ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿಗಳ ಬಳಗದಿಂದ ಉಚಿತ ಶ್ರವಣ ಸಾಧನ ವಿತರಣೆ
ಸಚಿವ ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿಗಳ ಬಳಗದಿಂದ ಉಚಿತ ಶ್ರವಣ ಸಾಧನ ವಿತರಣೆ
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಜನ್ಮ ದಿನದ ಪ್ರಯುಕ್ತ ವಿತರಣೆ | 24 ಜನರಿಗೆ ಶ್ರವಣ ಸಾಧನ ಅಳವಡಿಕೆ
ಸೇಡಂ: ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ 59ನೇ ಜನ್ಮ ದಿನದ ಪ್ರಯುಕ್ತ ಸಚಿವರ ಅಭಿಮಾನಿ ಬಳಗವು ಶ್ರವಣ ತೊಂದರೆಯಿರುವವರಿಗೆ ಉಚಿತ ಶ್ರವಣ ಸಾಧನ ವಿತರಣೆ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಏಪ್ರಿಲ್ 20 ರಂದು ಸೇಡಂ ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ನುರಿತ ತಜ್ಞರಿಂದ ತಪಾಸಣೆ ಜೊತೆಗೆ ಶ್ರವಣ ಸಾಧನೆ ವಿತರಣೆ ನೆರವೇರಿಸಲಾಗುವುದು ಎಂದು ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗದ ಪ್ರಮುಖರು ತಿಳಿಸಿದ್ದಾರೆ.
ಈಗಾಗಲೇ ನೊಂದಣಿಯಾದ 24 ಮಂದಿ ಅಂದು ಏ.20 ಮಧ್ಯಾಹ್ನ 1 ಗಂಟೆಗೆ ಶ್ರೀ ಕೊತ್ತಲ ಬಸವೇಶ್ವರ ದೇವಾಲಯದಲ್ಲಿ ಹಾಜರಿರಬೇಕೆಂದು ಬಳಗ ಮನವಿ ಮಾಡಿಕೊಂಡಿದೆ.
ಬಡವರ ಹಾಗೂ ಶೋಷಿತರ ಆಶಾಕಿರಣವಾಗಿರುವ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಈ ಮಹಾತ್ಕಾರ್ಯ ಕೈಗೊಳ್ಳಲಾಗಿದೆ ಎಂದು ಅಭಿಮಾನಿ ಬಳಗದವರು ತಿಳಿಸಿದ್ದಾರೆ.
ಏಪ್ರಿಲ್ 20 ರಂದು ತಪ್ಪದೆ ಶ್ರವಣ ಸಾಧನ ಅವಶ್ಯಕತೆ ಇರುವ ಹಾಗೂ ನೊಂದಣಿಯಾದ ಅಭ್ಯರ್ಥಿಗಳು ಆಗಮಿಸಿ ಡಾ.ಶರಣಪ್ರಕಾಶ ಪಾಟೀಲ ಅಭಿಮಾನಿ ಬಳಗ ಕೈಗೊಳ್ಳುವ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಕೋರಿದ್ದಾರೆ.
