ಜನ ವಿರೋಧಿ ಬಜೆಟ್ - ತಿರುಪತಿ ಹತ್ತಿಕಟಗಿ
ಜನ ವಿರೋಧಿ ಬಜೆಟ್ - ತಿರುಪತಿ ಹತ್ತಿಕಟಗಿ
ಶಹಾಪುರ : ಈ ಬಾರಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್,ಜನ ವಿರೋಧಿ ಬಜೆಟ್ ಆಗಿದೆ ಎಂದು ಬಿಜೆಪಿ ಯುವ ಮುಖಂಡ ತಿರುಪತಿ ಹತ್ತಿಕಟಗಿ ಟೀಕಿಸಿದ್ದಾರೆ.
ಅಹಿಂದ್ ಹೆಸರಿನಲ್ಲಿ ರಾಜ್ಯದ ಚುಕ್ಕಾಣಿ ಹಿಡಿದು ಹಿಂದುಳಿದವರಿಗೆ,ದಲಿತರಿಗೆ ನಿರಾಸೆ ಮೂಡಿಸಿದ್ದಲ್ಲದೆ.ಈ ಬಾರಿ ಜನಸಾಮಾನ್ಯರಿಗೆ ಸಾಲದ ಹೊರೆಯನ್ನು ಹೊರಿಸಿದೆ ಎಂದು ಖಾರವಾಗಿ ನುಡಿದರು.
ಕಲ್ಯಾಣ ಕರ್ನಾಟಕದ ಅತಿ ಹಿಂದುಳಿದ ಜಿಲ್ಲೆಯಾದ ಯಾದಗಿರಿ ಜಿಲ್ಲೆಗೆ ಅನ್ಯಾಯವಾಗಿದೆ,ಹೊಸ ತಲೆಮಾರಿನ ಯುವಕರಿಗೆ ಉದ್ಯೋಗ ನೀಡುವಲ್ಲಿ ಸಂಪೂರ್ಣ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ದೂರಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಡೆಗಸಿದ್ದು ಅಲ್ಲದೆ,ಶಾಶ್ವತ ನೀರಾವರಿ ಯೋಜನೆಗಳ ನಿರ್ಲಕ್ಷೆವಹಿಸಿ,ಈ ಭಾಗದ ಜನರಿಗೆ ಅಸಮಾಧಾನ ಮೂಡಿಸಿದೆ, ಸಂಪೂರ್ಣ ಇದು ಜನವಿರೋಧಿ ಬಜೆಟ್ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ನುಡಿದರು.
