ಐತಿಹಾಸಿಕ ಮನೆತನದ ಹೆಸರಿನಿಂದ ಪ್ರಾರಂಭವಾದ ರಾಷ್ಟ್ರಕೂಟ ಸಹಕಾರಿ ಸೌಹಾರ್ದ ಸಂಸ್ಥೆಯ ಕೀರ್ತಿ ಉತ್ತುಂಗಕ್ಕೇರಲಿ-ಅಲ್ಲಮಪ್ರಭು ಪಾಟೀಲ
ಐತಿಹಾಸಿಕ ಮನೆತನದ ಹೆಸರಿನಿಂದ ಪ್ರಾರಂಭವಾದ ರಾಷ್ಟ್ರಕೂಟ ಸಹಕಾರಿ ಸೌಹಾರ್ದ ಸಂಸ್ಥೆಯ ಕೀರ್ತಿ ಉತ್ತುಂಗಕ್ಕೇರಲಿ-ಅಲ್ಲಮಪ್ರಭು ಪಾಟೀಲ
ಕಲಬುರ್ಗಿಏ 25: ಕನ್ನಡದ ಇತಿಹಾಸದಲ್ಲಿ ರಾಷ್ಟ್ರಕೂಟ ಸಾಮ್ರಾಜ್ಯವು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಅಧ್ಯಾಯವಾಗಿದೆ. ಬಾದಾಮಿ ಚಾಲುಕ್ಯರ ನಂತರ ಕರ್ನಾಟಕದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದು, ಭಾರತದಾದ್ಯಂತ ತಮ್ಮ ತಮ್ಮ ಸಾಮ್ರಾಜ್ಯ ವಿಸ್ತರಿಸಿದ ಕೀರ್ತಿ ರಾಷ್ಟ್ರಕೂಟರಿಗೆ ಸಲ್ಲುತ್ತದೆ
ಇಂತಹ ಐತಿಹಾಸಿಕ ಮನೆತನದ ಹೆಸರಿಟ್ಟುಕೊಂಡಿರುವ ಈ ಸಹಕಾರಿ ಸೌಹಾರ್ದ ಸಂಸ್ಥೆಯ ಕೀರ್ತಿ ಉತ್ತುಂಗಕ್ಕೆ ಎರಲಿ ಎಂದು ಕಲಬುರ್ಗಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಲ್ಲಮಪ್ರಭು ಪಾಟೀಲ ಹೇಳಿದರು ಅವರು
ನಗರದ ವೆಂಕಟಗೀರಿ ಕಲ್ಯಾಣ ಮಂಟಪದಲ್ಲಿ ನಡೆದ ರಾಷ್ಟ್ರಕೂಟ ಪರಿವಾರ ಸೌಹಾರ್ದ ಸಂಘ ನಿಯಮಿತ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಿಗದಿಯಂತೆ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರಾದ ಮಾನ್ಯ ಶರಣಬಸಪ್ಪ ದರ್ಶನಾಪೂರ ಉದ್ಘಾಟಿಸ ಬೇಕಾಗಿತ್ತು ಆದರೆ ಅವರು ಸಂಘದ ಕಚೇರಿ ಉದ್ಘಾಟಿಸಿ ತುರ್ತು ಕಾರ್ಯಕ್ರಮದ ನಿಮಿತ್ತ ತೆರಳಿದ್ದರು.
500 ಸದಸ್ಯರಿಂದ ಸುಮಾರು 30 ಲಕ್ಷ ಶೇರು ಬಂಡವಾಳ ಸಂಗ್ರಹಿಸಿ ಮುಂದೆ 2 ಕೋಟಿ ರೂಗಳ ಸಂಗ್ರಹದ ಗುರಿ ಇಟ್ಟುಕೊಂಡಿರುವ ಈ ಹಣಕಾಸು ಸಂಸ್ಥೆ ಸಮಾಜದ ಬಡ, ಮಧ್ಯಮ ಜನತೆಗೆ ಸಹಾಯ ಮಾಡುವಂತಾಗಲಿ ಎಂದು ಹೇಳಿದರು.
ಸಹಕಾರ ಸಂಸ್ಥೆಯಿಂದ ಸಾಲ ಪಡೆದುಕೊಂಡಿರುವ ಷೇರುದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಸಂಸ್ಥೆಯನ್ನು ಸದೃಢ ಗೊಳಿಸಬೇಕೆಂದು ಕರೆ ನೀಡಿದರು
ನಂತರ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ ನಮೋಶಿ ಸಹಕಾರ ಸಂಘಗಳು "ಒಬ್ಬರಿಗಾಗಿ ಎಲ್ಲರೂ, ಎಲ್ಲರಿಗಾಗಿ ಒಬ್ಬರು" ಎಂಬ ತತ್ವದೊಂದಿಗೆ ಸಮಾಜದ ಸಮಗ್ರ ಅಭಿವೃದ್ಧಿಗೆ ಕೊಡುಗೆ ನೀಡುತ್ತವೆ ಎಂದು ಹೇಳಿದರು ನಮ್ಮ ಭಾಗದಲ್ಲಿಯು ಸಹಕಾರಿ ಸಂಘಗಳು ಹೆಚ್ಚೇಚ್ಚು ಬೆಳೆಯಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಿದ್ರಾಮರೆಡ್ಡಿ ಬಲ್ಕಲ್ ವಹಿಸಿಕೊಂಡಿದ್ದರು
ವೇದಿಕೆಯ ಮೇಲೆ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಬಸವರಾಜ ಪಾಟೀಲ ನರಿಬೋಳ, ತೊಗರಿ ಮಂಡಳಿ ಮಾಜಿ ಅಧ್ಯಕ್ಷರಾದ ಭಾಗನಗೌಡ ಸಂಕನೂರ, ಸಂಸ್ಥೆಯ ಉಪಾದ್ಯಾಕ್ಷರಾದ ಮಹಿಪಾಲ ರೆಡ್ಡಿ ಇಟಗಿ ನಿರ್ದೇಶಕರಾದ ಪ್ರಫುಲ್ ನಮೋಶಿ ,ಡಾ ಶರಣಬಸಪ್ಪ ಕಾಮರೆಡ್ಡಿ,ಪಂಪಣ್ಣ ಗೌಡ ಇಟಗಿ, ಸಿದ್ರಾಮ ಪಾಟೀಲ, ವಿಶ್ವನಾಥರೆಡ್ಡಿ ಮಲ್ಲಾಬಾದಿ, ರವಿಂದ್ರ ಮಾಲಿಪಾಟೀಲ, ಶಿವಾರೆಡ್ಡಿ , ಮುಂತಾದ ನಿರ್ದೆಶಕರು ಉಪಸ್ಥಿತರಿದ್ದರು, ಸಿದ್ರಾಮ ಪಾಟೀಲ ಸ್ವಾಗತಿಸಿದರು ಶ್ವೇತಾ ಇಟಗಿ ಕಾರ್ಯಕ್ರಮ ನಿರೂಪಿಸಿದರು, ಶ್ರೀಲಕ್ಷ್ಮೀ ದೇಶಪಾಂಡೆ ಪ್ರಾರ್ಥಸಿದರು
