ಕೀರ್ತನೆಗಳ ಮೂಲಕ ಜನರನ್ನು ಜಾಗೃತಿ ಗೊಳಿಸಿದವರು ಕನಕದಾಸರು.
ಕೀರ್ತನೆಗಳ ಮೂಲಕ ಜನರನ್ನು ಜಾಗೃತಿ ಗೊಳಿಸಿದವರು ಕನಕದಾಸರು.
ಆಳಂದ : ವೈಚಾರಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು,ಜಾತಿ ವ್ಯವಸ್ಥೆಯನ್ನು ಮೆಟ್ಟಿನಿಂತು, ಮುನ್ನೂರಕ್ಕೆ ಹೆಚ್ಚು ಕೀರ್ತನೆಗಳನ್ನು ರಚಿಸುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದವರು ಭಕ್ತ ಶ್ರೇಷ್ಠ ಕನಕದಾಸರು ಎಂದು ನಿವೃತ್ತ ಉಪನ್ಯಾಸಕರಾದ ಬಾಬುರಾವ ಸರಡಗಿ ಹೇಳಿದರು.
ನಗರದ ಮಾತೋಶ್ರೀ ಪ್ರಮೀಳಾಬಾಯಿ ಮಾಧವ ರಾವ್ ಗುತ್ತೇದಾರ ಕಲಾ,ವಿಜ್ಞಾನ, ಮತ್ತು ವಾಣಿಜ್ಯ ಕನ್ಯಾ ಪದವಿ ಪೂರ್ವ ಕಾಲೇಜಿನಲ್ಲಿ ಕಾಗಿನೆಲೆ ಅಭಿವೃದ್ದಿ ಪ್ರಾಧಿಕಾರ ಹಾಗೂ ಇತರದ ಕಲಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ ಕನಕ ದರ್ಶನ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಅವರು ಸಮ ಸಮಾಜದ ನಿರ್ಮಾಣಕ್ಕೆ ಹಗಲಿರುಳು ಶ್ರಮಿಸಿಸದವರು ಎಂದು ಹೇಳಿದರು.
ಮುಖ್ಯ ಅತಿಥಿಗಳು ಹಾಗೂ ಉಪನ್ಯಾಸಕರಾದ ರಾಜಶೇಖರ ಕಡಗನ ಮಾತನಾಡಿ ತತ್ವಪದ ಸಾಹಿತ್ಯ ಸಾಹಿತ್ಯದ ಮೂಲಕ ಸಂಗೀತ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡುವುದರ ಜೊತೆಗೆ ಶ್ರೀಮಂತ ಗೊಳಿಸಿದ ಕೀರ್ತಿ ಕನಕದಾಸರಿಗೆ ಸಲ್ಲುತ್ತದೆ ಎಂದು ನುಡಿದರು ಅಲ್ಲದೆ,ಶಾಸ್ತ್ರ ವಿದ್ಯೆಯ ಜೊತೆಗೆ ಶಸ್ತ್ರ ವಿದ್ಯೆ ಕಲಿಯಬೇಕೆಂಬುದೇ ಕನಕದಾಸರ ಮುಖ್ಯವಾಗಿದ್ದು ಎಂದು ನುಡಿದರು.
ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿರುವ ಮಲ್ಲಿಕಾರ್ಜುನ ಬಕ್ಕೆ ಮಾತನಾಡಿ ಕನಕದಾಸರ ಮೌಲ್ಯ ಆಧಾರಿತ ಜೀವನ ಇಂದಿನ ಪ್ರತಿಯೊಬ್ಬ ಯುವಕರಿಗೆ ಸ್ಪೂರ್ತಿಯಾಗಿವೆ,ಅವರ ತತ್ವ ಆದರ್ಶಗಳು ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ಈ ಸಮಾರಂಭದ ವೇದಿಕೆ ಮೇಲೆ
ಲಕ್ಷ್ಮಣ್ ದೇವಂತಗಿ ಲ್,ವಿಶ್ವನಾಥ್ ಘೋಡಕೆ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು, ಟ್ರಸ್ಟ್ ಅಧ್ಯಕ್ಷ ಬಸವರಾಜ ಶಿಣ್ಣೂರ ಪ್ರಾಸ್ತಾವಿಕ ನುಡಿಗಳನ್ನಾಡಿದರು,ಕಾರ್ಯಕ್ರಮದ ಪ್ರಾರಂಭದಲ್ಲಿ ಚಂದನಾ ಪ್ರಾರ್ಥಿಸಿದರು, ಸುಜಾತ ಗುತ್ತೇದಾರ ನಿರೂಪಿಸಿದರು, ಮಲ್ಲಿಕಾರ್ಜುನ್ ಖಜೂರಿ ಸ್ವಾಗತಿಸಿದರು,ಶರಣಬಸಪ್ಪ ಪರಾಣಿ ವಂದಿಸಿದರು.

