ವಿಶ್ವಾಸ ಮತ್ತು ಸಹಕಾರದೊಂದಿಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ತುಂಬಾ ಹೆಮ್ಮೆಯ ವಿಷಯ

ವಿಶ್ವಾಸ ಮತ್ತು ಸಹಕಾರದೊಂದಿಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ತುಂಬಾ ಹೆಮ್ಮೆಯ ವಿಷಯ

| ಸಾಬಣ್ಣ ಸುಂಗುಲಕರ್ ವಯೋನಿವೃತ್ತಿ ಸಮಾರಂಭ |

ವಿಶ್ವಾಸ ಮತ್ತು ಸಹಕಾರದೊಂದಿಗೆ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವುದು ತುಂಬಾ ಹೆಮ್ಮೆಯ ವಿಷಯ :..

ಮೂರು ದಶಕಗಳ ಕಾಲ : ಕಪ್ಪು ಚುಕ್ಕೆ ಇಲ್ಲದೆ : ಸೇವೆಯನ್ನು ಪೂರ್ಣಗೊಳಿಸಿದ ಅವರೂಪದ ವ್ಯಕ್ತಿ :..

ಶಹಾಬಾದ್ : - ಸರ್ಕಾರಿ ನೌಕರರು ದೀರ್ಘಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುವವರು ತುಂಬಾ ಅಪರೂಪ ಅಂತಹದರಲ್ಲಿ 28 ವರ್ಷಗಳ ಕಾಲ ನಗರ ಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿ ಎಲ್ಲರ ವಿಶ್ವಾಸ ನಂಬಿಕೆ ಮತ್ತು ಸಹಕಾರದೊಂದಿಗೆ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವುದು ತುಂಬಾ ಹೆಮ್ಮೆಯ ವಿಷಯವಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ನೀಲಪ್ರಭಾ ಬಬಲಾದ ಹೇಳಿದರು.

ಅವರು ನಗರ ಸಭೆ ಆವರಣದಲ್ಲಿ ಶುಕ್ರವಾರ ನಗರಸಭೆ ಸಿಬ್ಬಂದಿ ಸಾಬಣ್ಣ ಸುಂಗುಲಕರ್ ಅವರ ವಯೋನಿವೃತ್ತಿ ಸಮಾರಂಭದಲ್ಲಿ ಅತಿಥಿಗಳಾಗಿ ಮಾತನಾಡಿದರು.

ನಗರ ಪೊಲೀಸ್ ಠಾಣೆ ಟಿಐ ಪರಶುರಾಮ ವನಂಜಕರ ಮಾತನಾಡಿ ಮೂರು ದಶಕಗಳ ಕಾಲ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ತಮ್ಮ ಸೇವೆಯನ್ನು ಪೂರ್ಣಗೊಳಿಸಿದ ಸಾಬಣ್ಣ ಸುಂಗುಲಕರ್ ಅವರೂಪದ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು. 

ಕಾಡಾ ಅಧ್ಯಕ್ಷ ಡಾ. ಎಂ ಎ ರಶೀದ್ ಮತ್ತು ಮರಿಯಪ್ಪ ಹಳ್ಳಿ ಮಾತನಾಡಿ ನಗರಸಭೆ ಮತ್ತು ಸಾರ್ವಜನಿಕರ ಯಾವುದೇ ಕಾರ್ಯಕ್ರಮಗಳಾಗಲಿ ಜಯಂತಿಗಳಾಗಲಿ ಪೂರ್ವ ಸಿದ್ಧತೆ ಮತ್ತು ಅಚ್ಚುಕಟ್ಟಾಗಿ ನಿರ್ವಹಿಸುವ ಹೆಗ್ಗಣಕೆ ಅವರಿಗೆ ಸಲ್ಲುತ್ತದೆ ಮತ್ತು ಅನೇಕ ಪೌರಾಯುಕ್ತರು ನಗರಸಭೆ ಅಧ್ಯಕ್ಷರು ಸದಸ್ಯರುಗಳು ಕೈಕೆಳಗೆ ಕೆಲಸ ಮಾಡಿ ಮಣ್ಣನೆ ಗಳಿಸಿದ್ದಾರೆ ಅವರ ವಯೋನಿವೃತ್ತಿ ಜೀವನ ಆರೋಗ್ಯ ಸುಖಕರವಾಗಿ ಇರಲಿ ಎಂದು ಹಾರೈಸಿದರು. 

ಮೃತ್ಯುಂಜಯ ಸ್ವಾಮಿ ಹಿರೇಮಠ, ಸುರೇಶ ಮೆಂಗನ, ಶಿವಪುತ್ರ ಕರಣಿಕ, ಎಸ್ ಪಿ ನಂದಗಿರಿ, ಹಾಗೂ ಇತರರು ಮಾತನಾಡಿದರು.

ವೇದಿಕೆ ಮೇಲೆ ನಗರಸಭೆ ಪೌರಾಯುಕ್ತ ಫಕ್ರುದ್ದೀನ್ ಸಾಬ್, ಡಿ.ಡಿ ಓಣಿ, ಶರಣು ಪಗಲಾಪೂನ, ನಿಂಗಣ್ಣ ಪುಜಾರಿ, ರವಿ ರಾಠೋಡ್, ಅಹ್ಮದ್ ಪಟೇಲ, ಹಾಸಮ್ ಖಾನ್, ಪುರುಷೋತ್ತಮ, ನಗರಸಭೆ ಸಿಬ್ಬಂದಿಗಳು ಹಾಗೂ ರಾಜೇಶ್ ಯನಗುಂಕಟಿಕರ, ಸಾಹೇಬಗೌಡ ಬೋಗುಂಡಿ, ಸೂರ್ಯಕಾಂತ ಕೋಬಾಳ, ಕಾಶಿನಾಥ್ ಜೋಗಿ, ಸಾಬೇರಾ ಬೆಗಂ, ಪಾರ್ವತಿ ಪವಾರ, ಪೌರ ಕಾರ್ಮಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. 

ರಘುನಾಥ ನರಸಾಳೆ ನಿರೂಪಿಸಿದರು ಶರಣಗೌಡ ಪಾಟೀಲ ಸ್ವಾಗತಿಸಿ ವಂದಿಸಿದರು. 

ಶಹಾಬಾದ್ ನಗರಸಭೆ ಸಿಬ್ಬಂದಿ ಸಾಬಣ್ಣ ಸುಂಗುಲಕರ್ ಅವರ ವಯೋನಿವೃತ್ತಿ ಸಮಾರಂಭದಲ್ಲಿ ತಹಶೀಲ್ದಾರ್ ಪೌರಾಯುಕ್ತರು ಊರಿನ ಗಣ್ಯರು ಗೌರವಿಸಿ ಬೀಳ್ಕೊಟ್ಟರು.