ಬೀದರ್ - ಬೆಂಗಳೂರು, ಕಲಬುರಗಿ - ಬೆಂಗಳೂರು ನಡುವೆ ವಿಮಾನ ಸೇವೆಗೆ ಹಸಿರು ನಿಶಾನೆ ಸರಕಾರದಿಂದ ಸಬ್ಸಿಡಿ ಘೋಷಣೆ ಉತ್ತಮ ನಿರ್ಧಾರ: ಡಾ.ಪೆರ್ಲ

ಬೀದರ್ - ಬೆಂಗಳೂರು, ಕಲಬುರಗಿ - ಬೆಂಗಳೂರು ನಡುವೆ ವಿಮಾನ ಸೇವೆಗೆ ಹಸಿರು ನಿಶಾನೆ  ಸರಕಾರದಿಂದ ಸಬ್ಸಿಡಿ ಘೋಷಣೆ ಉತ್ತಮ  ನಿರ್ಧಾರ: ಡಾ.ಪೆರ್ಲ

ಬೀದರ್ - ಬೆಂಗಳೂರು, ಕಲಬುರಗಿ - ಬೆಂಗಳೂರು ನಡುವೆ ವಿಮಾನ ಸೇವೆಗೆ ಹಸಿರು ನಿಶಾನೆ

ಸರಕಾರದಿಂದ ಸಬ್ಸಿಡಿ ಘೋಷಣೆ ಉತ್ತಮ ನಿರ್ಧಾರ: ಡಾ.ಪೆರ್ಲ

ಕಲಬುರಗಿ : ಬೆಂಗಳೂರಿನಿಂದ ಬೀದರ್ ಮತ್ತು ಕಲಬುರಗಿಗೆ ವಿಮಾನ ಸೇವೆ ಅಬಾಧಿತವಾಗಿ ಮುಂದುವರಿಸಲು ರಾಜ್ಯ ಸರ್ಕಾರ ಒಟ್ಟು ಯೋಜನಾ ವೆಚ್ಚ 28.47 ಕೋಟಿ ರೂ. ಸಬ್ಸಿಡಿ ನೀಡಲು ನಿರ್ಧರಿಸಿರುವುದು ಸ್ವಾಗತಾರ್ಹ ಎಂದು ದಕ್ಷಿಣ ಕನ್ನಡ ಸಂಘದ ಮಾಜಿ ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಹೇಳಿದ್ದಾರೆ.

     ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಏ. 30 ರಂದು ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಒಟ್ಟು ಯೋಜನಾ ವೆಚ್ಚದಡಿ ವಿಮಾನಸೇವೆ ಪುನರಾರಂಭಿಸಲು (ವಿಜಿಎಫ್) 28.47 ಕೋಟಿ. ರೂ. ಸಬ್ಸಿಡಿ ಘೋಷಿಸಿದೆ ಬೀದರ್ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ವಿಮಾನ ಸೇವೆ ಒದಗಿಸಲು ಅನುದಾನವನ್ನು 80:20 ಅನುಪಾತದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿ ಅನುಮೋದನೆ ನೀಡಿದೆ.

     ಬೆಂಗಳೂರು- ಬೀದರ್- ಬೆಂಗಳೂರು, ಹಾಗೂ ಬೆಂಗಳೂರು- ಕಲಬುರಗಿ -ಬೆಂಗಳೂರು ಮಾರ್ಗಗಳಲ್ಲಿ ವಿಮಾನಯಾನ ಕಾರ್ಯಾಚರಣೆ ಕಾಯ್ದೆ 1999 ಕಲಂ 4 (ಜಿ ) ಅಡಿಯಲ್ಲಿ ವಿನಾಯಿತಿ ಪಡೆದ ನಂತರ ಕೆ ಎಸ್ ಐ ಐ ಡಿ ಸಿ ನಿಗಮವು ಗೋದಾವತ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ (ಸ್ಟಾರ್ ಏರ್ ಲೈನ್ಸ್) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸಂಪುಟ ಸಭೆಯಲ್ಲಿ ಅನುದಾನ ನೀಡಿ ವಿಮಾನ ಸೇವೆ ಆರಂಭಕ್ಕೆ ಒಪ್ಪಿಗೆ ಸೂಚಿಸಿದೆ. 

