ಡಾ.ಬಿ.ಆರ್.ಅಂಬೇಡ್ಕರ್ ವಿಶೇಷ ಉಪನ್ಯಾಸ
ಡಾ.ಬಿ.ಆರ್.ಅಂಬೇಡ್ಕರ್ ವಿಶೇಷ ಉಪನ್ಯಾಸ 17 ಕ್ಕೆ
ಚಿಂಚೋಳಿ:ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರುಚಕೋರ ಸಾಹಿತ್ಯ ವೇದಿಕೆ ಕಲಬುರಗಿ ಜಿಲ್ಲೆ ಮತ್ತು
ಕನ್ನಡ ವಿಭಾಗ,ಸರಕಾರಿ ಪ್ರಥಮ ದರ್ಜೆ ಕಾಲೇಜು,ಚಿಂಚೋಳಿ, ಕಲಬುರಗಿ ಜಿಲ್ಲೆ ಸಹಯೋಗದಲ್ಲಿ
ಡಾ.ಬಿ.ಆರ್.ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ
ದಿನಾಂಕ: ೧೭-೦೪-೨೦೨೬ ಶುಕ್ರವಾರ ಬೆಳಗ್ಗೆ: ೧೦-೩೦ ಗಂಟೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜು,ಚಿಂಚೋಳಿ ಆವರಣದಲ್ಲಿ ಜರುಗಲಿದೆ ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ಸಲಹಾ ಸಮಿತಿ ಸದಸ್ಯರಾದ ಡಾ.ಜಯದೇವಿ ಗಾಯಕವಾಡ ಆಶಯ ನುಡಿ ಆಡಲಿದ್ದಾರೆ.
ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರೊ. ಬಸವರಾಜ ಎಂ. ಕೊನೇರಿವಹಿಸುವರು.ಶಿಕ್ಷಣ ಸಂಯೋಜಕರಾದ ಶ್ರೀ ಅಶೋಕ ಹೂವಿನಬಾವಿ ವಿಶೇಷ ಉಪನ್ಯಾಸ ನೀಡುವರು
ಡಾ.ಚಂದ್ರಕಲಾ ಬಿದರಿ, ಸದಸ್ಯರು,ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು,ಡಾ.ಸಿದ್ಧರಾಮ ಹೊನ್ಕಲ್ ಸದಸ್ಯರು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು,
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಲ್ಲಿಕಾರ್ಜುನ ಪಾಲಾಮೂರ,ಹಿರಿಯ ಸಾಹಿತಿ
ಶ್ರೀ ಬಸವರಾಜ ಐನೋಳಿ, ಶ್ರೀ ಮಾರುತಿ ಗಂಜಗೇರಿ,ಹೋರಾಟಗಾರರು,ಚಿಂಚೋಳಿ ಭಾಗವಹಿಸುವರೆಂದು ಚಕೋರ ವೇದಿಕೆ ಜಿಲ್ಲಾ ಸಂಚಾಲಕ ಡಾ.ಗವಿಸಿದ್ಧಪ್ಪ ಪಾಟೀಲ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.
ಸಿರಿಗನ್ನಡ ವೇದಿಕೆಯ ಸಾಹಿತ್ಯ ಸಮಾಗಮ-೧೦
ಸಾಹಿತಿ ಜ್ಯೋತಿ ಬಮ್ಮಾ ಬದುಕು- ಬರಹ ಉಪನ್ಯಾಸ
ಚಿಂಚೋಳಿ: ಜಿಲ್ಲಾ ಸಿರಿಗನ್ನಡ ವೇದಿಕೆ ಮತ್ತು ಸಾಕ್ಷಿ ಪ್ರತಿಷ್ಠಾನ ಸಹಯೋಗದಲ್ಲಿ ಸಾಹಿತಿ ಶ್ರೀಮತಿ ಜ್ಯೋತಿ ಬಮ್ಮಾ ಅವರ ಬದುಕು- ಬರಹ ಸಾಹಿತ್ಯ ಸಮಾಗಮ- ೧೦ ಉಪನ್ಯಾಸ ಮಾಲಿಕೆಯನ್ನು ಮಹಿಳಾ ಸಾಹಿತಿ ಡಾ.ಜಯದೇವಿ ಗಾಯಕವಾಡ ಉದ್ಘಾಟಿಸುವರು,ಕವಿ ರೇವಣಸಿದ್ಧಪ್ಪ ದುಕಾನ ಉಪನ್ಯಾಸ ನೀಡುವರು.ಪ್ರೊ. ಮಲ್ಲಿಕಾರ್ಜುನ ಪಾಲಾಮೂರ ಮತ್ತು ಬಸವರಾಜ ಐನೋಳಿ ,ಜ್ಯೋತಿ ಬಮ್ಮಾ ಉಪಸ್ಥಿತಿ ಇರುವರು ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಅಧ್ಯಕ್ಷತೆಯಲ್ಲಿ ಹಾರಕೂಡ ಶ್ರೀ ಚನ್ನಬಸವೇಶ್ವರ ಪದವಿ ಕಾಲೇಜಿನಲ್ಲಿ ೧೭-೦೪-೨೦೨೬ ರಂದು ಮಧ್ಯಾಹ್ನ ೧೨ ಗಂಟೆಗೆ ಜರುಗಲಿದೆ ಎಂದು ಸಿರಿಗನ್ನಡ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧಪ್ಪ ಹೊಸಮನಿ ಮತ್ತು ಡಾ.ಶೀಲಾ ದೇವಿ ಬಿರಾದಾರ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
