ಸಿಬಿಎಸ್‌ಸಿ ಕ್ಲಸ್ಟರ್ ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿ.

ಸಿಬಿಎಸ್‌ಸಿ ಕ್ಲಸ್ಟರ್ ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿ.

ಸಿಬಿಎಸ್‌ಸಿ ಕ್ಲಸ್ಟರ್ ರಾಜ್ಯಮಟ್ಟದ ಕ್ರೀಡಾಕೂಟ ಯಶಸ್ವಿ.

ಶಹಾಪುರ : ತಾಲ್ಲೂಕಿನ ಸಗರ ಸುಬೇದಾರ ವಿದ್ಯಾಲಯದಲ್ಲಿ ಜುಲೈ 25 ರಿಂದ 30 ರವರೆಗೆ ಜರುಗಿದ ಸಿ.ಬಿ.ಎಸ್.ಇ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಅತ್ಯಂತ ವಿಜ್ರಂಭಣೆ ಹಾಗೂ ಯಶಸ್ವಿಯಾಗಿ ಜರುಗಿತು.ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸಾವಿರಾರು ಕ್ರೀಡಾಪಟುಗಳು ತಮ್ಮ ಅದ್ಭುತ ಕ್ರೀಡಾಕೌಶಲ್ಯವನ್ನು ಪ್ರದರ್ಶಿಸುವ ಮೂಲಕ ಕ್ರೀಡಾಕೂಟದ ಯಶಸ್ವಿಗೆ ಕಾರಣಿಕರ್ತರಾದರು .

ಈ ಕ್ರೀಡಾಕೂಟದಲ್ಲಿ ಸುಮಾರು 4 ಸಾವಿರ ವಿದ್ಯಾರ್ಥಿಗಳು ಹಾಗೂ 4 ನೂರಕ್ಕೂ ಹೆಚ್ಚು ನುರಿತ ದೈಹಿಕ ಶಿಕ್ಷಕರು, ಕೋಚಗಳು, ಭಾಗವಹಿಸಿದ್ದರು,ಹಾಗೆ ಉತ್ಸಾಹದಿಂದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಪಾಲ್ಗೊಂಡಿದ್ದರು, ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸುವಲ್ಲಿ ಕ್ರೀಡಾಕೂಟದ ವೇದಿಕೆ ಅತ್ಯುತ್ತಮವಾಗಿತ್ತು.

14,17,19 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚುರುಕಿನ ಸ್ಪರ್ಧೆಗಳು ಏರ್ಪಟ್ಟಿದ್ದವು,ಈ ಸಂದರ್ಭದಲ್ಲಿ ಕ್ರೀಡಾ ಕೌಶಲ್ಯವನ್ನು ತೋರುವುದಿಲ್ಲವೇ ತಂಡದ ಸಹಕಾರ ಶಿಸ್ತು ಮತ್ತು ಕ್ರೀಡಾ ಮನೋಭಾವನೆಯನ್ನು ಮತ್ತಷ್ಟು ಹೆಚ್ಚಿಸಿತು.

ಹದಿನಾಲ್ಕು ವರ್ಷದ ಒಳಗಿನ ಬಾಲಕರ ಬಳ್ಳಾರಿಯ ನಂದಿ ಸ್ಕೂಲ್ ಪ್ರಥಮ ಸ್ಥಾನ ಪಡೆದುಕೊಂಡರೆ,ಬೆಂಗಳೂರಿನ ಜನನಿ ವಿದ್ಯಾ ಮಂದಿರ ದ್ವಿತೀಯ ಸ್ಥಾನ ಪಡೆದುಕೊಂಡಿತು, ಗಂಗಾವತಿಯ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತೃತೀಯ ಸ್ಥಾನ ತನ್ನದಾಗಿಸಿಕೊಂಡಿತು.ಅದೇ ತೆರನಾಗಿ 14 ವರ್ಷದೊಳಗಿನ ಬಾಲಕಿಯರ ತಂಡದವರು, ಶಾರದಾ ದೇವಿ ಸ್ಕೂಲ್ ಪ್ರಥಮ ಸ್ಥಾನ,ಚಿತ್ರಕೂಟ ಸ್ಕೂಲ್ ದ್ವಿತೀಯ ಸ್ಥಾನ,ಚಾಣಕ್ಯ ಸ್ಕೂಲ್ ತೃತೀಯ ಸ್ಥಾನ ಪಡೆದುಕೊಂಡಿತು.

