ಶ್ರೀಶೈಲಕ್ಕೆ ಸಗರ ಭಕ್ತರ ಪಾದಯಾತ್ರೆ
ಶ್ರೀಶೈಲಕ್ಕೆ ಸಗರ ಭಕ್ತರ ಪಾದಯಾತ್ರೆ.
ಶಹಪುರ : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಗೆ ತಾಲೂಕಿನ ಸಗರ ಗ್ರಾಮದ ಭಕ್ತರಿಂದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ,ಇದು ದ್ವಿತೀಯ ವರ್ಷದ ಪಾದಯಾತ್ರೆಯಾಗಿದ್ದು ಸಹಸ್ರಾರು ಭಕ್ತರು ಇದರಲ್ಲಿ ಪಾಲ್ಗೊಂಡಿದ್ದರು.
ನೂರಾರು ಸಂಖ್ಯೆಯ ಭಕ್ತರು ಶ್ರೀ ಕರಬಸವೇಶ್ವರ ಭಜನಾ ಮಂಡಳಿಯಿಂದ ಸುಮಾರು 15 ದಿನಗಳ ಕಾಲ ಪಾದಯಾತ್ರೆ ಕೈಗೊಂಡರು,ಮಾರ್ಚ್ 7 ರಿಂದ ಪ್ರಾರಂಭವಾದ ಈ ಪಾದಯಾತ್ರೆ ಐಕೂರು,ಮದರಕಲ್ಲ, ರಾಯಚೂರು,ಶಾಂತನಗರ, ಆತ್ಮಮಕೂರು,ವೆಂಕಟಪುರ,ಬೆಟ್ಟ ಗುಡ್ಡಗಳ ಮಧ್ಯೆ ಕಠಿಣವಾದ ನಡಿಗೆಯ ಮೂಲಕ ಮಾರ್ಚ್ 19 ರಂದು ಶ್ರೀಶೈಲಕ್ಕೆ ತಲುಪುವರು.
ಪ್ರತಿ ದಿನ 50 ರಿಂದ 60 ಕಿಲೋಮೀಟರ್ ನಂತೆ ಕ್ರಮಿಸಿ ಒಟ್ಟು 500 ಕಿ.ಮೀ ಕ್ಕೂ ಹೆಚ್ಚು ನಡೆದು,ಶ್ರೀಶೈಲ ಪುಣ್ಯಕ್ಷೇತ್ರ ತಲುಪಿ ಶ್ರೀಶೈಲ ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ಭವ್ಯರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ಆಯಾಸವೆಲ್ಲ ಕರಗಿ,ದಣಿದ ದೇಹಕ್ಕೆ ನವ ಚೈತನ್ಯ ಉಂಟಾಗಿ,ಮನಸ್ಸಿಗೆ ಖುಷಿ ಮತ್ತು ನೆಮ್ಮದಿ ದೊರಕುತ್ತದೆ ಎಂದು ಭಕ್ತಾದಿ ಮಲ್ಲಿಕಾರ್ಜುನ ಕೊಬ್ರಿ ತಮ್ಮ ಅನುಭವವನ್ನು ಹಂಚಿಕೊಂಡರು.
ಈ ಪಾದಯಾತ್ರೆ ಸಗರ ವಕ್ಕಲಗೇರಿ ಹಿರೇಮಠದ ಪರಮಪೂಜ್ಯ ಮರುಳ ಮಹಾಂತ ಶಿವಾಚಾರ್ಯರ ನೇತೃತ್ವದಲ್ಲಿ ಜರುಗಲಿದ್ದು,ಈ ಪಾದಯಾತ್ರೆಗೆ ನಗರದ ಖ್ಯಾತ ಮಕ್ಕಳ ವೈದ್ಯರಾದ ಡಾ.ಸುದತ್ತ ದರ್ಶನಾಪೂರ ಚಾಲನೆ ನೀಡಿದರು,ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಅಶೋಕ್ ಕೂಡ್ಲೂರು,ಅಮೀನ ರೆಡ್ಡಿ ಮಲ್ಲೇದ,ಸಂಗಮೇಶ್ ಕನಗುಂಡ,ಸೇರಿದಂತೆ ನೂರಾರು ಭಕ್ತರು ಪಾಲ್ಗೊಂಡಿದ್ದರು.