     ಈ ಮಾರ್ಗ ನಡುವೆ ನಿಯಮಿತವಾಗಿ ವಿಮಾನ ಸಂಚಾರ ಪುನರಾರಂಭಿಸಿ ಪ್ರಯಾಣ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡಿ ಹೂಡಿಕೆ ಆಕರ್ಷಣೆಗೆ ಪ್ರೋತ್ಸಾಹಿಸಿ ವೃತ್ತಿಪರರು ಮತ್ತು ಅಧಿಕಾರಿಗಳ ತ್ವರಿತ ಪ್ರಯಾಣ ಸಾಧ್ಯತೆ ಹೆಚ್ಚಿಸಿ ಕಲ್ಯಾಣ ಕರ್ನಾಟಕ ಭಾಗದ ಸಂಪರ್ಕ ವ್ಯಾಪಾರ ಉದ್ಯಮ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರಕಾರದ ಕ್ರಮವು ಶ್ಲಾಘನೀಯವಾದುದು. ಬೆಂಗಳೂರಿನಿಂದ ಬೀದರ್ ಕಲಬುರಗಿಗೆ ಕನಿಷ್ಠ 12 ತಾಸುಗಳು ಪ್ರಯಾಣ ಅವಧಿ ಇದ್ದು ವಿಮಾನಸೇವೆ ಆರಂಭದೊಂದಿಗೆ ಸಮಯದ ಉಳಿತಾಯದ ಜೊತೆಗೆ ಪ್ರವಾಸಿಗರು ಉದ್ಯಮಿಗಳು ವಿದ್ಯಾರ್ಥಿಗಳು ಸರಕಾರಿ ಅಧಿಕಾರಿಗಳಿಗೆ ಸುಲಭ ಸಂಚಾರ ವಾತಾವರಣ ನಿರ್ಮಾಣಗೊಳ್ಳುತ್ತದೆ. ಇದರಿಂದ ಈ ಭಾಗದ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆರ್ಥಿಕ ಒಳಗೊಳ್ಳುವಿಕೆ ಮತ್ತು ರಾಜಧಾನಿ ಹಾಗೂ ಅಂತರ್ಜಿಲ್ಲಾ ಸಂಪರ್ಕ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎಂದು ಡಾ.ಪೆರ್ಲ ಅಭಿಪ್ರಾಯಪಟ್ಟಿದ್ದಾರೆ.

*ಮಂಗಳೂರು, ಮುಂಬೈಗೆ ಹೆಚ್ಚಿದ ಒತ್ತಡ*

  ಕಲಬುರಗಿಯಿಂದ ಮಂಗಳೂರು ಮುಂಬೈ ದೆಹಲಿ ತಿರುಪತಿ ಮುಂತಾದಡೆಗಳಿಗೆ ವಿಮಾನ ಸಂಚಾರ ಪ್ರಾರಂಭಿಸುವಂತೆ ಪ್ರಯಾಣಿಕರು ತೀವ್ರ ಒತ್ತಡ ಹೇರುತ್ತಿದ್ದಾರೆ. ಈ ಮಾರ್ಗಗಳಲ್ಲಿ ವಿಮಾನ ಸಂಚಾರ ಆರಂಭಗೊಂಡರೆ ಅಂತರಾಜ್ಯ ಮಟ್ಟದಲ್ಲಿ ಸಂಪರ್ಕ ಸಾಧಿಸಲು ಹಾಗೂ ಅಭಿವೃದ್ಧಿ ಹೊಂದಲು ಉತ್ತಮ ಅವಕಾಶಗಳಿವೆ ಎಂದು ಡಾ. ತಿಳಿಸಿದ್ದಾರೆ