17 ವರ್ಷದೊಳಗಿನ ಬಾಲಕರ ತಂಡ ಚಂದರಗಿಯ ಎಸ್.ಎಂ.ಕಲುಟಿ ಸ್ಪೋರ್ಟ್ಸ್ ಸ್ಕೂಲ್ ಪ್ರಥಮ ಸ್ಥಾನ, ಬೆಂಗಳೂರಿನ ಚಿತ್ರಕೂಟ ಸಿ.ಬಿ.ಎಸ್.ಇ ಸ್ಕೂಲ್ ದ್ವಿತೀಯ ಸ್ಥಾನ,ಬೆಂಗಳೂರಿನ ಶ್ರೀ ಸಾಯಿ ಸದ್ಭಾವನ ಸ್ಕೂಲ್ ತೃತೀಯ ಸ್ಥಾನ ಪಡೆದುಕೊಂಡರೆ,ಮತ್ತೆ 17 ವರ್ಷದೊಳಗಿನ ಬಾಲಕಿಯರ ತಂಡ ಪ್ರಥಮ ಸ್ಥಾನವನ್ನು ಚಿತ್ರಕೂಟ ಶಾಲೆ ಪಡೆಯಿತು ದ್ವಿತೀಯ ಸ್ಥಾನವನ್ನು ನಂದಿ ಸ್ಕೂಲ್ ಸಿ ಪಡೆದುಕೊಂಡಿತು, ತೃತೀಯ ಸ್ಥಾನ ಎಚ್.ಕೆ.ಎಸ್. ಇಂಟರ್ನ್ಯಾಷನಲ್ ಸ್ಕೂಲ್ ಪಾಲಾಯಿತು. 

19 ವರ್ಷದೊಳಗಿನ ಬಾಲಕರ ತಂಡ ಪ್ರಥಮ ಸ್ಥಾನ ಈಸ್ಟ್ ವೆಸ್ಟ್ ಇಂಟರ್ನ್ಯಾಷನಲ್ ಸ್ಕೂಲ್ ಮೈಸೂರ,ದ್ವಿತೀಯ ಸ್ಥಾನ ಪೊಲೀಸ್ ಪಬ್ಲಿಕ್ ಸ್ಕೂಲ್ ಬೆಂಗಳೂರು,ತೃತೀಯ ಸ್ಥಾನ ಶ್ರೀ ಸಿದ್ಧಗಂಗಾ ಹಿರಿಯ ಪ್ರಾಥಮಿಕ ಶಾಲೆ,ಬೆಂಗಳೂರು ಪಡೆದುಕೊಂಡಿತು.19 ವರ್ಷದ ಒಳಗಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಬೆಂಗಳೂರಿನ ಎಂ.ಇ.ಸಿ.ಪಬ್ಲಿಕ್ ಸ್ಕೂಲ್, ದ್ವಿತೀಯ ಸ್ಥಾನ ಬೆಂಗಳೂರಿನ ಶ್ರೀ ಸಿದ್ದಗಂಗಾ ಹಿರಿಯ ಪ್ರಾಥಮಿಕ ಶಾಲೆ,ತೃತೀಯ ಸ್ಥಾನ ಜ್ಞಾನದೀಪ ಸೀನಿಯರ್ ಸೆಕೆಂಡರಿ ಸ್ಕೂಲ್ ಪಡೆದುಕೊಂಡಿತು.

ಸುಬೇದಾರ ವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಖ್ಯಾತ ವೈದ್ಯರಾದ ಡಾ.ಚಂದ್ರಶೇಖರ್ ಸುಬೇದಾರ ವಿಜೇತ ತಂಡದ ಕ್ರೀಡಾಪಟುಗಳಿಗೆ ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಶುಭ ಹಾರೈಸಿದರು,ಈ ಸಂದರ್ಭದಲ್ಲಿ ನುರಿತ ಹಾಗೂ ಹಿರಿಯ ಕ್ರೀಡಾ ತರಬೇತಿದಾರರನ್ನು ಸುಬೇದಾರ ವಿದ್ಯಾಲಯದ ವತಿಯಿಂದ ಸನ್ಮಾನಿಸಲಾಯಿತು, ಸಮಾರಂಭದ ವೇದಿಕೆಯ ಮೇಲೆ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ನಾಗನಗೌಡ ಸುಬೇದಾರ, ಸುನಂದಾ ಸುಬೇದಾರ ವ್ಯವಸ್ಥಾಪಕ ನಿರ್ದೇಶಕ ಕರಣ ಸುಬೇದಾರ,ಶ್ರೀಕಾಂತಗೌಡ,

ಸಂತೋಷಗೌಡ,ನಿಂಗನಗೌಡ ಮಾಲಿ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.