ಧರ್ಮ ಪೀಠಗಳ ಸ್ಥಾಪಕ ಆದಿ ಶಂಕರಾಚಾರ್ಯರ-ಶ್ಯಾಮಸುಂದರ ಜೋಶಿ
ಧರ್ಮ ಪೀಠಗಳ ಸ್ಥಾಪಕ ಆದಿ ಶಂಕರಾಚಾರ್ಯರ-ಶ್ಯಾಮಸುಂದರ ಜೋಶಿ
ಆದಿ ಶಂಕರಾಚಾರ್ಯರ ಜಯಂತಿ ಆಚರಣೆ – ಧರ್ಮ ಪೀಠಗಳ ಮಹತ್ವದ ಕುರಿತು ಉಪನ್ಯಾಸ
ಕಲಬುರಗಿ, ಏಪ್ರಿಲ್ 22:ವಿದ್ಯಾನಗರದ ನಿವೃತ್ತ ಪ್ರಾಧ್ಯಾಪಕ ಕಮಲಾಕರ ಸಂಗೋಳಗಿ ಅವರ ನಿವಾಸದಲ್ಲಿ ಬಾಪುಗೌಡ ದರ್ಶನಾಪೂರ ಶಿಕ್ಷಣ ಹಾಗೂ ವೆಲ್‌ಫೇರ್ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಆದಿ ಶಂಕರಾಚಾರ್ಯರು ಅವರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.
ಸಂಸ್ಥೆ ಕಾರ್ಯದರ್ಶಿ ಶ್ಯಾಮಸುಂದರ ಜೋಷಿ ಮಾತನಾಡಿ, ೮ನೇ ಶತಮಾನದಲ್ಲಿಯೇ ಅಲ್ಪವಯಸ್ಸಿನಲ್ಲಿ ಅದ್ವೈತ ತತ್ವದ ಅಧ್ಯಯನ ಆರಂಭಿಸಿದ ಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಧರ್ಮ ಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮವನ್ನು ಉಳಿಸಿ ಬೆಳೆಸಿದ ಮಹಾನ್ ತತ್ವಜ್ಞರಾಗಿದ್ದಾರೆ ಎಂದು ಹೇಳಿದರು.
ಪೂರ್ವದಲ್ಲಿ ಪುರಿ ಗೋವರ್ಧನ ಪೀಠ, ಪಶ್ಚಿಮದಲ್ಲಿ ಶಾರದಾ ಪೀಠ, ಉತ್ತರದಲ್ಲಿ ಬದರಿನಾಥ ಪೀಠ ಹಾಗೂ ದಕ್ಷಿಣದಲ್ಲಿ ಶೃಂಗೇರಿ ಪೀಠಗಳನ್ನು ಸ್ಥಾಪಿಸುವ ಮೂಲಕ ಜನಸಾಮಾನ್ಯರಿಗೆ ಅದ್ವೈತ ತತ್ವವನ್ನು ಪರಿಚಯಿಸಿದ ಅವರ ಕೊಡುಗೆ ಅಪಾರವೆಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಟೆಂಗಳಿ ಅಂಡಗಿ ಪ್ರತಿಷ್ಠಾನದ ಅಧ್ಯಕ್ಷ ಶಿವರಾಜ ಅಂಡಗಿ ಹಾಗೂ ಸಂಚಾಲಕ ವಿನೋದಕುಮಾರ ಜನೇವರಿ ಅವರು ಆದಿ ಶಂಕರಾಚಾರ್ಯರ ಭಾವಚಿತ್ರವನ್ನು ನೀಡಿ ಶುಭಾಶಯ ಕೋರಿದರು. ಕುಟುಂಬ ಸದಸ್ಯರು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಹೂಮಾಲೆ ಹಾಕಿ ಜಯಂತಿಯನ್ನು ಆಚರಿಸಿದರು.
ಕಾರ್ಯಕ್ರಮದಲ್ಲಿ ಕಮಲಾಕರ ಸಂಗೋಳಗಿ, ಲಲಿತಾ ಸಂಗೋಳಗಿ, ಮಲ್ಲಮ್ಮ ಭದ್ರಶೆಟ್ಟಿ, ಮಹಾನಂದ ಯಂಕಂಚಿ, ಅಂತಪ್ಪ ಪಾಟೀಲ (ಶಹಾಪೂರ), ಜಯಶೀಲಾ ಶಹಾಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
