ವಿಧ್ಯಾರ್ಥಿಗಳ ಅಭಿವೃದ್ಧಿಗೆ ಸದಾ ಸಿದ್ಧನಿದ್ದೇನೆ : ಶಾಸಕ ಅಲ್ಲಮಪ್ರಭು ಪಾಟೀಲ
ವಿಧ್ಯಾರ್ಥಿಗಳ ಅಭಿವೃದ್ಧಿಗೆ ಸದಾ ಸಿದ್ಧನಿದ್ದೇನೆ : ಶಾಸಕ ಅಲ್ಲಮಪ್ರಭು ಪಾಟೀಲ
ಕಲಬುರಗಿ ; ನಗರದ ಪಿ.ಜಿ. ಬಿಲ್ಡಿಂಗ್ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರದ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ೨೦೨೫-೨೬ನೇ ಶೈಕ್ಷಣಿಕ ಸಾಲಿನ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಕಾರ್ಯಕ್ರಮ ಹಾಗೂ ವಿವಿಧ ಘಟಕಗಳ ಸಮಾರೋಪ ಸಮಾರಂಭವನ್ನು ಗಣ್ಯರು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ದಕ್ಷಿಣ ಮತ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಅವರು ಈ ಮಹಾವಿದ್ಯಾಲಯದ ವಿಧ್ಯಾರ್ಥಿಗಳ ಅಭಿವೃದ್ಧಿಗೆ ಸದಾ ಸಿದ್ಧನಿದ್ದೇನೆ ಮತ್ತು ವಿಧ್ಯಾರ್ಥಿಗಳು ಕಷ್ಟ ಪಟ್ಟು ಅಧ್ಯಯನ ಮಾಡಿ ಜೀವನದಲ್ಲಿ ಮುಂದೆ ಬರಲು ಕರೆ ನೀಡಿದರು.
ಕರ್ನಾಟಕ ಜನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ್ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಬೇಕೆಂದು ಕರೆ ನೀಡಿದರು. ಶಿಕ್ಷಣವು ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾಗಿದ್ದು, ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಮಹಾವಿದ್ಯಾಲಯ (ಸ್ವಾಯತ್ತ)ದ ಪ್ರಾಂಶುಪಾಲರಾದ ಡಾ. ಸವಿತಾ ತಿವಾರಿ ವಹಿಸಿ, ಅಂತಿಮ ವರ್ಷದ ವಿದ್ಯಾರ್ಥಿಗಳ ಮುಂದಿನ ಜೀವನ ಪಯಣ ಯಶಸ್ವಿಯಾಗಲಿ ಎಂದು ಹಾರೈಸಿದರು. ಕಾಲೇಜಿನ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳ ಸಕ್ರಿಯ ಭಾಗವಹಿಸುವಿಕೆ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ವಿಜಯಕುಮಾರ ಕಟ್ಟಿಮನಿ, ಚಂದ್ರಿಕಾ ಪರಮೇಶ್ವರ, ಹಾಗೂ ಡಾ. ಟಿ. ವ್ಹಿ ಅಡಿವೇಶ, ಡಾ. ಮಲ್ಲೇಶಪ್ಪ ಎಸ್. ಕುಂಬಾರ, ಡಾ. ವಿಜಯಕುಮಾರ ಸಾಲಿಮನಿ, ಡಾ. ರಾಜಕುಮಾರ ಸಲಗರ, ಡಾ. ದವಲಪ್ಪ ಬಿ. ಹೆಚ್., ಡಾ. ರವೀಂದ್ರಕುಮಾರ ಭಂಡಾರಿ, ಡಾ. ಲಕ್ಷ್ಮಣ ಭೋಸ್ಲೆ, ಡಾ. ಶ್ರೀಮಂತ ಹೋಳ್ಳರ್, ಡಾ. ಬಸಂತ ಸಾಗರ, ಅಜಯಸಿಂಗ್ ತಿವಾರಿ, ವಿಜಯಲಕ್ಷ್ಮಿ ಬಿ, ಶಿವಾನಂದ ಸ್ವಾಮಿ, ಡಾ. ಬಲಭೀಮ ಸಾಂಗ್ಲಿ, ಡಾ. ರಮೇಶ ಪೋತೆ, ಡಾ. ಬೆಣ್ಣೂರ ವಿಶ್ವನಾಥ, ಡಾ. ಶಿವಲಿಂಗಪ್ಪ ಪಾಟೀಲ, ಡಾ. ಮೀನಾಕ್ಷಿ ಹುಗ್ಗಿ, ಡಾ. ರವಿ ಬೌದ್ದೆ, ಡಾ. ಶಂಕರ ರಾಠೋಡ, ಡಾ. ನಶೀಮ ಫಾತಿಮಾ, ಶ್ರೀಮತಿ ಶ್ರೀದೇವಿ ರಾಠೋಡ, ಡಾ. ಸಾಧಿಕ ಪಾಶಾ, ಡಾ. ಶ್ಯಾಮಲಾ ಸ್ವಾಮಿ, ಡಾ. ಆಜರಾ ಪರವೀನ್, ಡಾ. ಅಮಿತ್ ಕುಮಾರ, ಡಾ. ರಾಬಿಯಾ ಇಫತ್, ಡಾ. ವಿಜಯಕುಮಾರ ಗೋಪಾಳೆ, ಡಾ. ಚಂದ್ರಕಾಂತ ಜಮಾದಾರ, ಡಾ. ಮಹಾಂತೇಶ ಸ್ವಾಮಿ, ಡಾ.ನಾಗಪ್ಪ ಗೋಗಿ, ಡಾ. ಪಂಚಾಕ್ಷರಿ ಸೇರಿದಂತೆ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಇದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ರೆಡ್ ಕ್ರಾಸ್, ರೆಡ್ ರಿಬ್ಬನ್, ಸ್ಕೌಟ್ಸ್ ಮತ್ತು ಗೈಡ್ಸ್, ಡಾ. ಬಿ.ಆರ್. ಅಂಬೇಡ್ಕರ್ ವಿಚಾರ ವೇದಿಕೆ ಸೇರಿದಂತೆ ವಿವಿಧ ಘಟಕಗಳ ವಾರ್ಷಿಕ ಚಟುವಟಿಕೆಗಳ ಸಮಾರೋಪವೂ ನೆರವೇರಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಖ್ಯಾತ ಗಾಯಕ ಸಿದ್ದಾರ್ಥ ಚಿಮ್ಮದಲಾಯಿ ಅವರು ಡಾ. ಬಿ.ಆರ್. ಅಂಬೇಡ್ಕರ್ ಕುರಿತ ಗೀತ ಗಾಯನವನ್ನು ಪ್ರಸ್ತುತಪಡಿಸಿ ಸಭಿಕರ ಮನಗೆದ್ದರು.
ಪ್ರಾಧ್ಯಾಪಕರು, ಅತಿಥಿ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳ ಸಕ್ರಿಯ ಸಹಭಾಗಿತ್ವದೊಂದಿಗೆ ನಡೆದ ಈ ಸಮಾರಂಭವು ವಿದ್ಯಾರ್ಥಿಗಳ ಭವಿಷ್ಯದ ಪಯಣಕ್ಕೆ ಶುಭಕೋರಿ ಸ್ಮರಣೀಯ ಕ್ಷಣವಾಗಿ ಮೂಡಿಬಂದಿತು.
ಸ್ವಾಗತ ಭಾಷಣ ಡಾ.ರಾಜಕುಮಾರ್ ಸಲಗರ ಮಾಡಿದರು, ಪ್ರಾಸ್ತಾವಿಕ ನುಡಿ ಡಾ.ಶ್ರೀಮಂತ ಹೋಳ್ಕರ್ ನಡೆಸಿಕೊಟ್ಟರು, ಮತ್ತು ಅಥಿತಿ ಪರಿಚಯ ಡಾ.ರವೀಂದ್ರಕುಮಾರ್ ಭಂಡಾರಿ ಮಾಡಿದರು ವಂದನಾರ್ಪಣೆ ಡಾ.ರಮೇಶ್ ಪೋತೆ ನಡೆಸಿಕೊಟ್ಟರು. ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಡಾ. ಬಲ ಭೀಮ್ ಸಾಂಗ್ಲಿ ನಿರೂಪಿಸಿದರು.
