಮೇ.3ರಂದು ಅಂದರೆ ನಾಳೆ ಸಂಗಮ ಗ್ರಾಮದಲ್ಲಿ ನಾಡೋಜ ಡಾ.ಬಸವಲಿಂಗಪಟ್ಟದ್ದೇವರ ಅಮೃತ ಮಹೋತ್ಸವ ಅಭಿನಂದನಾ ಸಮಾರಂಭ ಹಾಗೂ ಜನತೇಯ ಜಂಗಮ ಗ್ರಂಥ ಲೋಕಾರ್ಪಣೆಯ ಪವಿತ್ರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಭವ್ಯ ಮೆರವಣಿಗೆ, ಕೋಲಾಟ ಮತ್ತು ಅಕ್ಕನ ಬಳಗದ ಭಜನೆ ತಂಡಗಳು ಭಾಗವಹಿಸಲು ತೀರ್ಮಾನಿಸಲಾಗಿದೆ.
ಸಂಗಮ ಗ್ರಾಮದ ಸುತ್ತಲಿನ ಡೋಣಗಾಪೂರ್, ಬಳತ(ಬ), ಹೊಳಸಮುದ್ರ,ಲಖನಗಾಂವ, ಠಾಣಾಕುಶನೂರ್ ಖೇಡ ಮುಂತಾದ ಗ್ರಾಮಗಳ ಸನ್ಮಾನ ಸಮಾರಂಭ ಗ್ರಾಮಸ್ಥರಿಂದ ನಡೆಯಲಿದೆ. ಇದಲ್ಲದೆ ಗಣ್ಯರು ಮತ್ತು ಮಠಾಧೀಶರು ಕಾರ್ಯಕ್ರಮಕ್ಕೆ ಆಗಮಿಸುವಂತೆ ಅಹ್ವಾನಿಸಲು ತೀರ್ಮಾನಿಸಲಾಗಿದೆ.ಅಕ್ಕನ ಬಳಗ ಹಾಗೂ ಅಣ್ಣನ ಬಳಗ ಸಂಗಮದಿಂದ
ವಿಶೇಷ ಕಾರ್ಯಕ್ರಮದಲ್ಲಿ
ಗ್ರಾಮಸ್ಥರಿಗೆ ಸನ್ಮಾನ ಹಾಗೂ ಪೂಜ್ಯರ ಜನ್ಮದಿನವನ್ನು
75 ಗ್ರಾಮಗಳಿಗೆ ಬಸವ ಜ್ಯೋತಿ ಬೆಳಗಿಸಿದ ಮಕ್ಕಳ ಜನ್ಮದಿನ ಆಚರಿಸುವ ಪ್ರಯುಕ್ತ 75 ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಲಿದೆ ಎಂದು ನೀಲಾಂಬಿಕಾ ಆಶ್ರಮ,ಖೇಡ ಸಂಗಮದ ಡಾ.ಪೂಜ್ಯ ಮಹಾದೇವಮ್ಮ ತಾಯಿ ಪ್ರಕಟಣೆಗೆ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನೀಲಕಂಠ ಬಿರಾದಾರ್, ಮಲ್ಲಿಕಾರ್ಜುನ ದುಬಲಗುಂಡೆ, ಸಂಜುಕುಮಾರ ಮೆಂಗಾ, ಅನೀಲ ಹೊಳಸಂಬೆ,ಓಂಪ್ರಕಾಶ ಬಿರಾದಾರ, ಜೈಹಿಂದ ನಾಗಶಂಕರೆ, ಸಂಗಮೇಶ ಸರಬಾರೆ, ರಸೀದಮಿಯಾ ದೇಶಮುಖ ಇ್ನಿತರರಿದ್ದರು.
