ಜ್ಞಾನ ವೃದ್ದಿಗೆ ಪುಸ್ತಕ ಪೂರಕ - ಪವನ್ ಶಿರವಾಳಕರ್

ಜ್ಞಾನ ವೃದ್ದಿಗೆ ಪುಸ್ತಕ ಪೂರಕ - ಪವನ್ ಶಿರವಾಳಕರ್

ಜ್ಞಾನ ವೃದ್ದಿಗೆ ಪುಸ್ತಕ ಪೂರಕ - ಪವನ್ ಶಿರವಾಳಕರ್ 

ಶಹಪುರ : ಮನುಷ್ಯನ ಜ್ಞಾನ ವೃದ್ದಿಗೆ ಪುಸ್ತಕಗಳು ಅತ್ಯಂತ ಪೂರಕವಾಗಿವೆ ಅಲ್ಲದೆ ಪ್ರಮುಖ ಸಾಧನಗಳಾಗಿವೆ ಎಂದು ಪವನ್ ಶಿರವಾಳಕರ್ ಹೇಳಿದರು 

ಸಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ವಿಶ್ವ ಪುಸ್ತಕ ದಿನಾಚರಣೆ ಪ್ರಯುಕ್ತ "ಮೊಬೈಲ್ ಬಿಡಿ ಪುಸ್ತಕ ಹಿಡಿ" ಎಂಬ ಘೋಷವಾಗಿದೊಂದಿಗೆ ಹಮ್ಮಿಕೊಂಡಿರುವ ವಿಶೇಷ ಅಭಿಯಾನದಲ್ಲಿ ಭಾಗವಹಿಸಿ ಮಾತನಾಡಿ ಪುಸ್ತಕ ಓದುವುದರಿಂದ ಸಾಮಾನ್ಯ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ವ್ಯಕ್ತಿಯ ಗುಣ ಮತ್ತು ಚಾರಿತ್ರ್ಯ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ನುಡಿದರು.

ಶಹಾಪುರ ಪಟ್ಟಣದ ಸಾರ್ವಜನಿಕ ಸ್ಥಳಗಳಾದ ಹೊಸ ಬಸ್ ನಿಲ್ದಾಣ, ಬ್ಯಾಂಕ್,ಪೊಲೀಸ್ ಠಾಣೆ, ಹೋಟೆಲ್ ಹಾಗೂ ಶಾಲಾ ಕಾಲೇಜುಗಳಲ್ಲಿ ಉಚಿತ ಪುಸ್ತಕಗಳನ್ನು ನೀಡಿ, ಓದುವುದನ್ನು ಜಾಗೃತಿ ಮೂಡಿಸಲಾಯಿತು 

ಈ ಸಂದರ್ಭದಲ್ಲಿ ಟ್ರಸ್ಟ ಅಧ್ಯಕ್ಷಬಸವರಾಜ ಶಿಣ್ಣೂರ,ವೆಂಕಟೇಶ್ ಬೆನಕನಳ್ಳಿ, ಮಡಿವಾಳಪ್ಪ ಹೆಗ್ಗಣದೊಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,ಈ ಸಂದರ್ಭದಲ್ಲಿ ಸುಮಾರು 250 ಕ್ಕೂ ಹೆಚ್ಚು ಮೌಲ್ಯಯುತ ಪುಸ್ತಕಗಳನ್ನು ಉಚಿತವಾಗಿ ನೀಡಿ ಪುಸ್ತಕ ಪ್ರೇಮ ಮೆರೆಯಲಾಯಿತು.