ಇಂದು ಡೋಣಗಾಂವ (ಎಂ) ಗ್ರಾಮದಲ್ಲಿ ಸೇವಾ ನಿವೃತ್ತ ಯೋಧ ಮಲ್ಲಿಕಾರ್ಜುನ ಹೊಂಡಾಳೆ ಅವರಿಗೆ ಅಭಿನಂದನಾ ಸಮಾರಂಭ

ಇಂದು ಡೋಣಗಾಂವ (ಎಂ) ಗ್ರಾಮದಲ್ಲಿ ಸೇವಾ ನಿವೃತ್ತ ಯೋಧ ಮಲ್ಲಿಕಾರ್ಜುನ ಹೊಂಡಾಳೆ ಅವರಿಗೆ ಅಭಿನಂದನಾ ಸಮಾರಂಭ

ಇಂದು ಡೋಣಗಾಂವ (ಎಂ) ಗ್ರಾಮದಲ್ಲಿ ಸೇವಾ ನಿವೃತ್ತ ಯೋಧ ಮಲ್ಲಿಕಾರ್ಜುನ ಹೊಂಡಾಳೆ ಅವರಿಗೆ ಅಭಿನಂದನಾ ಸಮಾರಂಭ

 ಕಮಲನಗರ: ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ತಾಲೂಕಿನ ಡೋಣಗಾಂವ (ಎಂ) ಗ್ರಾಮದ ಯೋಧ ಶ್ರೀ ಮಲ್ಲಿಕಾರ್ಜುನ ವೈಜಿನಾಥ ಹೊಂಡಾಳೆ ಅವರಿಗೆ ಗ್ರಾಮಸ್ಥರು ಮತ್ತು ಹೊಂಡಾಳೆ ಪರಿವಾರದ ವತಿಯಿಂದ ಅದ್ಧೂರಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ.

ಸೇನೆಯಿಂದ ಸೇವಾ ನಿವೃತ್ತ 

 ನಿಮಿತ್ಯ ವೃಂದಾವನ ಮಲ್ಟಿಸ್ಪೆಷಾಲಿಟಿ ಹಾಸ್ಪಿಟಲ್ ಮತ್ತು ಐ.ಸಿ.ಯು.ಇವರ ವತಿಯಿಂದ ಉಚಿತ ತಪಾಸಣೆ ಶಿಬಿರ ಕಾರ್ಯಕ್ರಮ ನಡೆಯಲಿದ್ದು ಪ್ರಸಿದ್ಧ ಡಾ.ದಯಾನಂದ ಬಾಲಾಜಿರಾವ ಗವಳೆ ತೋರಣೇಕರ ಇವರ ನೇತೃತ್ವದಲ್ಲಿ ನಡೆಯಲಿದೆ.

ಸದರಿ ಕಾರ್ಯಕ್ರಮ ಇಂದು ಶನಿವಾರ ಸಂಜೆ 6:00 ಗಂಟೆಗೆ ಗ್ರಾಮದ ಹನುಮಾನ ದೇವಾಲಯದ ಪಿ.ಕೆ.ಪಿ.ಎಸ್ ಆವರಣದಲ್ಲಿ ನಡೆಯಲಿದ್ದು 

 ದಿವ್ಯಸಾನ್ನಿಧ್ಯವನ್ನು ಡೋಣಗಾಂವ (ಎಂ)ಹಾವಗಿಸ್ವಾಮಿ ಮಠದ ಶ್ರೀ 108 ಪ.ಪೂ. ಡಾ. ಶಂಭುಲಿಂಗ ಶಿವಾಚಾರ್ಯರು ವಹಿಸಲಿದ್ದಾರೆ.

ಹಾವಗಿಲಿಂಗೇಶ್ವರ ಶಿವಾಚಾರ್ಯರು ಕಾರ್ಯಕ್ರಮದ ಘನ ನೇತೃತ್ವ ವಹಿಸಲಿದ್ದಾರೆ.

ಕಾರ್ಯಕ್ರಮವನ್ನು ಮಾಜಿ ಸಚಿವರು ಹಾಗೂ ಶಾಸಕ ಪ್ರಭು ಚವ್ಹಾಣ ಉದ್ಘಾಟಿಸಲಿದ್ದು ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ ಘನ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಂಜಯ ಬನಸೋಡೆ, ತಹಶೀಲ್ದಾರ್ ಅಮಿತ ಕುಲಕರ್ಣಿ, ಇಒ ಹನುಮಂತರಾಯ ಕೌಟಗೆ, ಎಡಿ ಶಿವಕುಮಾರ್ ಘಾಟೆ,ಡಾ ಶ್ರೀ ಮಾಧವರಾವ್ ವಿ.ಚಂಬೂಲೆ ಖ್ಯಾತ ವೈದ್ಯರು, ಶ್ರೀ ಮತಿ ಆಶಾ ರಾಠೋಡ ಪಿ.ಎಸ್.ಆಯ್.ಕಮಲನಗರ, ಶ್ರೀ ರಾಮದಾಸ್ ಬೇಲೂರ ಪಿ.ಡಿ.ಓ.ಗ್ರಾಮ ಪಂಚಾಯತ್ ಡೋಣಗಾಂವ (ಎಂ), ಸೇರಿದಂತೆ ಅನೇಕ ಶ್ರೀ ಗಳು ಚುನಾಯಿತ ಪ್ರತಿನಿಧಿಗಳು ಹಾಗೂ ಗಣ್ಯರು ಪಾಲ್ಗೊಳಲಿದ್ದಾರೆ. ಪ್ರಾಸ್ತಾವಿಕವಾಗಿ ಶ್ರೀ ಶಾಲಿವಾನ ಗಂದಗೆ ನಿವೃತ್ತ ಮುಖ್ಯ ಗುರುಗಳು, ಮಾತನಾಡುವವರು ಗ್ರಾಮದ ಹೆಮ್ಮೆಯ ಪುತ್ರನಿಗೆ ಗೌರವ ಸಲ್ಲಿಸುವ ಈ ಸಮಾರಂಭಕ್ಕೆ ತಾಲೂಕಿನ ಸಾರ್ವಜನಿಕರು ಹಾಗೂ 

ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಹೊಂಡಾಳೆ ಪರಿವಾರ ಹಾಗೂ ಡೋಣಗಾಂವ (ಎಂ)ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.