ಪಂಚಾಕ್ಷರ ಘರಾನಾ ಸಾಂಸ್ಕೃತಿಕೋತ್ಸವ ಸಂಗೀತ ಜೀವನದ ಅವಿಭಾಜ್ಯ ಅಂಗ ಜಗನ್ನಾಥ ಶೇರಿಕಾರ ಅಭಿಮತ
ಪಂಚಾಕ್ಷರ ಘರಾನಾ ಸಾಂಸ್ಕೃತಿಕೋತ್ಸವ
ಸಂಗೀತ ಜೀವನದ ಅವಿಭಾಜ್ಯ ಅಂಗ ಜಗನ್ನಾಥ ಶೇರಿಕಾರ ಅಭಿಮತ
ಕಾಳಗಿ: ಸಂಗೀತ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಜೀವನದ ಕಷ್ಟ ಸುಖಗಳಲ್ಲಿ ಸಂಗೀತಕ್ಕೆ ವಿಶೇಷ ಮಹತ್ವವಿದೆ. ಅಂತೆಯೇ ಪ್ರತಿಯೊಬ್ಬರು ಸಂಗೀತ ಆರಾಧಿಸುವುದು ಕಾಣುತ್ತೇವೆ. ಸಂಗೀತವಿಲ್ಲದ ಜೀವನ ನಿರ್ಥಕವಾಗಿದೆ. ಇಂದಿನ ದಿನಗಳಲ್ಲಿ ಒತ್ತಡ ರಹಿತ ಜೀವನಕ್ಕೆ ಸಂಗೀತ ದಿವ್ಯೌಷಧವಾಗಿದೆ ಎಂದು ಪತ್ರಕರ್ತ ಜಗನ್ನಾಥ ಶೇರಿಕಾರ ತಿಳಿಸಿದರು.
ಅವರು ತಾಲ್ಲೂಕಿನ ಕೋಡ್ಲಿಯ ರೇವಣಸಿದ್ದೇಶ್ವರ ಹಿರೇಮಠದಲ್ಲಿ ಚಿಂಚೋಳಿಯ ಶ್ರೀ ಗಾನಯೋಗಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಸೇವಾ ಸಂಘ ಹಾಗೂ ಪಂಚಾಕ್ಷರ ಘರಾನಾ ಸಾಂಸ್ಕೃತಿಕೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಎಂದರು.
ಭಾರತೀಯ ಶಾಸ್ತಿçÃಯ ಸಂಗೀತದಲ್ಲಿ 11 ಪ್ರಮುಖ ಘರಾನಾಗಳನ್ನು ಗುರುತಿಸಲಾಗಿದೆ. ಇವುಗಳಲ್ಲೆಲ್ಲವೂ ಉತ್ತರ ಭಾರತದ ನಗರಗಳ ಹೆಸರುಗಳಿಂದ ಕರೆಯಲಾಗುತ್ತಿದೆ. ಘರಾನಾ ಎಂಬುದು ಗುರು ಶಿಷ್ಯ ಪರಂಪರೆಯ ವಿಶಿಷ್ಟ ಸಂಗೀತ ಶೈಲಿಯಾಗಿದೆ
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ ಉದ್ಘಾಟಿಸಿದರು.
ಸಮಾರಂಭದಲ್ಲಿ ಗದಗನ ವಿದ್ವಾನ್ ಸುರೇಶ ಎಸ್ ಮಂಗಳೂರು ಮತ್ತು ಗದಗನ ಕುಮಾರೇಶ್ವರ ಕೃಪಾಪೋಷಿತ ಪಂಚಾಕ್ಷರಿ ಗವಾಯಿಗಳ ಸಂಗೀತ ಪಾಠ ಶಾಲೆಯ ಶಿಕ್ಷಕ ರಾವುತಪ್ಪ ಎಂ. ಹೂಗಾರ ಅವರಿಗೆ ವಿಶ್ವಗಾನ ಉಭಯ ರತ್ನ ಪ್ರಶಸ್ತಿಯನ್ನು ಸಾನಿಧ್ಯ ವಹಿಸಿದ್ದ ಬಸವಲಿಂಗ ಹಿರೇಮಠ ಬಸವಲಿಂಗ ಹಿರೇಮಠ ಪ್ರದಾನಮಾಡಿದರು. ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ, ವಚನ ಕಂಠಪಾಠ ಸ್ಪರ್ಧೆ ವಿಜೇತ ಜಗದೀಶ ಮರಪಳ್ಳಿ, ರೇಣುಕಾಚಾರ್ಯ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಸಂಗಯ್ಯಸ್ವಾಮಿ ಅಣವಾರ, ಕಸಾಪ ಅಧ್ಯಕ್ಷ ಸುರೇಶ ದೇಶಪಾಂಡೆ, ಪಿಕೆಪಿಎಸ್ ಅಧ್ಯಕ್ಷ ಅಣ್ಣಾರಾವ್ ಪೆದ್ದಿ, ಮಲ್ಲಿಕಾರ್ಜುನ ಸಪೈಗೋಳ್ ಮೊದಲಾದವರು ಇದ್ದರು.
ಸಂಗೀತ ಕಲಾವಿದರಾದ ಬಳೂಟಗಿಯ ಸಿದ್ದೇಶ್ವರ ಶಾಸ್ತಿçÃಗಳು, ಸುರೇಶ ಎಸ್ ಮಂಗಳೂರು, ಪುಷ್ಪಲತಾ ಹಿರೇಮಠ, ಮಡಿವಾಳಯ್ಯ ಸಾಲಿ, ರೇವಣಸಿದ್ದಯ್ಯ ಹಿರೇಮಠ, ದಯಾನಂದ ಹಿರೇಮಠ, ಶಿವರಾಜ ಮುರುಡಾ, ಗಣಪತರಾವ್ ಸಿಂಗಶೆಟ್ಟಿ, ಮಲ್ಲಿಕಾರ್ಜುನ ದೇವಗಿರಿ, ಸಿದ್ದಲಿಂಗಯ್ಯ ಎಚ್‌ಬಿಎಲ್ ತಂಡ, ಗುರುಕುಮಾರ ಹಿರೇಮಠ, ಗದಗನ ಪಂಚಾಕ್ಷರಿ, ಶಾಂತವೀರ ಗುಂಡಪ್ಪ ಶಿವಯೋಗಿ ಅವರು ಸೇರಿದಂತೆ ವಿವಿಧ ಕಲಾ ತಂಡಗಳಿAದ ಸಂಗೀತ ಸುಧೇ ಹರಿಸಲಾಯಿತು. ಕಾರ್ಯಕ್ರಮದಲ್ಲಿ ವಿಜಯಲಕ್ಷಿö್ಮà ಬಸವರಾಜ ಸುಲೇಪೇಟ ಮಂಗಳಾ ಮಲ್ಲಿಕಾರ್ಜುನ ಕನ್ನಡಗಿ ಅವರಿಂದ ಭಜನೆ ನಡೆಸಲಾಯಿತು.
ಶರಣಸಾಹಿತ್ಯ ಪರಿಷತ್ ಅಧ್ಯಕ್ಷ ಬಸವರಾಜ ಐನೋಳ್ಳಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಪುಷ್ಪಲತಾ ಹಿರೇಮಠ ನಿರೂಪಿಸಿದರು. ಸಿದ್ದಲಿಂಗೇಶ್ ಆರ್ ಎಚ್ ವಂದಿಸಿದರು.
