ಬಿಸಿಲ ಧಗೆಗೆ ತಂಪೆರೆದ ಕಾವ್ಯ ಝರಿ ಅಷ್ಟ ಕವಿಗಳ ಸಂಗಮದ ಬಿಸಿಲ ಉಸಿರು - ಕಾವ್ಯ ನೀರು ಕವಿಗೋಷ್ಠಿ

ಬಿಸಿಲ ಧಗೆಗೆ ತಂಪೆರೆದ ಕಾವ್ಯ ಝರಿ ಅಷ್ಟ ಕವಿಗಳ ಸಂಗಮದ ಬಿಸಿಲ ಉಸಿರು - ಕಾವ್ಯ ನೀರು ಕವಿಗೋಷ್ಠಿ

ಬಿಸಿಲ ಧಗೆಗೆ ತಂಪೆರೆದ ಕಾವ್ಯ ಝರಿ

ಅಷ್ಟ ಕವಿಗಳ ಸಂಗಮದ ಬಿಸಿಲ ಉಸಿರು - ಕಾವ್ಯ ನೀರು ಕವಿಗೋಷ್ಠಿ

ಕಲಬುರಗಿ: ಬಿಸಿಲ ಬೇಗೆಯ ಬದುಕು ಕಟ್ಟಿಕೊಂಡವರ ನೋವಿಗೆ ಸ್ಪಂದಿಸಿದ "ಬಿಸಿಲ ಉಸಿರು ಕಾವ್ಯದ ನೀರು" ಕವಿಮನವು ಜಾಗೃತಿಯ ದೀಪ ಹಚ್ಚಿದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥ ಡಾ.ಸದಾನಂದ ಪೆರ್ಲ ಹೇಳಿದರು.

 ಇಂದಿನ ಗೋಷ್ಠಿ ಬಿಸಿಲ ಧಗೆಗೆ ಕಾವ್ಯದ ಝರಿ ನಿಜಕ್ಕೂ ತೆಂಪೆರದಂತಾಗಿದೆ. ಇಂದು ಪ್ರಕೃತಿಯ ತಾಪಮಾನ ಏರಿಕೆ, ಅದರಿಂದ ಪರಿಸರಕ್ಕೆ ಉಂಟಾಗುವ ಹಾನಿ, ನವ ನಾಗರಿಕತೆ ಮತ್ತು ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಮೇಲಿನ ಶೋಷಣೆಗೆ ಅಷ್ಟ ಕವಿಗಳ ಸಂಗಮದ ಕವಿ ಭಾವನೆಗಳ ಮೂಲಕ ಕಾವ್ಯ ಕಟ್ಟಿಕೊಟ್ಟ ಬಗೆ ಅತ್ಯಂತ ವಿಶಿಷ್ಟವಾಗಿತ್ತು ಮತ್ತು ಕವಿಯ ಮನೋಧರ್ಮ ಕಟ್ಟಿಕೊಡುವ ಪ್ರಯತ್ನ ಕೂಡ ನೆರವೇರಿದೆ. ಕವಿಯು ಸಾಮಾಜಿಕ ಜವಾಬ್ದಾರಿ ಹೊತ್ತು ಉತ್ತರದಾಯಿತ್ವದಿಂದ ಒಬ್ಬ ರಾಯಭಾರಿಯಾಗಿ ಕೆಲಸ ಮಾಡುವ ಹೊಣೆಗಾರಿಕೆಯ ಎಚ್ಚರಿಕೆಯಿಂದ ಮೂಡಿ ಬಂದ ಕವಿತೆಗಳು ಬಿಸಿಲ ಧಗೆಗೆ ಜಾಗೃತಿಯ ದೀಪ ಹಚ್ಚಿದ ಕವನಗಳು ಬಿಸಿಲ ಉಸಿರಿಗೆ ಕಾವ್ಯ ಗಂಗೆಯಾಗಿ ಹರಿದು ಸಹೃದಯರ ಮನ ಗೆದ್ದವು ಎಂದರು.

ಈ ಕವಿಗೋಷ್ಠಿಯಲ್ಲಿ ವೆಂಕಟೇಶ ಜನಾದ್ರಿ, ಶಾಂತಾ ಪಸ್ತಾಪೂರ, ವಿಜಯಕುಮಾರ ಪಾಟೀಲ, ಮೋಹನ ಕಟ್ಟಿಮನಿ, ಅನುಪಮಾ ಅಪಗುಂಡೆ, ಅಮೃತ ದೊಡ್ಡಮನಿ, ಡಾ.ಶೀಲಾದೇವಿ ಬಿರಾದಾರ, ಜಗದೇವಿ ಕೊಳಕುಂದಾ ಅವರು ಕವನ ವಾಚನ ಮಾಡಿದರು.ಕವಿಗಳ ಕವಿತಾ ವಾಚನ ನಂತರ ಕವಿತೆಯ ವಿಮರ್ಶೆಯೊಂದಿಗೆ ಅತ್ಯಂತ ವಿನೂತನವಾಗಿ ಸಾದರಪಡಿಸಿದ 

   ಆರೋಗ್ಯ ಇಲಾಖೆಯ ಡಾ. ಸಂಧ್ಯಾ ಕಾನೇಕರ,ಸಾಮಾಜಿಕ ಹೋರಾಟಗಾರಮಂಜುನಾಥ್ ನಾಲವಾರಕರ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಆಶಯ ನುಡಿ ವ್ಯಕ್ತಪಡಿಸಿದರು. ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್. ಧನ್ನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂಧಿ, ಸೈಯ್ಯದ ನಜಿರುದ್ದೀನ್ ಮುತ್ತಾವಲಿ, ಧರ್ಮರಾಜ ಜವಳಿ ಮತ್ತಿತರಿದ್ದರು.

    ನಂತರ ಪಿಯುಸಿ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಪ್ರತಿಶತ ಅಂಕ ಪಡೆದ ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.